Get Updates
Get notified of breaking news, exclusive insights, and must-see stories!

ಇಂದಿರಾನಗರದಲ್ಲಿ ನುಡಿರಾ ಸಲೂನ್ ಉದ್ಘಾಟಿಸಿದ ನಟಿ ಧನ್ಯಾ

ಬೆಂಗಳೂರು, ಸೆಪ್ಟಂಬರ್ 20: ದೇಶದಲ್ಲಿ ಮುಂಚೂಣಿಯಲ್ಲಿರುವ ಸಲೂನ್ ಚೇನ್‍ಗಳಲ್ಲಿ ಒಂದಾಗಿರುವ ನುಡಿರಾ ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಔಟ್‍ಲೆಟ್ ಅನ್ನು ಆರಂಭಿಸಿದೆ. ಇದು ಬೆಂಗಳೂರಿನಲ್ಲಿ ಬ್ರ್ಯಾಂಡ್‍ನ ಎರಡನೇ ಔಟ್‍ಲೆಟ್ ಆಗಿದೆ. ಬ್ರ್ಯಾಂಡ್ ತನ್ನ ಮೊದಲನೇ ಮಳಿಗೆಯನ್ನು ಕಾಡುಗೋಡಿಯಲ್ಲಿ ಆರಂಭ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದಿರಾನಗರದಲ್ಲಿ ಎರಡನೇ ಔಟ್‍ಲೆಟ್ ಅನ್ನು ಆರಂಭಿಸಿದೆ. ನಿನ್ನ ಸನಿಹಕೆ ಚಿತ್ರದ ನಟ-ನಟಿಯರಾದ ಸೂರಜ್ ಗೌಡ ಮತ್ತು ಧನ್ಯಾ ರಾಮ್‌ಕುಮಾರ್ ಅವರು ಈ ಔಟ್‍ಲೆಟ್ ಅನ್ನು ಉದ್ಘಾಟಿಸಿದರು.

ಈ ಸಲೂನ್ 2100 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಗ್ರಾಹಕರಿಗೆ ಅತ್ಯುತ್ತಮವಾದ ತ್ವಚೆ, ಉಗುರು ಮತ್ತು ಕೂದಲು ಪರಿಣತರಿಂದ ಗ್ರಾಹಕರಿಗೆ ಸೇವೆಯನ್ನು ಒಂದೇ ಸೂರಿನಡಿ ನೀಡಲಿದೆ. ಮೇಕಪ್, ನೇಲ್ಸ್, ಹೇರ್‌ಕೇರ್ ಮತ್ತು ಫೇಶಿಯಲ್ಸ್ ಅನ್ನು ಸಹ ಇಲ್ಲಿ ಮಾಡಲಾಗುತ್ತದೆ.ಈ ಸಲೂನ್ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ನುಡಿರಾದ ಮಾಲೀಕರಾದ ನದಿರಾನಾಯರ್ ಅವರು, ''ಮಹಿಳೆ ಮತ್ತು ಪುರುಷರಿಗೆ ಪರಿಪೂರ್ಣವಾದ ಮತ್ತು ಆತ್ಮೀಯವಾದ ಅನುಭವವನ್ನು ನೀಡುವ ಉದ್ದೇಶದಿಂದ ಈ ಸಲೂನ್ ಅನ್ನು ಆರಂಭಿಸಲಾಗಿದೆ. ಸಲೂನನ್ನು ಪ್ರವೇಶ ಮಾಡುತ್ತಿದ್ದಂತೆಯೇ ಗ್ರಾಹಕರಿಗೆ ರೂಪಾಂತರದ ಅನುಭವವಾಗಲಿದೆ. ನಮ್ಮ ನುಡಿರಾದಲ್ಲಿನ ತಂಡ ಮತ್ತು ನಾನು ಅತ್ಯುತ್ಕೃಷ್ಟವಾದ ಉತ್ಪನ್ನಗಳು ಮತ್ತು ವೃತ್ತಿಪರ ಸೇವೆಗಳೊಂದಿಗೆ ವಿಸ್ತಾರವಾದ ರೀತಿಯ ಅತ್ಯುತ್ತಮ ಗುಣಮಟ್ಟದ ಸೌಂದರ್ಯ ಸೇವೆಗಳನ್ನು ನೀಡಲಿದ್ದೇವೆ'' ಎಂದರು.

Noodira, a premium salon in Indiranagar inaugurated

ನಿನ್ನ ಸನಿಹಕೆ ಚಿತ್ರದ ನಾಯಕ ನಟಿ ಧನ್ಯಾ ರಾಮ್ ಕುಮಾರ್ ಅವರು ಮಾತನಾಡಿ, ''ಎಲ್ಲಾ ಸೇವೆಗಳು ಉಪಯುಕ್ತವಾಗಿದ್ದರೂ, ನನ್ನ ವೈಯಕ್ತಿಕ ನೆಚ್ಚಿನದು ಕೂದಲು ಸೇವೆಗಳಾಗಿರಬೇಕು. ಬ್ರ್ಯಾಂಡ್ ನಂಬಲಾಗದಷ್ಟು ಕೂದಲು ಆರೈಕೆ ಮತ್ತು ಬಣ್ಣದ ಉತ್ಪನ್ನಗಳನ್ನು ಹೊಂದಿದೆ. ಜೊತೆಗೆ ಪ್ರೀತಿ ಮತ್ತು ಕಾಳಜಿಯಿಂದ ಗ್ರಾಹಕರ ನಿರೀಕ್ಷೆಗಳನ್ನು ನಿರ್ವಹಿಸಲು ಅಗತ್ಯವಾದ ಪರಿಣತಿಯನ್ನು ಹೊಂದಿದೆ'' ಎಂದು ತಿಳಿಸಿದರು.

Noodira, a premium salon in Indiranagar inaugurated

Recommended Video

      ರಾಜೀನಾಮೆ ಬಗ್ಗೆ ಕೋಚ್ ಬಳಿ ಕೊಹ್ಲಿ ತೋಡಿಕೊಂಡ ನೋವು ಅಷ್ಟಿಷ್ಟಲ್ಲ | Oneindia Kannada

      ನಿನ್ನ ಸನಿಹಕೆ ನಾಯಕ ನಟ/ ನಿರ್ದೇಶಕ ಸೂರಜ್ ಗೌಡ್ ಅವರು ಮಾತನಾಡಿ, ''ನುಡಿರಾದ ಅದ್ಭುತ ನೋಟ ಮತ್ತು ಭಾವನೆಯನ್ನು ಹೊಂದಿದೆ. ಇದು ಅತ್ಯುತ್ತಮ ಗುಣಮಟ್ಟದ ಸೇವೆಗಳಿಗೆ ಅನುಗುಣವಾಗಿರುತ್ತದೆ. ಇದಕ್ಕಿಂತ ಹೆಚ್ಚಾಗಿ. ಬ್ರ್ಯಾಂಡ್ ಗ್ರಾಹಕರ ಸಂಬಂಧ ಕೋಡ್ ಅನ್ನು ಹೊಂದಿದ್ದು, ಅದು ವೃತ್ತಿಪರವಾದರೂ ಬೆಚ್ಚಗಿರುತ್ತದೆ ಮತ್ತು ನಿಜವಾಗಿಯೂ ವೈಯಕ್ತೀಕರಿಸಿದೆ'' ಎಂದು ಹೇಳಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+