ಅಮೆರಿಕದ ನೋವು ನಿವಾರಕ ಸಲಕರಣೆ ಆಸ್ಕಾ ಭಾರತಕ್ಕೆಎಂಟ್ರಿ
ಬೆಂಗಳೂರು, ಆ. 5: ಪಿಎಎಂಎಫ್ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಯಾವುದೇ ಹಾನಿ ತಂದೊಡ್ಡದ ಮತ್ತು ಅಡ್ಡ ಪರಿಣಾಮವಿಲ್ಲದ ನೋವು ನಿವಾರಕ ವೈದ್ಯಕೀಯ ಸಲಕರಣೆಯನ್ನು ಒಎಸ್‌ಕೆಎ (ಆಸ್ಕಾ) ಇಂಡಿಯಾ ಬಿಡುಗಡೆ ಮಾಡಿದೆ. ತೀವ್ರ ತರನಾದ ಹಾಗೂ ದೀರ್ಘಾವಧಿಯ ನೋವಿನಿಂದ ಬಳಲುತ್ತಿರುವರಿಗೆ ಈ ತಂತ್ರಜ್ಞಾನವನ್ನು ತಲುಪಿಸುವ ಕಡೆಗೆ ಆಸ್ಕಾ ಇಂಡಿಯಾ ಸಂಸ್ಥೆಯು ಕೆಲಸ ಮಾಡುತ್ತಿದೆ.
ಆಸ್ಕಾ ವೆಲ್‌ನೆಸ್, ಜಾಗತಿಕ ಮಟ್ಟದಲ್ಲಿ ಯಾವುದೇ ಔಷಧ ಇಲ್ಲದೆ ನೋವು ನಿವಾರಿಸುವಂತಹ ಸಲಕರಣೆಗಳ ತಯಾರಿಕಾ ಸಂಸ್ಥೆಯಾಗಿದ್ದು ಇದೀಗ ತನ್ನ ನೂತನ ಪಿಇಎಮ್ಎಫ್ (ಪಲ್ಸ್ಡ್ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ) ತಂತ್ರಜ್ಞಾನದ ಸಾಧನವಾದ 'ಆಸ್ಕಾ ಪ್ಲಸ್' ಯಂತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಸ್ನಾಯು ಸೆಳೆತ, ಬೆನ್ನು ನೋವು, ಸಂಧು ನೋವು, ಮಂಡಿ ನೋವು ಮೊದಲಾದ ನೋವಿನ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಸಾಧನವು ವರದಾನವಾಗಲಿದೆ. ಅಮೆರಿಕದ ಸ್ಯಾಂಡಿಯಾಗೋದಲ್ಲಿ ನೆಲೆಸಿರುವ ಆಸ್ಕಾ ವೆಲ್‌ನೆಸ್ ಸಂಸ್ಥೆಯು ಪಿಇಎಮ್‌ಎಫ್ ತಂತ್ರಜ್ಞಾನ ಹೊಂದಿರುವ ಹಲವಾರು ಯಂತ್ರಗಳನ್ನು ಪರಿಚಯಿಸಿದೆ. ಪಿಇಎಮ್‌ಎಫ್ ಅಥವಾ ಪಲ್ಸ್ಡ್ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಕಡಿಮೆ ಪ್ರಮಾಣದಲ್ಲಿನ ಎಎಮ್‌ಎಫ್ ತರಂಗಗಳನ್ನು ಬಳಸಿ ನೋವನ್ನು ನಿವಾರಿಸುತ್ತದೆ.

ಪಲ್ಸ್ಡ್ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ತಂತ್ರಜ್ಞಾನದಲ್ಲಿ ಬರೋಬ್ಬರಿ 15 ವರ್ಷಗಳ ಸಂಶೋಧನೆಯ ಬಳಿಕ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ಹಲವು ಉಪಕರಣಗಳನ್ನು ಅಭಿವೃದ್ಧಿ ಪಡಿಸಿವೆ. ಸಂಸ್ಥೆಯು ಹೊರ ತಂದಿರುವ ಈ ವೈವಿದ್ಯಮಯ ಉಪಕರಣಗಳು ಜನಸಾಮಾನ್ಯರ ಜೀವನ ಶೈಲಿಯನ್ನು ಸುಲಭವನ್ನಾಗಿಸುತ್ತದೆ. ಭಾರತದಲ್ಲಿ ಬೆನ್ನು ನೋವು, ಸ್ನಾಯು ಸೆಳೆ ಹೀಗೆ ವಿವಿಧ ರೀತಿಯ ನೋವಿನಿಂದ ಬಳಲುತ್ತಿರುವವರಿಗೆ ಈ ಸಾಧನೆ ನೆರವಾಗಲಿದೆ ಎಂದು ಬೆಂಗಳೂರಿನ ಮೆಡ್ ಲ್ಯಾಬ್ಸ್ ಡಯಾಗ್ನಾಸ್ಟಿಕ್ಸ್‌ನ ಫಿಸಿಯೋಥೆರಪಿಸ್ಟ್ ಬೀನ್ ಸ್ಯಾಮುಯೆಲ್ ಹೇಳಿದ್ದಾರೆ.
ಐಐಎಂಬಿಯ ಹಳೆಯ ವಿದ್ಯಾರ್ಥಿ ಮತ್ತು ಕಾರ್ಯತಂತ್ರದ ಮುಖ್ಯಸ್ಥ ಚಿನ್ಮಯ್ ಮುರಳಿಧರ್ ಮಾತನಾಡಿ, "ಆಸ್ಕಾ ಭವಿಷ್ಯದ ಉಪಕರಣವಾಗಿದೆ. ಈ ಸಾಧನದ ಮೇಲೆ ಮಾಡಲಾಗಿರುವ ಸಂಶೋಧನೆ ಅಘಾದವಾದದ್ದು. ಪಿಇಎಮ್‌ಎಫ್ ತಂತ್ರಜ್ಞಾನವು ನೋವು ನಿವಾರಕದಲ್ಲಿ ಅತ್ಯಾಧೂನಿಕ ತಂತ್ರಜ್ಞಾನವಾಗಿದೆ. ಹಲವು ಮಂದಿಗೆ ಈ ಉಪಕರಣ ಬಳಕೆ ಮಾಡಿದ ಒಂದು ವಾರದಲ್ಲಿ ಫಲಿತಾಂಶ ಸಿಕ್ಕಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಇದರ ಬಳಕೆಗೆ ಯಾವುದೇ ಔಷಧಗಳ ಅಗತ್ಯವಿಲ್ಲ ಮತ್ತು ಶೂನ್ಯ ಪ್ರಮಾಣದ ಅಡ್ಡಪರಿಣಾಮ ಹೊಂದಿದೆ. ಈ ಉಪಕರಣಗಳ ವ್ಯಾಪಕ ಬಳಕೆಗೆ ವೈದ್ಯಕೀಯ ಅಧ್ಯಯನಗಳನ್ನು ನಡೆಸಲಾಗುತ್ತಿದೆ," ಎಂದು ಹೇಳಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications