Get Updates
Get notified of breaking news, exclusive insights, and must-see stories!

ಜಲ ವಿವಾದಗಳ ಬಗ್ಗೆ ಸರ್ವಪಕ್ಷ ಸಭೆ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ಮಾರ್ಚ್ 18: ಅಂತರ್‌ರಾಜ್ಯ ಜಲ ವಿವಾದಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿಧಾನಮಂಡಲದ ಉಭಯ ನಾಯಕರು, ಕಾನೂನು ತಜ್ಞರು ಹಾಗೂ ಜಲ ಸಂಪನ್ಮೂಲ ಇಲಾಖೆಯ ಮಾಜಿ ಸಚಿವರುಗಳ ಸಭೆಯ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

"2011ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ, ಅದು ಮುಗಿಯುವವರೆಗೆ ನ್ಯಾಯ ಮಂಡಳಿ ನೀಡಿರುವ ತೀರ್ಪು ಕುರಿತು ನೋಟಿಫಿಕೇಷನ್ ಹೊರಡಿಸಬಾರದು ಎಂದು ಹೇಳಿತ್ತು".

"ಇದಾಗಿ ಹನ್ನೊಂದು ವರ್ಷ ಕಳೆದಿದೆ, ಈವರೆಗೆ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದೆರೆಡು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದದ್ದು ಬಿಟ್ಟರೆ, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಒತ್ತಡ ಹಾಕಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕಿತ್ತು," ಎಂದರು.

Opposition Leader Siddaramaiah Reaction About All-party Meeting On Mekedatu Dam Project

"ಕೂಡಲೇ ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕೊಂಡೊಯ್ಯುವ ಮೂಲಕ ಪ್ರಧಾನಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ನಾವು ಇಂದಿನ ಸಭೆಯಲ್ಲಿ ಹೇಳಿದ್ದೇವೆ. ಸರ್ಕಾರ ನಮ್ಮ ನಿಲುವನ್ನು ಒಪ್ಪಿದೆ," ಎಂದು ಸಿದ್ದರಾಮಯ್ಯ ತಿಳಿಸಿದರು.

"ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಫೆಬ್ರವರಿ 16, 2018ರಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಒಂದು ಸಾಮಾನ್ಯ ವರ್ಷದಲ್ಲಿ ಬಿಳಿಗೊಂಡ್ಲುವಿನಿಂದ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ಇದೆ. ಇದನ್ನು ಹೊರತುಪಡಿಸಿ ತಮಿಳುನಾಡಿಗೆ ತಕರಾರು ಮಾಡಲು ಬೇರೆ ಯಾವ ಹಕ್ಕುಗಳು ಇಲ್ಲ. ಇನ್ನುಳಿದಂತೆ ಪರಿಸರ ಅನುಮತಿ ಪತ್ರ ಪಡೆಯಬೇಕು, ಕಾವೇರು ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಂಗೀಕಾರ ಆಗಬೇಕು".

Opposition Leader Siddaramaiah Reaction About All-party Meeting On Mekedatu Dam Project

ಈಗಾಗಲೇ ಐದು ಸಭೆಗಳು ನಡೆದಿದ್ದರೂ, ನನ್ನ ಪ್ರಕಾರ ಮೇಕೆದಾಟು ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಆದ್ದರಿಂದ ತಕ್ಷಣ ಪರಿಸರ ಅನುಮತಿ ಪತ್ರ ಪಡೆಯಬೇಕು ಎಂದು ನಾನು, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಮುಂತಾದವರೆಲ್ಲ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ.

"ಕಾವೇರಿ ನಮ್ಮ ನೀರು. ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದು. ಹೊಳೆ ನೀರಿಗೆ ದೊಣ್ಣೆನಾಯಕನ್ನು ಕೇಳಬೇಕಾ? ಇದಕ್ಕೆ ತಮಿಳುನಾಡಿನ ಅಪ್ಪಣೆ ಏಕೆ ಬೇಕು?," ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಹಾದಾಯಿ ಯೋಜನೆಗೆ ಪರಿಸರ ಅನುಮತಿ ಪತ್ರ ಬೇಕು. ಕುಡಿಯುವ ನೀರಿನ ಯೋಜನೆಗೆ ಪರಿಸರ ಅನುಮತಿ ಬೇಡ ಎಂದು ಹಿಂದೆ ಹೇಳಿದ್ದರು. ಈಗ ಬೇಕು ಅಂದರೆ ಅನುಮತಿ ಪತ್ರ ತಗೊಳ್ಳಬೇಕಾಗುತ್ತದೆ. ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಹಾಗಾಗಿ ತಕ್ಷಣ ಅನುಮತಿ ಪತ್ರ ಪಡೆಯಿರಿ ಎಂದು ಹೇಳಿದ್ದೇವೆ. ಡಬ್ಬಲ್ ಇಂಜಿನ್ ಸರ್ಕಾರ ಇದೆ ಪಡೆಯಲಿ ಎಂದರು.

Opposition Leader Siddaramaiah Reaction About All-party Meeting On Mekedatu Dam Project

"ನದಿಗಳ ಜೋಡಣೆ ವಿಷಯಕ್ಕೆ ವಿರೋಧ ವ್ಯಕ್ತಪಡಿಸಲು ಹೇಳಿದ್ದೇವೆ. ರಾಜ್ಯಕ್ಕೆ ಎಷ್ಟು ಪ್ರಮಾಣದ ನೀರು ಹಂಚಿಕೆಯಾಗುತ್ತದೆ ಗೊತ್ತಿಲ್ಲ, ಬಜೆಟ್‌ನಲ್ಲಿ ಯೋಜನೆ ಘೋಷಣೆಗೆ ಮೊದಲು ರಾಜ್ಯ ಸರ್ಕಾರವನ್ನು ಕೇಳಿಲ್ಲ. ಅದಕ್ಕೆ ಸರ್ಕಾರ ಈಗಾಗಲೇ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದೆ. ಇಂದಿನ ಸಭೆಯಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನದಿಗಳ ಜೋಡಣೆಯಿಂದ ರಾಜ್ಯಕ್ಕೆ ಭಾರಿ ಅನ್ಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ವಿನಾಕಾರಣ ಮೊಕದ್ದಮೆ ದಾಖಲಿಸಿದ್ದೀರಿ, ನಾವು ಜನರ ಪರವಾಗಿ ಹೋರಾಟ ಮಾಡಿದ್ದು. ಬಿಜೆಪಿಯವರು ಸಭೆ ಮಾಡಿದ್ರು ಅವರ ಮೇಲೆ ಯಾವ ಕೇಸ್ ಹಾಕಿಲ್ಲ, ನಮ್ಮ ಮೇಲೆ ಮಾತ್ರ ಯಾಕೆ ಎಂದು ಕೇಳಿದ್ದೇವೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬೇಡಿ, ನಮ್ಮ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ತಗೊಳ್ಳಿ ಎಂದು ಹೇಳಿದ್ದೇವೆ. ಸರ್ಕಾರ ನೋಡುತ್ತೇವೆ ಎಂಬ ಉತ್ತರ ನೀಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Recommended Video

      China ಹತ್ರ ಇರೋ ಹೊಸ ಹಸ್ತ್ರ ಎಂಥದ್ದು ಗೊತ್ತಾ!! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+