ಒನ್ಇಂಡಿಯಾದಿಂದ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ

ಎಲ್ಲ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಒನ್ಇಂಡಿಯಾ ವತಿಯಿಂದ ಮುಂಚಿತವಾಗಿ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹಾಗೂ ಕಲಾತ್ಮಕ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆ ಸವಿ ನೆನಪಿನಲ್ಲಿ ಒನ್ಇಂಡಿಯಾ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವಂತೆ ಪಾಲಕರು/ ಶಿಕ್ಷಕರು ಪ್ರೇರೇಪಣೆ ನೀಡಿ ಕಾರ್ಯಕ್ರಮವನ್ನು ಅದ್ದೂರಿಯಾಗಿಸಬೇಕೆಂದು ಕೋರುತ್ತಿದ್ದೇವೆ!

childrensday

ಸ್ಪರ್ಧೆಯ ವಿವರಗಳು:

*ಗುಂಪು: ಎ- 1ರಿಂದ 5ನೇ ವರ್ಗದವರೆಗೆ, ಬಿ- 6ರಿಂದ 10ನೇ ವರ್ಗದವರೆಗೆ
*ಚಿತ್ರದ ವಿಷಯ:
1) ಗುಂಪು ಎ- ಯಾವುದೇ ಕಾರ್ಟೂನ್ ಪಾತ್ರ
2) ಗುಂಪು ಬಿ- ಕ್ಲೀನ್ ಇಂಡಿಯಾ (ಸ್ವಚ್ಛ ಭಾರತ್)
*ಸಲ್ಲಿಸಲು ಕೊನೆಯ ದಿನ: ನವೆಂಬರ್ 14
*ಚಿತ್ರದ ಗಾತ್ರ: ಎ4 ಗಾತ್ರದ ಕಾಗದಲ್ಲಿ ಚಿತ್ರ ಬಿಡಿಸಬೇಕು
*ಚಿತ್ರ ರಚನೆ ವಿಧಾನ: ಫ್ರೀಸ್ಟೈಲ್ (ಬಣ್ಣದ ಸುಣ್ಣಕಡ್ಡಿ, ವಾಟರ್ ಕಲರ್, ಮುಂತಾದವು)

ಚಿತ್ರ ರಚನೆ ಸಲ್ಲಿಸುವುದು:

ವಿದ್ಯಾರ್ಥಿಗಳು/ ಮಕ್ಕಳು ತಮ್ಮ ಚಿತ್ರ ರಚನೆಯನ್ನು ಆಯಾ ಶಾಲೆ ಹೆಸರು/ ನಗರ/ ವರ್ಗದ ವಿವರವನ್ನು #BalDiwas2014 ಹ್ಯಾಶ್ ಟ್ಯಾಗ್ ಬರೆದು ಕೆಳಗಿನ ಪುಟಗಳಲ್ಲಿ ಸಲ್ಲಿಸಬೇಕು.
ಫೇಸ್ ಬುಕ್ ಅಥವಾ ಗೂಗಲ್ ಪ್ಲಸ್
*ಅಲ್ಲದೆ, ಇಮೇಲ್: [email protected] ಇಲ್ಲಿಗೆ ಕೂಡ ಕಳುಹಿಸಬಹುದು.

ಪ್ರಶಸ್ತಿ:
1. ಪ್ರತಿ ವರ್ಗದಲ್ಲೂ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಒನ್ಇಂಡಿಯಾದಿಂದ ಪ್ರಮಾಣಪತ್ರ ನೀಡಲಾಗುವುದು.
2. ಮೊದಲ 10 ಸ್ಥಾನಗಳನ್ನು ಪಡೆದವರು ಒನ್ಇಂಡಿಯಾ ಲೇಖನಗಳಲ್ಲಿ ಪ್ರಕಟಿಸಲಾಗುವುದು ಮತ್ತು ಭಾಗವಹಿಸಿದ ಇತರರ ಜತೆ ಹಂಚಿಕೊಳ್ಳಲಾಗುವುದು.

ಪ್ರಕಟಣೆ: 18ನೇ ನವೆಂಬರ್ 2014

ವಿಷಯಗಳು: ಬಾಲ್ ದಿವಸ್ 2014, ಮಕ್ಕಳ ದಿನಾಚರಣೆ, ವಿದ್ಯಾರ್ಥಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+