ಮಹಿಳಾ ಪೊಲೀಸ್ ನಿಂದಿಸಿದ ಆರೋಪಿ ಅರೆಸ್ಟ್
ಬೆಂಗಳೂರು, ಡಿ. 12: ಮಹಿಳಾ ಪೊಲೀಸ್ ಪೇದೆಯನ್ನು ನಿಂದಿಸಿದ ಆರೋಪದ ಮೇಲೆ ಓರ್ವನನ್ನು ಬೆಂಗಳೂರು ಕೇಂದ್ರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿ ವಿನಯ್ ಎಂಬಾತ ಗುರುವಾರ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿ (100) ಗೆ ಕರೆ ಮಾಡಿದ್ದ. ಪೊಲೀಸರು ಕರೆ ಸ್ವೀಕರಿಸಿದಾಗ ಅಶ್ಲೀಲ ಶಬ್ದಗಳನ್ನು ಉಪಯೋಗಿಸಿ ಬಯ್ಯಲು ಆರಂಭಿಸಿದ. ಅಲ್ಲದೆ, ಓರ್ವ ಮಹಿಳಾ ಪೊಲೀಸ್ ಪೇದೆಯನ್ನು ನಿಂದಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಕರೆ ಬಂದ ಸಂಖ್ಯೆಯ ತನಿಖೆಗಿಳಿದ ಪೊಲೀಸರು ಆರೋಪಿ ವಿನಯ್‌ನನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ 354 ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಯುವತಿಯರ ರಕ್ಷಣೆ: ಕೋರಮಂಗಲದ ಫಸ್ಟ್ ಬ್ಲಾಕ್ ಪ್ರದೇಶದಲ್ಲಿ ವೇಶ್ಯಾವೃತ್ತಿ ನಡೆಯುತ್ತಿದ್ದ ಮನೆಯೊಂದರ ಮೇಲೆ ಕೋರಮಂಗಲ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದ್ದು, ಇವರು ಪಶ್ಚಿಮ ಬಂಗಾಳ ಮೂಲದವರು. ಇಬ್ಬರು ಪಿಂಪ್‌ಗಳನ್ನು ಬಂಧಿಸಲಾಗಿದ್ದು, ಗಿರಾಕಿಯಾಗಿ ಬಂದಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.












Click it and Unblock the Notifications