ರಾಜ್ಯದಲ್ಲಿ ಮೊದಲಗೆ ಬಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

ಬೆಂಗಳೂರು, ಏಪ್ರಿಲ್ 19: ರಾಜ್ಯದಲ್ಲಿ ಮೊದಲ ಸಲ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ಕಳೆದ ಒಂದು ವಾರದಿಂದ 34, 38, 17, 25 ಹೀಗೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೆ ಇತ್ತು. ಆದರೆ, ಇಂದು ಕೇವಲ 4 ಜನ ಸೋಂಕಿತರು ಮಾತ್ರ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹೌದು, ನಿನ್ನೆ ಸಂಜೆಯಿಂದ ಈವರೆಗೆ ಕೇವಲ 4 ಹೊಸ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Only 4 New Cases Found In Karnataka Today

ಈ ನಾಲ್ಕು ಕೇಸ್‌ಗಳು ದಾಖಲಾಗಿರುವುದು ಮೈಸೂರಿನಲ್ಲಿ ಎನ್ನುವುದು ಗಮನಾರ್ಹ. ಇಬ್ಬರು ಮೈಸೂರು ನಗರ ಹಾಗು ಮತ್ತಿಬ್ಬರು ನಂಜನಗೂಡು ಮೂಲದವರು. ಮೈಸೂರು ನಗರದ ನಿವಾಸಿಗಳು ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದರೆ, ನಂಜನಗೂಡಿನ ಇಬ್ಬರು ಈ ಹಿಂದಿನ ಸೋಂಕಿತರ ಜೊತೆಯಲ್ಲಿ ಸಂಪರ್ಕ ಹೊಂದಿದ್ದವರು.

ಸದ್ಯ, ಕರ್ನಾಟಕದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಕ್ಯೆ 388ಕ್ಕೇರಿದೆ. ಇದರಲ್ಲಿ ಸೋಂಕಿತರಲ್ಲಿ 105 ಜನರು ಗುಣಮುಖರಾಗಿದ್ದಾರೆ. 14 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.

ಉಳಿದ 269ರಲ್ಲಿ ಗರ್ಭಿಣಿ ಸೇರಿದಂತೆ 266 ಜನರ ಆರೋಗ್ಯ ಸ್ಥಿರ, 3 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+