ಜೂ.13ರಂದು ಬೆಂಗಳೂರಿನಲ್ಲಿ ನೀರು ಬರೋಲ್ಲ

ಬೆಂಗಳೂರು, ಜೂ. 11 : ಬೆಂಗಳೂರು ಜಲಮಂಡಳಿ ಕಾವೇರಿ ನೀರು ಪೂರೈಕೆ ಜಾಲದ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಜೂ.13ರ ಶುಕ್ರವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೂಡಿ ಬಳಿ ಇರುವ ಹಳೆಯ ನೆಲಮ­ಟ್ಟದ ಜಲಾಗಾರಕ್ಕೆ ನೀರು ಪೂರೈಸುವ 800 ಎಂ.ಎಂ ಕೊಳವೆ ಮಾರ್ಗವನ್ನು ಹೊಸ ಜಲಾಗಾರಕ್ಕೆ ನೀರು ಪೂರೈಸುವ ಮಾರ್ಗದೊಂದಿಗೆ ಸಂಪರ್ಕಿಸುವ ಕಾಮಗಾರಿ ನಡೆಯುವುದರಿಂದ ಶುಕ್ರವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನಾಲ್ಕನೇ ಹಂತದ 2ನೇ ಘಟ್ಟದ ನೀರು ಪೂರೈಕೆ ಯೋಜನೆಯ ಪೂರ್ವ ಭಾಗದ ಪ್ರದೇ­ಶ­ಗಳಿಗೆ ನೀರು ಪೂರೈಸುವ 2 ಪಂಪು­ಗಳನ್ನು ಸ್ಥಗಿತಗೊಳಿಸಲಾ­ಗುತ್ತದೆ. [ಟ್ಯಾಂಕರ್ ನೀರು ಬೇಕಾ? ಜಲಮಂಡಳಿಗೆ ಕರೆ ಮಾಡಿ]

BWSSB

ಎಲ್ಲೆಲ್ಲಿ ನೀರು ಬರುವುದಿಲ್ಲ : ಬೆಂಗಳೂರು ಜಲಮಂಡಳಿ ನೀಡಿರುವ ಪ್ರಕಟಣೆಯಂತೆ ವಿಜಯಾ ಬ್ಯಾಂಕ್ ಲೇಔಟ್, ಕೋಡಿ ಚಿಕ್ಕನಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ ಪ್ರದೇಶ, ಎಚ್ಎಎಲ್ 2 ಮತ್ತು 3ನೇ ಹಂತ, ಇಂದಿರಾನಗರ, ಜೀವನಭೀಮಾನಗರ, ಸಿ.ವಿ. ರಾಮನ್ ನಗರ, ಕಗ್ಗದಾಸಪುರ, ಹಳೆ ವಿಮಾನ ನಿಲ್ದಾಣ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ಜೂನ್ ನಲ್ಲಿ ನೀರಿನ ದರ ಏರಿಕೆ ಇಲ್ಲ]

ಮುರುಗೇಶ್ ಪಾಳ್ಯ, ವಿನಾಯಕ ನಗರ, ಎಸ್.ಆರ್. ಲೇಔಟ್, ಅಮರ ಜ್ಯೋತಿ ಲೇಔಟ್, ದೊಮ್ಮಲೂರು, ಬಾಣಸ­ವಾಡಿ, ಎಚ್ಆರ್‌ಬಿಎಆರ್ ಲೇಔಟ್, ಓಎಂಬಿಆರ್ ಲೇಔಟ್, ವಿಜ್ಞಾನ ನಗರ ಕಸ್ತೂರಿ ನಗರ, ಆರ್.ಎಸ್. ಪಾಳ್ಯ, ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ, ಮಹದೇವಪುರ ವಿಧಾನಸಭಾ ಕ್ಷೇತ್ರ, ಎಇಸಿಎಸ್ ಲೇಔಟ್, ಐಟಿಪಿಎಲ್, ವೈಟ್ ಫೀಲ್ಡ್ ಪ್ರದೇಶಗಳಲ್ಲಿಯೂ ಬೆಳಗ್ಗೆ 8 ರಿಂದ ರಾತ್ರಿ 8ರತನಕ ನೀರು ಪೂರೈಕೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+