ಸಮಾನ ಕೆಲಸಕ್ಕೆ, ಸಮಾನ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು, ಫೆಬ್ರವರಿ 23: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರದ ಖಾಯಂ ಏತರ ನೌಕರರ ಒಕ್ಕೂಟವು ಸಿಐಟಿವು ಸಹಯೋಗದೊಂದಿಗೆ ಬೃಹತ್‌ ಪ್ರತಿಭಟನೆ ಮಾಡಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಖಾಯಂ ಏತರ ನೌಕರರ ಒಕ್ಕೂಟದ ಸದಸ್ಯರು 'ಸಮಾನ ಕೆಲಸಕ್ಕೆ ಸಮಾನ ವೇತನ' ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ರ್ಯಾಲಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಗುತ್ತಿಗೆ, ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.

Non permanent government workers did strike in Bengaluru today

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
* ಸುಪ್ರೀಂ ಕೋರ್ಟ ನಿರ್ದೇಶನದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು.
* ಆಯಾ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ನೇರ ನೇಮಕಾತಿ ಮಾಡುವಾಗ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಮೊದಲ ಆದ್ಯತೆ ನೀಡಬೇಕು.
* ಖಾಯಂ ಅಲ್ಲದ ನೌಕರರನ್ನು ಖಾಯಂ ಮಾಡಲು ಸರ್ಕಾರವು ವಿಶೇಷ ಸೇವಾ ನಿಯಮಾವಳಿಗಳನ್ನು ರಚಿಸಬೇಕು.
* ನೇಮಕಾತಿ, ವರ್ಗಾವಣೆ, ಬಡ್ತಿಗಳಾದಾಗ ಈಗಾಗಲೇ ಕೆಲಸ ಮಾಡುತ್ತಿರುವ ನೌಕರರನ್ನು ಕೆಲಸದಿಂದ ತೆಗೆಯುವ ಕ್ರಮವನ್ನು ನಿಲ್ಲಿಸಬೇಕು. ಉದಾ: ಅತಿಥಿ ಉಪನ್ಯಾಸಕರು, ಡಾಟಾ ಆಪರೇಟರ್ಸ್.
* ಮಹಿಳಾ‌ ನೌಕರರಿಗೆ ಕಡ್ಡಾಯವಾಗಿ ವೇತನ ಸಹಿತವಾದ 6 ತಿಂಗಳು ರಜೆ ಹಾಗೂ ಹೆರಿಗೆ ಭತ್ತ್ಯೆ ಸೌಲಭ್ಯ ನೀಡಬೇಕು.
* ಅತಿಥಿ ಉಪನ್ಯಸಾಕರಿಗೆ ಸೇವೆಯಲ್ಲಿ ವಿಲೀನಗೊಳ್ಳುವವರೆಗೆ 25 ಸಾವಿರ ವೇತನ ಪ್ರತಿ ತಿಂಗಳು ಮೊದಲ ವಾರದಲ್ಲಿ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+