ಬೆಂಗಳೂರು; ಓಲಾ, ಊಬರ್ ಟ್ಯಾಕ್ಸಿಗಳ ದರ ಏರಿಕೆ
ಬೆಂಗಳೂರು, ಫೆಬ್ರವರಿ 19; ಬೆಂಗಳೂರು ನಗರದಲ್ಲಿ ಓಲಾ, ಊಬರ್ ಸೇರಿದಂತೆ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳ ದರದಲ್ಲಿ ಏರಿಕೆಯಾಗಲಿದೆ. ಸಾರಿಗೆ ಇಲಾಖೆ ಕೆಲವೇ ದಿನಗಳಲ್ಲಿ ಹೊಸ ದರಗಳನ್ನು ಘೋಷಣೆ ಮಾಡಲಾಗಿದೆ.
ಸಾರಿಗೆ ಇಲಾಖೆಯ ಆಯುಕ್ತರು ಜನವರಿಯಲ್ಲಿ ಸಾರಿಗೆ ಇಲಾಖೆಗೆ ಸಿಟಿ ಟ್ಯಾಕ್ಸಿ, ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳ ದರಗಳನ್ನು ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಫೆಬ್ರವರಿ 1ರಿಂದ ಸಿಟಿ ಟ್ಯಾಕ್ಸಿಗಳ ದರಗಳಲ್ಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳ ದರಗಳನ್ನು ಹೆಚ್ಚಳ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ದರ ಹೆಚ್ಚಳವಾಗಲಿದೆ.

ಓಲಾ, ಊಬರ್ ಸೇರಿದಂತೆ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಸರ್ ಚಾರ್ಜ್ ಅನ್ನು ಮೂರು ಪಟ್ಟು ಹೆಚ್ಚಳ ಮಾಡಲು ಅವಕಾಶ ಸಿಗಲಿದೆ. ಇದರಿಂದಾಗಿ ಟ್ಯಾಕ್ಸಿಗಳ ದರ ದುಬಾರಿಯಾಗುವುದು ಖಚಿತವಾಗಿದೆ.
ಫೆಬ್ರವರಿ ಅಂತ್ಯದಲ್ಲಿ ಹೊಸ ದರಪಟ್ಟಿಯನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಾರ್ಚ್ 1ರಿಂದ ಜಾರಿಗೆ ಬರುವಂತೆ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳು ದರ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
2013ರಲ್ಲಿ ರಾಜ್ಯದಲ್ಲಿ ಸಿಟಿ ಟ್ಯಾಕ್ಸಿ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ದರಗಳನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿತ್ತು. ಎಲ್ಲಾ ನಗರ ಪ್ರದೇಶಗಳಿಗೂ ಹೊಸ ದರ ಅನ್ವಯವಾಗುತ್ತದೆ.
ಎಸಿ ರಹಿತ ಟ್ಯಾಕ್ಸಿಗಳಿಗೆ 4 ಕಿ. ಮೀ. ತನಕ ಕನಿಷ್ಠ ಪ್ರಯಾಣ ದರ 75ಕ್ಕೆ ಏರಿಕೆ ಮಾಡಲಾಗಿದೆ. ನಂತರದ ಪ್ರತಿ ಕಿ. ಮೀ.ಗೆ 18 ರೂ. ನಿಗದಿ ಮಾಡಲಾಗಿದೆ. ಎಸಿ ಸೌಲಭ್ಯ ಹೊಂದಿರುವ ಟ್ಯಾಕ್ಸಿಗಳಿಗೆ 4 ಕಿ. ಮೀ. ತನಕ ಕನಿಷ್ಠ ದರ 100 ರೂ., ನಂತರದ ಪ್ರತಿ ಕಿ. ಮೀ.ಗೆ 24 ರೂ. ದರವನ್ನು ನಿಗದಿ ಮಾಡಲಾಗಿದೆ.












Click it and Unblock the Notifications