NEET: ನೀಟ್ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯಾ?: ಬಿಜೆಪಿ ಶಾಸಕರು ಹೇಳಿದ್ದೇನು?
ಹುಬ್ಬಳ್ಳಿ, ಜೂನ್ 21: ಸದ್ಯ ಕರ್ನಾಟಕದಲ್ಲಿ ನೀಟ್ ಪರೀಕ್ಷೆ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಈ ನೀಟ್ ಪರೀಕ್ಷೆ (NEET Exam 2024) ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಯಾವುದೇ ಕಾರಣಕ್ಕೋ ಆಗಿಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿ ಕಾರಿದರು.
ಈ ವಿಚಾರ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಅನ್ಯಾಯ ಯಾಕೆ ಆಗುತ್ತದೆ? ಇಲ್ಲಿಯವರೆ ಎಷ್ಟೋ ಜನ ಒಳ್ಳೆ ರಾಂಕ್ ಪಡೆದಿದ್ದಾರೆ ಎಂಬಂತಹ ಯಾವುದೇ ಗೊಂದಲ ಆಗಿಲ್ಲ.

ಸರ್ಕಾರಕ್ಕೆ ಯಾವುದೇ ಅಜೆಂಡಾ ಇಲ್ಲ. ಪ್ರಧಾನ ಮಂತ್ರಿ ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಮಾತನಾಡಲು ಒಳ್ಳೆಯ ವಿಷಯಗಳ ಸಿಗದಿದ್ದಾಗ ಹೀಗೆ ಸುಳ್ಳು ಸುದ್ದಿ ಹೇಳುವುದು, ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಒಂದು ಜೇಬಿನಿಂದ ಪಡೆದು ಎರಡು ಜೇಬಿಗೆ ಕತ್ತರಿ
ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥನೆ ನೀಡಿದ್ದಾರೆ. ಜನರ ಒಂದು ಜೇಬಿನಿಂದ ತೆಗೆದುಕೊಂಡು ಎರಡು ಜೇಬಿಗೆ ಕತ್ತರಿ ಹಾಕುವ ಕೆಲಸ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅಬಕಾರಿ, ಪೆಟ್ರೋಲ್, ಡೀಸೆಲ್ ಸೇರಿ ಎಲ್ಲದರ ಮೇಲೂ ಬೆಲೆ ಏರಿಕೆ ಮಾಡುತ್ತಿದ್ದೀರಿ, ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಬೆಲೆ ಏರಿಕೆ ಮಾಡಿದ್ದೀರಿ.
ರಾಜ್ಯದಲ್ಲಿ ಹಣಕಾಸಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಅದಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬೇಕು. ನಮ್ಮ ಸರ್ಕಾರ ಇದ್ದಾಗ ನಾವು ಯಾವುದೇ ಬೆಲೆ ಏರಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿಎಂ ವಾಲ್ಮೀಕಿ ಹಗರಣದ ಸತ್ಯ ಹೊರತರಲಿ
ನಾವು ಒಳ್ಳೆ ಆಡಳಿತ ಕೊಟ್ಟಿದ್ದೆವು. ಆದರೆ ಈಗ ವಿನಾಕಾರಣ ರಾಜ್ಯದ ಜನತೆ ಮೇಲೆ ಹೊರೆ ಹೇರಲಾಗುತ್ತಿದೆ.ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಈಗ ವಾಲ್ಮೀಕಿ ನಿಗಮದ ಹಗರಣವನ್ನು ಮುಖ್ಯಮಂತ್ರಿ ಮರೆ ಮಾಚುತ್ತಿದ್ದಾರೆ ಅದರ ಸತ್ಯಾಸತ್ಯತೆ ಹೊರ ತರುವ ಕೆಲಸ ಮುಖ್ಯಮಂತ್ರಿಗಳು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯಮಂತ್ರಿ ಮೂಗಿನ ಕೆಳಗೆ ಆಗಿರುವ ಹಗರಣ ಇದು ಅದನ್ನ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೊಡಿ ಅಂದರೆ ಎಸ್ ಐಟಿ ತನಿಖೆ ಮಾಡುತ್ತೇವೆ ಎನ್ನುತ್ತಾರೆ. ಮುಚ್ಚಲು ಏನು ಬೇಕು ಆ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಕೊನೆಗೆ ಇವರ ಬುಡಕ್ಕೆ ಬರುತ್ತದೆ ಎಂದರು.
ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತ
ಬಿಜೆಪಿ ಅವರಿಗೆ ನಾಚಿಕೆ ಇಲ್ಲ ಎಂಬ ಹೇಳಿಕೆ, ನಾಚಿಕೆ ಇಲ್ಲದವರು ಕಾಂಗ್ರೆಸ್ ಪಕ್ಷದವರು. ನಾಚಿಕೆ, ಮಾನ, ಮರ್ಯಾದೆ ಏನಾದ್ರು ಇದ್ದಿದ್ದರೆ ಬೆಲೆ ಏರಿಕೆ ಮಾಡುತ್ತಲೇ ಇರಲಿಲ್ಲ. ಬೆಲೆ ಏರಿಕೆಗೆ ಕಾರಣವಾದರೂ ಕೊಡಿ ಮುಖ್ಯಮಂತ್ರಿಗಳೇ? ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳಿವೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತ ಆಗಿರುವುದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ನಾವೇನು ಗ್ಯಾರೆಂಟಿ ವಿರೋಧಿಗಳಲ್ಲ. ಆದರೆ ಯೋಜನೆಗಳನ್ನು ಜನರಿಗೆ ಕೊಡಬೇಕಾದರೆ ವಿವೇಚನೆ ಕೊಡಬೇಕು. ಇಲ್ಲವದರೆ ಇದರಿಂದ ಲಭಾವಾಗಲ್ಲ. ಇದೆಲ್ಲ ನೋಡಿದರೆ ಚುನಾವಣಾಗಾಗಿ ಗ್ಯಾರೆಂಟಿ ನೀಡಿದಂತೆ ಕಾಣುತ್ತದೆ ಎಂದರು.
ಬಿಜೆಪಿಯಷ್ಟು ಸೀಟು ಗೆದ್ದಿಲ್ಲ: ಶಾಸಕ ವ್ಯಂಗ್ಯ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ, ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ಮಾಡಿಯೇ ತೀರುತ್ತದೆ. ಕೇಂದ್ರ ಸರ್ಕಾರ ಬಿಜೆಪಿ ಸರ್ಕಾರ ಸೀಟ್ ಗಳನ್ನು ಇಡೀ ಇಂಡಿಯಾ ಒಕ್ಕೂಟ ಗೆದ್ದಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಕಿಚಡಿ ಅಂದ್ರೆ ಎಲ್ಲಾ ಮಿಕ್ಸ್ ಮಾಡೋದಕ್ಕೆ ಅಂತಾರೆ. ಕಿಚಡಿ ಇರೋರು ಇವರೇ, ಅದನ್ನು ಬೇರೆಯವರ ಮೇಲೆ ಹಾಕೋಕೆ ಹೊರಟಿದ್ದು ಕಾಂಗ್ರೆಸ್‌ನವರು. ಇಂಡಿಯಾ 230 ದಾಟದ್ದೇನೆ ಸರ್ಕಾರ ಮಾಡೋಕೆ ಹೊರಟಿದ್ದೀರಿ. ಹೊಸ ಹೊಸ ಅಂಗಿ, ಚೋಣ್ಣ ಹೊಲಸಿಕೊಂಡು ಹೊಸ ಸರ್ಕಾರ ಮಾಡುವ ಹಗಲುಗನಸು ಕಾಣುತ್ತಿದ್ದೀರಿ. ನಿಮಗೆ ಅಧಿಕಾರ ಸಿಗುವುದಿಲ್ಲ ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಡುವ ವಿಚಾರವಾಗಿ ಮಾತನಾಡಿದ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಇವರ ಹತ್ತಿರ ಪಾಠ ಕಲಿಯೋ ಅವಶ್ಯಕತೆ ನಮಗಿಲ್ಲ. ಅಂಬೇಡ್ಕರ್ ಅವರನ್ನ ಸೋಲಿಸಿದ್ದೆ ಈ ಕಾಂಗ್ರೆಸ್ ನವರು ಎಂದು ಹೇಳಿದರು.
-
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
ಧಾರವಾಡ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 1 ಲಕ್ಷ ಬಾಂಡ್ಗೆ ಆಗ್ರಹಿಸಿದ ಪೊಲೀಸರ ವಿರುದ್ಧ ಯತ್ನಾಳ್ ಗರಂ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್











Click it and Unblock the Notifications