ಜ.19ರಂದು ಬೆಂಗಳೂರಿನಲ್ಲಿ ನೀರು ಬರೋಲ್ಲ

ಬೆಂಗಳೂರು, ಜನವರಿ 18 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಂಗಳವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ವಿವಿಧ ಹಂತದ ಪಂಪಿಂಗ್ ಠಾಣೆಗಳಲ್ಲಿನ ದುರಸ್ತಿ ಕಾರ್ಯದ ಹಿನ್ನಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಬೆಂಗಳೂರು ಜಲಮಂಡಳಿ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಜಲಮಂಡಳಿಯು ನಗರಕ್ಕೆ ನೀರು ಪೂರೈಸುವ ಕಾವೇರಿಯ ವಿವಿಧ ಹಂತದ ಪಂಪಿಂಗ್ ಠಾಣೆಗಳಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಜನವರಿ 19ರ ಮಂಗಳವಾರ ನಗರದಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

bwssb

ಕಾವೇರಿ ಯೋಜನೆಯ ಹಾರೋಹಳ್ಳಿ ಪಂಪಿಂಗ್ ಠಾಣೆಯನ್ನು ಜನವರಿ 19ರಂದು 4 ಗಂಟೆಗಳ ಕಾಲ ಸ್ಥಗಿತಗೊಳಿಸಲು ಜಲಮಂಡಳಿ ನಿರ್ಧರಿಸಿದೆ. ಹಾಗೆಯೇ ಕಾವೇರಿ 1, 2, 3 ಮತ್ತು 4ನೇ ಹಂತ ಹಾಗೂ 2ನೇ ಘಟ್ಟದ ಯೋಜನೆಗೆ ಸಂಬಂಧಿಸಿದ ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿ ಠಾಣೆಗಳಲ್ಲಿಯೂ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತದೆ. [ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ]

ನಿರ್ವಹಣಾ ಕಾರ್ಯದಿಂದಾಗಿ ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ತನಕ ಪಂಪಿಂಗ್ ಸ್ಥಗಿತಗೊಳ್ಳಲಿದ್ದು, ಇದರಿಂದಾಗಿ ಬೆಂಗಳೂರು ಪೂರ್ವ, ಕೇಂದ್ರ, ಉತ್ತರ, ಪಶ್ಚಿಮ, ದಕ್ಷಿಣ, ವಾಯುವ್ಯ, ನೈಋತ್ಯ, ಈಶಾನ್ಯ, ಆಗ್ನೇಯ ವಿಭಾಗ ಸೇರಿದಂತೆ ನಗರದ 8 ವಲಯಗಳಲ್ಲೂ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಂದಹಾಗೆ ಬೆಂಗಳೂರು ಜಲಮಂಡಳಿ ಪ್ರೋರೇಟಾ ಶುಲ್ಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಜಲಮಂಡಳಿ ಮೂರು ತಿಂಗಳ ಹಿಂದೆ ಪ್ರೋರೇಟಾ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ ಮಾಡಿತ್ತು. ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದ್ದು, ಪ್ರೋರೇಟಾ ಶುಲ್ಕ ಶೇ 60 ರಿಂದ ಶೇ 100ರಷ್ಟು ಹೆಚ್ಚಾಗಿದೆ.

ಏನಿದು ಪ್ರೋರೇಟಾ ಶುಲ್ಕ? : ಜಲಮಂಡಳಿ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟುವ ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕವನ್ನು ಪಡೆಯಲು ಜಲಮಂಡಳಿಗೆ ಪ್ರೋರೇಟಾ ಶುಲ್ಕವನ್ನು ಜನರು ಪಾವತಿ ಮಾಡಬೇಕು. 2008ರ ನಂತರ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+