Get Updates
Get notified of breaking news, exclusive insights, and must-see stories!

ಬಿಡಿಎ ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ನಿರ್ಧಾರ

ಬಿಡಿಎ ಸ್ವಾಮ್ಯದ ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ನಿರ್ಧಾರ. ವಿವಿಧ ಬಡಾವಣೆಗಳಲ್ಲಿರುವ ಮೂಲೆ ನಿವೇಶನಗಳು.

ಬೆಂಗಳೂರು, ಆಗಸ್ಟ್ 24: ವಿವಿಧ ಬಡಾವಣೆಗಳಲ್ಲಿ ಖಾಲಿ ಇರುವ ತನ್ನ ಸ್ವಾಮ್ಯದ ಮೂಲೆ ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಮುಂದಾಗಿದೆ. ಈ ಹಿಂದೆ ಆನ್ ಲೈನ್ ನಲ್ಲಿ ಈ ಮೂಲೆ ನಿವೇಶನಗಳನ್ನು ಮಾರಾಟ ಮಾಡಲು ಪ್ರಯತ್ನಿಸಲಾಗಿತ್ತು.

ಆದರೆ, ಆನ್ ಲೈನ್ ಹರಾಜಿಗೆ ಜನರು ನೀರಸ ಪ್ರತಿಕ್ರಿಯೆ ನೀಡಿದ್ದರಿಂದಾಗಿ ಇದೀಗ ಬಹಿರಂಗ ಹರಾಜಿನ ಮೂಲಕ ಈ ಸೈಟುಗಳ ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

Open Auction for BDA corner sites in Benglauru

ಈ ಬಗ್ಗೆ ವಿವರಣೆ ನೀಡಿದ ಬಿಡಿಎ ಕಾರ್ಯದರ್ಶಿ ಬಸವರಾಜು, ''ಬಹಿರಂಗ ಹರಾಜು ಪ್ರಕ್ರಿಯೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು'' ಎಂದರು.

ಅವರ ಪ್ರಕಾರ, ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಅಪನಗದೀಕರಣದಿಂದಾಗಿ, ಮೂಲೆ ನಿವೇಶನಗಳ ಮಾರಾಟ ಗಣನೀಯ ಮಟ್ಟದಲ್ಲಿ ಕುಸಿದಿದೆ. ಇದಕ್ಕೆ ಹೆಚ್ಚಿನ ಬೆಲೆ ಇರುವುದೇ ಕಾರಣ. ಅಪನಗದೀಕರಣಕ್ಕೂ ಮುಂಚೆ ಮೂಲೆ ನಿವೇಶನಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದರು. ಈಗ, ಅದು ಕುಸಿದಿದೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ, ಇತರ ನಿವೇಶನಗಳಿಗಿಂತ ಶೇ. 20ರಷ್ಟು ಹೆಚ್ಚು ಬೆಲೆಗಳನ್ನು ಮೂಲೆ ನಿವೇಶನಗಳು ಹೊಂದಿರುತ್ತವೆ ಎಂದು ಅವರು ತಿಳಿಸಿದರು.

ಎಲ್ಲೆಲ್ಲಿ ನಿವೇಶನ?
ಕೆಂಗೇರಿ, ಜ್ಞಾನ ಭಾರತಿ, ವಿಶ್ವಭಾರತಿ, ಅಂಜನಾಪುರ, ಎಚ್ ಬಿಆರ್ ಲೇಔಟ್, ಒಎಂಬಿಆರ್ ಲೇಔಟ್ ಮೊದಲಾದ ಕಡೆಗಳಲ್ಲಿರುವ ಮೂಲೆ ನಿವೇಶನಗಳು ಹರಾಜುಗೊಳ್ಳಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+