ಅಕ್ಟೋಬರ್‌ನಲ್ಲಿ ಈರುಳ್ಳಿ ಬೆಲೆ 100 ರೂಪಾಯಿ!

ಬೆಂಗಳೂರು, ಜೂ.19: ಈರುಳ್ಳಿ ಬೆಲೆ ಮತ್ತೊಮ್ಮೆ ಏರಿಕೆಯಾಗಲಿದ್ದು ಅಕ್ಟೋಬರ್‌ ವೇಳೆಗೆ ಒಂದುಕೆ.ಜಿ ಈರುಳ್ಳಿ ಬೆಲೆ ನೂರು ರೂಪಾಯಿಗೆ ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.

ದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 100 ರೂಪಾಯಿ ಗಡಿ ದಾಟಿತ್ತು. ಈ ಬಾರಿಯೂ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಲಿದೆ ಎನ್ನುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಈರುಳ್ಳಿ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಇದೀಗ ಕನಿಷ್ಠ ರಫ್ತು ದರ (ಎಮ್‌ಇಪಿ) ನಿಗದಿ ಮಾಡಿದೆ. ಈ ದರ ಪ್ರಕಾರ ಪ್ರತಿ ಟನ್‌ ಈರುಳ್ಳಿಗೆ 300 ಡಾಲರ್‌ (ಅಂದಾಜು 18 ಸಾವಿರ ರೂ) ನಿಗದಿ ಮಾಡಿದೆ. ಒಂದು ವೇಳೆ ರಫ್ತು ಮಾಡುವ ವೇಳೆ ಈ ದರ ಸಿಗದಿದ್ದರೆ, ಈರುಳ್ಳಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರಬಹುದು ಎನ್ನುವ ಲೆಕ್ಕಾಚಾರ ಸರ್ಕಾರದ್ದು.[ಕಳೆದ ಬಾರಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು ಹೇಗೆ?]

ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಈರುಳ್ಳಿ ಬೆಲೆ ಈ ವರ್ಷವು ಜಾಸ್ತಿಯಾಗಲಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಲ್ಲಿ ಈರುಳ್ಳಿಯನ್ನು ಹೆಚ್ಚು ಬೆಳೆಯಲಾಗುತ್ತಿದ್ದು 2013-14ರಲ್ಲಿ 192 ಟನ್‌ ಈರುಳ್ಳಿ ಉತ್ಪಾದನೆಯಾಗಿತ್ತು.

onion price

ಮಾರ್ಚ್ ನಿಂದ ಮೇವರೆಗೆ ಬೇಸಿಗೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಬೇಸಿಗೆ ಬೆಳೆ ಅಥವಾ ರಬಿ ಕ್ರಾಪ್ ಹಾಳಾಗಿದೆ. ದೇಶದ ಶೇ.50ರಷ್ಟು ಭಾಗ ಈರುಳ್ಳಿಯ ಬೇಸಿಗೆ ಬೆಳೆಯನ್ನು ಅವಲಂಬಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈರುಳ್ಳಿ ಬಿತ್ತನೆ ಬೀಜದ ಬೆಲೆ ಶೇ.400 ರಷ್ಟು ಏರಿಕೆಯಾಗಿದೆ. ಹೀಗಾಗಿ ದೇಶದಲ್ಲಿ ಬಹಳಷ್ಟು ಈರುಳ್ಳಿ ಬೆಳೆಯುವ ರೈತರು ಬೀಜ ಬಿತ್ತನೆಯನ್ನು ಮಾಡಿಲ್ಲ. ಜೊತೆಗೆ ಈಗ ಮಾನ್‌‌ಸೂನ್‌ ಅಭಾವದಿಂದಾಗಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಇರಾಕ್‌ನಲ್ಲಿ ನಡೆಯುತ್ತಿರುವ ಕಲಹದಿಂದಾಗಿ ಡಿಸೇಲ್‌ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಒಂದು ವೇಳೆ ಹೀಗೆ ಏನಾದರೂ ಆದಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಏರಲಿದೆ.[ಇರಾಕ್ ಮರಣಮೃದಂಗ: ಅಪಹೃತ 39 ಭಾರತೀಯರ ಹತ್ಯೆ?]

"ಕಳೆದ ಮೂರು ದಿನಗಳ ಹಿಂದೆ 15 - 20 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ 25-30 ರೂಪಾಯಿಗೆ ತಲುಪಿದೆ. ಸದ್ಯದಲ್ಲೇ ಬೆಲೆ ಹೆಚ್ಚಾಗಲಿದೆ. ಈರುಳ್ಳಿ ಬೆಳೆಯುವ ರಾಜ್ಯದಿಂದಲೇ ಸರಿಯಾಗಿ ಈರುಳ್ಳಿ ವಿತರಣೆ ಆಗುತ್ತಿಲ್ಲ"
ಅಬ್ದುಲ್‌ ಹಾಜಿಂ, ಕೆ.ಆರ್‌.ಮಾರುಕಟ್ಟೆ ಈರುಳ್ಳಿ ವಾಪಾರಸ್ಥರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+