Get Updates
Get notified of breaking news, exclusive insights, and must-see stories!

ನಯನ ಸಭಾಂಗಣದಲ್ಲಿ ಸಂಭ್ರಮಿಸಿದ 'ನೃತ್ಯ ಕಲಾ ಸಂಭ್ರಮ - 2022'

ಬೆಂಗಳೂರು ಡಿಸೆಂಬರ್ 26: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತುತ ಪಡಿಸಿದ ಮತ್ತು ಪ್ರಣವಾಂಜಲಿ ಸಂಸ್ಥೆ ಆಯೋಜಿಸಿದ 'ನೃತ್ಯ ಕಲಾ ಸಂಭ್ರಮ - 2022' ನಗರದ ಜೆ.ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಡಿಸೆಂಬರ್ 25ರಂದು ಕಿಕ್ಕಿರಿದ ಜನಸಾಗರದ ಮಧ್ಯೆ ನಡೆಯಿತು.

ವಿಧವಿಧವಾದ ನೃತ್ಯಗಳ ಸಮಾಗಮವು ನೋಡುಗರ ಮನ ಸೂರೆಗೊಂಡಿದ್ದು ವಿಶೇಷ. ಈಶ್ವರಿ ಕಲಾ ಸಂಸ್ಥೆಯಿಂದ ಮೂಡಿಬಂದ ಕಂಸವಧೆ ಯಕ್ಷಗಾನದಲ್ಲಿ ಕಂಸನ ಪಾತ್ರ ಮಾಡಿದ್ದ ಅನ್ನಪೂರ್ಣೇಶ್ವರಿ ಕಟೀಲ್ ರವರ ಪ್ರದರ್ಶನ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿತು.

ಮಡಿಕೇರಿಯ ಕುಶಾಲನಗರದಿಂದ ಆಗಮಿಸಿದ್ದ ಕುಂದಣ ನೃತ್ಯ ಸಂಸ್ಥೆಯ ಕಲಾವಿದರು ಗಣೇಶ ಕೌತ್ವಂ, ಶ್ಲೋಕ, ನರಸಿಂಹ ಕೌತ್ವಂ, ಕನಡ ತಿಲ್ಲಾನಗಳನ್ನೂ ಬಹಳ ಅದ್ಭುತವಾಗಿ ಪ್ರದರ್ಶಿಸಿದರು. ಕಾಳಿಕಾಂಭ ಫೈನ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ವಿದುಷಿ ಓಜಸ್ವಿನಿ ರವರು ಸಂಯೋಜಿಸಿದ್ದ ದೇವಿ ಸ್ತುತಿ ಹಾಗು ನರಸಿಂಹ ಕೌತ್ವಂ ಪ್ರದರ್ಶನ ನೆರೆದ ಕಲಾರಸಿಕರ ಮನಸೂರೆಗೊಂಡಿತು.

Nrutya Kala Sambhrama 2022 At Nayana Auditorium, Bengaluru

ಬೆಂಗಳೂರಿನ ಪದ್ಮಿನಿಪ್ರಿಯ ನೃತ್ಯ ಸಂಸ್ಥೆಯ ಕಲಾವಿದರು ಉಷಾ ಬಸಪ್ಪನವರು ನಿರ್ದೇಶಿಸಿದ್ದ ಶಿವನು ಭಿಕ್ಷೆಗೆ ಬಂದ, ಘಲ್ಲು ಘಲ್ಲೆನುತಾ ಗೆಜ್ಜೆ, ಜಕಣಕ್ಕ ಜಾನಪದ ನೃತ್ಯಗಳನ್ನು, ಹಿಮಗಿರಿ ತನಯೇ ಹೇಮಲತೆ ಹಾಗು ಏನಿಮಹಾನಂದವೇ ಭರತನಾಟ್ಯವನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ಬೆಂಗಳೂರಿನ ತಮೋಹ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ಗಾಯತ್ರಿ ಮೈಯ್ಯಾರವರ ಶಿಷ್ಯೆ ಹಾಗು ಮಗಳಾದ ಏಳು ವರ್ಷದ ಕುಮಾರಿ ಪಿ ಆಧ್ಯ ಮೈಯ್ಯ, ಪುಷ್ಪಾಂಜಲಿ, ಗಣೇಶ ಶ್ಲೋಕ ಹಾಗು ಪುರಂದರ ದಾಸರು ರಚಿಸಿರುವ ಕೃಷ್ಣನ ದೇವರನಾಮ ತತ್ ತತ ಧಿಮಿ ತತ್ ಸೇರಿದಂತೆ ಎಲ್ಲಾ ನೃತ್ಯಗಳನ್ನು ಸುಲಲಿತವಾಗಿ ನರ್ತಿಸಿ ಸಭಿಕರ ಮೆಚ್ಚುಗೆಗೆ ಪಾತ್ರಳಾದಳು.

