• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿ

|

ಬೆಂಗಳೂರು, ಜೂನ್ 08 : ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಮೇ 19ರಿಂದಲೇ ಅನುಮತಿ ನೀಡಿದೆ. ರಾತ್ರಿಯ ಕರ್ಫ್ಯೂ ಅವಧಿಯಲ್ಲಿ ಸಹ ಬಸ್ ಸಂಚಾರ ಆರಂಭವಾಗಿದೆ.

   ನಿಜಕ್ಕೂ ಈ ಸಂದರ್ಭ ಯಾವ ಹೆಣ್ಣಿಗೂ ಬೇಡ | Meghana Raj

   ಬೆಂಗಳೂರು ನಗರದಲ್ಲಿ 15 ಪ್ರದೇಶಗಳಲ್ಲಿ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಎಸ್ಆರ್‌ಟಿಸಿ ಅವಕಾಶ ನೀಡಿದೆ. ಇಷ್ಟು ದಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರ ಬಸ್‌ಗಳನ್ನು ಹತ್ತಬೇಕಿತ್ತು.

   ಕರ್ಫ್ಯೂ ಬಳಿಕ ಬಸ್ ಸಂಚಾರ ಆರಂಭ; 82,127 ಜನರ ಪ್ರಯಾಣ

   ಸೋಮವಾರ ಈ ಕುರಿತು ಕೆಎಸ್ಆರ್‌ಟಿಸಿ ಪ್ರಕಟಣೆ ಹೊರಡಿಸಿದೆ. ರಾಜ್ಯದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್‌ಗಳು ಈ ಕೆಳಕಂಡ ಪಿಕಪ್ ಪಾಯಿಂಟ್‌ಗಳಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನ್‌ಗೆ ಒಳಪಡಿಸಿ ಬಸ್‌ ಹತ್ತಿಸಿಕೊಳ್ಳಲು ಅವಕಾಶ ಕೊಡಲಾಗಿದೆ ಎಂದು ಹೇಳಿದೆ.

   ಎಚ್ಚರ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಉಗುಳಿದರೆ 100 ರೂಪಾಯಿ ದಂಡ

   ಕರ್ನಾಟಕ ಸರ್ಕಾರ ರಾತ್ರಿಯ ಕರ್ಫ್ಯೂ ಅವಧಿಯಲ್ಲಿ ಬಸ್ ಸಂಚಾರ ನಡೆಸಲು ಅನುಮಿತಿ ನೀಡಿತ್ತು. ಜೂನ್ 5ರಿಂದಲೇ ಆರಂಭವಾಗುವಂತೆ ರಾತ್ರಿ ಸೇವೆಯ ಬಸ್ಸುಗಳನ್ನು ಸಹ ಕೆಎಸ್ಆರ್‌ಟಿಸಿ ಓಡಿಸುತ್ತಿದೆ.

   ಇಂದಿನಿಂದಲೇ ಎಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

   ಬೆಂಗಳೂರಿನ ಪಿಕಪ್ ಪಾಯಿಂಟ್

   ಬೆಂಗಳೂರಿನ ಪಿಕಪ್ ಪಾಯಿಂಟ್

   * ನವರಂಗ್

   * ಗೋವರ್ಧನ್ (ಯಶವಂತಪುರ)

   * ಜಾಲಹಳ್ಳಿ ಕ್ರಾಸ್

   * 8ನೇ ಮೈಲಿ

   * ಹೆಬ್ಬಾಳ

   ಬಸ್ ಪಿಕಪ್ ಪಾಯಿಂಟ್

   ಬಸ್ ಪಿಕಪ್ ಪಾಯಿಂಟ್

   * ಯಲಹಂಕ

   * ಕಾರ್ಪೊರೇಷನ್ ಸರ್ಕಲ್

   * ಟಿನ್ ಫ್ಯಾಕ್ಟರಿ

   * ಕೆ. ಆರ್. ಪುರಂ

   * ಐ. ಟಿ. ಐ. ಗೇಟ್

   * ಕಾವೇರಿ ಭವನ

   * ಕಲಾಸಿಪಾಳ್ಯ

   * ನಾಯಂಡಹಳ್ಳಿ

   * ಕೆಂಗೇರಿ

   ಬಸ್ ಸಂಚಾರದ ವಿವರಗಳು

   ಬಸ್ ಸಂಚಾರದ ವಿವರಗಳು

   ಮೇ 19ರಿಂದ ಜೂನ್ 4ರ ತನಕ 56,662 ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿವೆ. 1768689 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಮೊದಲು ಬೆಳಗ್ಗೆ 7 ರಿಂದ ಸಂಜೆ 7ರ ತನಕ ಮಾತ್ರ ಬಸ್ ಸಂಚಾರವಿತ್ತು. ಬಳಿಕ ಅದನ್ನು ಬೆಳಗ್ಗೆ 5 ರಿಂದ 9ರ ತನಕ ವಿಸ್ತರಣೆ ಮಾಡಲಾಯಿತು.

   ಬೆಂಗಳೂರಿನಿಂದ ಬಸ್

   ಬೆಂಗಳೂರಿನಿಂದ ಬಸ್

   ಬೆಂಗಳೂರು ನಗರದಿಂದ ಮೇ 19ರಿಂದ ಜೂನ್ 4ರ ತನಕ 14,149 ಬಸ್‌ಗಳು ಸಂಚಾರ ನಡೆಸಿವೆ. 2,32,680 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದರೆ, ಈಗ ಕರ್ಫ್ಯೂ ಅವಧಿಯಲ್ಲಿಯೂ ಬಸ್ ಸಂಚಾರಕ್ಕೆ ಅನುಮತಿ ಕೊಡಲಾಗಿದೆ.

   English summary
   Karnataka State Road Transport Corporation allowed picking up passengers from 15 place of Bengaluru city after thermal screening.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X