ಫೆ 4-5 ರಂದು ಬೆಂಗಳೂರಿಗೆ ನೀರಿಲ್ಲ, ಯಾಕೆ?
ಬೆಂಗಳೂರು, ಜ.31 : ಬೆಂಗಳೂರಿಗರೆ ಮತ್ತೊಮ್ಮೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ. ಕಾವೇರಿ 4ನೇ ಹಂತದ ಪಂಪ್ ಗಳ ತುರ್ತು ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಫೆ.4 ಮತ್ತು 5ರಂದು ಕೈಗೊಳ್ಳಲಿದೆ. ಆದ್ದರಿಂದ ಎರಡು ದಿನ ಬೆಂಗಳೂರಿನಲ್ಲಿ ನೀರಿನ ಸರಬರಾಜು ಇರುವುದಿಲ್ಲ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರ ಈ ಕುರಿತು ಬೆಂಗಳೂರು ಜಲಮಂಡಳಿ ಪ್ರಕಟಣೆ ಹೊರಡಿಸಿದ್ದು, ಬನ್ನೇರುಘಟ್ಟ ಬಳಿ ಇರುವ ಟಿಕೆ ಹಳ್ಳಿಯಲ್ಲಿ ಕಾವೇರಿ 4 ಹಂತದ ಪಂಪ್ ಗಳ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಆದ್ದರಿಂದ ಫೆ.4 ಮತ್ತು 5 ರಂದು ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ದುರಸ್ತಿ ಕಾರ್ಯವನ್ನು ಫೆ.4ರಿಂದ ಆರಂಭಿಸಲಿದ್ದು, ಅಂದು ಬೆಳಗ್ಗೆ 9 ಗಂಟೆಯಿಂದ ಪಂಪ್ ಹೌಸ್ ಬಂದ್ ಮಾಡಲಾಗುತ್ತದೆ. ಆದ್ದರಿಂದ ಎರಡು ದಿನಗಳ ಕಾಲ ನಗರದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಮಂಡಳಿ ಮನವಿ ಮಾಡಿದೆ.












Click it and Unblock the Notifications