ಪ್ರಣವಾಂಜಲಿ ಸಂಸ್ಥೆಯ ನೃತ್ಯ ಕಲಾವಿದರಾದ ಭಾವನ, ಕೃತಿ, ದೀಪಾಂಜಲಿ, ನಕ್ಷತ್ರ, ಸಾರಿಕಾ, ಶ್ರೀಹಿತ, ಸಾನ್ವಿ, ದೀಕ್ಷಾ, ಶ್ರೇಷ್ಠ, ಸೃಷ್ಟಿ, ಈಶಾನ, ರಮ್ಯಾ, ನಿಧಿಶ್ರೀ, ಅಧಿತಿ, ಅನನ್ಯ, ಅಮೃತ, ಪೂರ್ವಿ, ಪ್ರೇರಣಾ, ಕಶ್ವಿ, ಧನ್ಯ, ಧಾನ್ವಿ, ಜೈಸ್ವಿ, ಜ್ಞಾನ, ಹಿಮದೃತಿ, ರೀತನ್ಯ, ತನ್ಮಯಿ ಭಟ್, ಶ್ರಿಯಾ, ಹಾರಿಕ, ಸಿಂಚನ, ಸಿರಿ ಬಹಳ ಸುಂದರವಾಗಿ ಎಲ್ಲಾ ನೃತ್ಯಗಳನ್ನು ಪ್ರದಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

Nrutya Kala Sambhrama 2022 At Nayana Auditorium, Bengaluru

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿದುಷಿ ಉಷಾ ಬಸಪ್ಪನವರು ಮಾತನಾಡಿ, "ಉದಯೋನ್ಮುಖ ಕಲಾವಿದರಿಗೆ ಇಂತಹ ವೇದಿಕೆಗಳ ಅವಶ್ಯಕತೆ ಇದೆ, ಹೀಗೆ ಸಾಕಷ್ಟು ನೃತ್ಯ ಹಬ್ಬಗಳನ್ನು ಮಾಡಿ ಯುವ ಪ್ರತಿಭೆಗಳಿಗೆ ವೇದಿಕೆ ನೀಡಬೇಕಾಗಿ ಪ್ರಣವಾಂಜಲಿ ಸಂಸ್ಥೆಯನ್ನು ಕೋರುತ್ತೇನೆ ಮತ್ತು ಸಂಸ್ಥೆಯ ನಿರ್ದೇಶಕಿ ಪವಿತ್ರ ಪ್ರಶಾಂತ್ ರವರಿಗೆ ಶುಭವನ್ನು ಕೋರುತೇನೆ" ಎಂದು ಹೇಳಿದರು. ಸುಮಾರು 80 ಕಲಾವಿದರು ಪಾಲ್ಗೊಂಡಿದ್ದ ಈ ನೃತ್ಯ ಹಬ್ಬದಲ್ಲಿ ಎಲ್ಲಾ ಕಲಾವಿದರಿಗೂ ಪ್ರಶಸ್ತಿ ಪತ್ರವನ್ನು ಕೊಟ್ಟು ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+