ಗೂಡ್ಸ್ ರೈಲಿನಲ್ಲಿ ಟಿಕ್‌ಟಾಕ್ ಮಾಡಲು ಹೋದ ಯುವಕ: ಮುಂದೇನಾಯ್ತು?
ಬೆಂಗಳೂರು, ಮೇ 14: ಯುವಜನತೆ ಟಿಕ್‌ಟಾಕ್‌ಗೆ ಅಡಿಕ್ಟ್ ಆಗಿದೆ. ಕೇವಲ ಟಿಕ್‌ಟಾಕ್‌ನಲ್ಲಿ ಅಭಿನಯ ಮಾತ್ರವಲ್ಲ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರೇ ಸಾಕಷ್ಟು ಮಂದಿ ಇದ್ದಾರೆ.
ಇಲ್ಲೊಬ್ಬ ವ್ಯಕ್ತಿ ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದಿಟ್ಟುಕೊಂಡ ಘಟನೆ ನಡೆದಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ 20 ವರ್ಷದ ಯುವಕನಿಗೆ ಎಲೆಕ್ಟ್ರಿಕ್ ವೈರ್ ತಾಗಿ ಶೇ,20 ರಷ್ಟು ಸುಟ್ಟ ಗಾಯಗಳಾಗಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾನೆ.

ಟಿಕ್ ಟಾಕ್ ವಿಡಿಯೋ ಮಾಡಲು ಪೋಸ್ ಕೊಡುತ್ತಿರುವ ವೇಳೆ ಟೈ ಟೆನ್ಸನ್ ವೈರ್ ಗೆ ತನ ದೇಹ ತಾಗಿ ಸುಟ್ಟ ಗಾಯಗಳೊಂದಿಗೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಸದ್ಯ ಅಪಾಯದಿಂದ ಪಾರಾಗಿದ್ದಾನೆ.
ಮೈಸೂರಿನಿಂದ ಗೂಡ್ಸ್ ರೈಲಿನ ಟಾಪ್ ನಲ್ಲಿ ಕುಳಿತು ಬಂದಿದ್ದ ಯುವಕ ಸಂಜೆ 6 ಗಂಟೆ ವೇಳೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣ ಪ್ರವೇಶಿಸಿದೆ.












Click it and Unblock the Notifications