• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಗೂಂಡಾ ಸರ್ಕಾರವನ್ನು ಕಿತ್ತೊಗೆಯಿರಿ: ನೌಹೀರಾ ಶೇಖ್‌

By Nayana
|

ಬೆಂಗಳೂರು, ಮೇ 4: ರಾಜ್ಯದಲ್ಲಿ ಪ್ರವರ್ದನಮಾನಕ್ಕೆ ಬರುತ್ತಿರುವ ಎಂಇಪಿ ಪಕ್ಷವನ್ನು ರಾಜಕೀಯವಾಗಿ ಮುಗಿಸಲು ಸರ್ಕಾರಿ ಪ್ರಯೋಜಕತ್ವದ ಹಿಂಸಾಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೂಂಡಾಗಿರಿ ಸರ್ಕಾರವನ್ನು ಕಿತ್ತು ಹಾಕಲು ಜನತೆ ಸಂಕಲ್ಪ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಗಂಭೀರ ಆರೋಪಿಸಿದ್ದಾರೆ.

ನಗರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸರ್ವಜ್ಞನಗರದ ವಿಧಾನಸಭಾ ಕ್ಷೇತ್ರದಲ್ಲಿ ಎಂಇಪಿ ರ್ಯಾಲಿ ಮೇಲೆ ಕೆಲವು ಸ್ಥಳೀಯ ಕಾಂಗ್ರೆಸ್ ಗೂಂಡಾಗಳು ಕಲ್ಲು ತೂರಾಟ ಮಾಡಿ, ಕಾರ್ಯಕರ್ತರ ಹಾಗೂ ಕೆಲವು ಖಾಸಗಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾ ಮತ್ತು ಓಬಿ ವ್ಯಾನ್ ದ್ವಂಸ ಮಾಡಿದ್ದಾರೆ.

ಎಂಇಪಿ ಅಧ್ಯಕ್ಷೆ ಸೇರಿ ಹಲವರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಗೆ ಯತ್ನ

20ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೆಟ್ಟುಬಿದ್ದಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ ಹೆಣ್ಣುಮಕ್ಕಳ ಮೇಲೆ ನಡುಬೀದಿಯಲ್ಲಿ ಅದು ಹಗಲು ಹೊತ್ತಿನಲ್ಲಿ ಕಲ್ಲು ಹೊಡಿತ್ತಾರೆಂದರೇ ಜನರ ರಕ್ಷಣೆ ಎಲ್ಲಿದೆ? ಗೂಂಡಾಗಿರಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರಕ್ಕೆ ನಾಚೀಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು.

ಎಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆಯೋ ಅದೇ ಸ್ಥಳದಿಂದ ಮತ್ತೆ ರೋಡ್ ಶೋ ನಡೆಸುತ್ತೇವೆ ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ಜಗ್ಗುವುದಿಲ್ಲ ಎಂದರು. ಈ ಕೃತ್ಯಕ್ಕೆ ಕಾರಣರಾದ ಸ್ಥಳೀಯ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು, ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಇತಂಹ ಘಟನೆಗಳನ್ನು ನೋಡಿದರೆ ರಾಜಕೀಯಕ್ಕೆ ಶುದ್ದ ಹಸ್ತರು, ಪ್ರಾಮಾಣಿಕರು ಬರಲಾಗದಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮುಕ್ತ ಮತ್ತು ನ್ಯಾಯಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನರ್ಸ್ ಜಯಲಕ್ಷ್ಮೀ ಗುಡುಗು : ಬೀದಿಯಲ್ಲಿ ಹೋಗುವ ಹೆಣ್ಣುಮಕ್ಕಳ, ಮುಗ್ಧರ ಮೇಲೆ ಹಲ್ಲೆ ನಡೆಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೇಳಿದಾರಾ? ಸಿದ್ದರಾಮಯ್ಯ ಸರ್ಕಾರಕ್ಕೆ ನಾಚೀಕೆಯಾಗಬೇಕು, ಈ ಕೂಡಲೇ ಅವರು ಇದಕ್ಕೆ ಉತ್ತರ ಕೊಡಬೇಕು ಇಂತಹ ಬೆದರಿಕೆಗೆ ಎಂಇಪಿ ಕಾರ್ಯಕರ್ತರು, ಮುಖಂಡರು ಹೆದರುವುದಿಲ್ಲ ಎಂದು ಸವಾಲ್ ಹಾಕಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All India Mahila Empowerment Party Chief Dr Nowhera Shaik has blamed that frustrated Congress party workers were made attempt to attack her on Thursday during campaign in Sarvajna nagar. She also said this goonda act of Congress should be ended in the state by defeating then in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more