Water Crises for God: ದೇವರಿಗೂ ನೀರಲ್ಲ: ಬೆಂಗಳೂರಿನ ದೇವಸ್ಥಾನಗಳಿಗೂ ತಟ್ಟಿದ ನೀರಿನ ಬರ
ಬೆಂಗಳೂರು ಮಾರ್ಚ್ 15: ಮನೆ, ಕಚೇರಿ, ಶಾಲೆ ಬಳಿಕ ದೇವಸ್ಥಾನಗಳಿಗೂ ನೀರಿನ ಬರ ತಟ್ಟಿದೆ. ನಿತ್ಯ ನೂರಾರು ಜನ ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ನೀರಿನ ಬಹುದೊಡ್ಡ ಸಮಸ್ಯೆ ಎದುರಾಗಿದೆ. ಕೈ,ಕಾಲು ತೊಳೆಯಲು ಜನ ಪರದಾಡುವಂತಾಗಿದೆ.
ಇದರಿಂದಾಗಿ ಬೇಡಿದ್ದನ್ನು ನೀಡುವ ದೇವರಿಗೂ ನೀರು ಇಲ್ಲದಂತಾಗಿದೆ. ಹೀಗಾಗಿ ಕಡಿಮೆ ಪ್ರಮಾಣದ ನೀರಿನ ಬಳಕೆಗೆ ದೇವಸ್ಥಾನಗಳು ಹಲವು ಕ್ರಮ ವಹಿಸುತ್ತಿವೆ. ಬೆಂಗಳೂರಿನ ಹಲವು ದೇಗುಲಗಳಲ್ಲಿ ಪೂಜೆ, ಅನ್ನಸಂತರ್ಪಣೆಯಿಂದ ಹಿಡಿದು ಭಕ್ತರು ಕೈಕಾಲು ತೊಳೆಯಲು ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೌದು... ಉದ್ಯಾನನಗರಿಯಲ್ಲಿ ದೇವಸ್ಥಾನಗಳು ಈಗ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಡಿಮೆ ನೀರಿನಲ್ಲಿ ದೈನಂದಿನ ಪೂಜಾ ಕೈಂಕರ್ಯ, ಪ್ರಸಾದ ವಿತರಣೆ ನಿರ್ವಹಿಸಲು ಕಸರತ್ತು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರತಿನಿತ್ಯ ನೂರಾರು, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ದೇವಸ್ಥಾನಗಳಿಗೆ ಉಚಿತವಾಗಿ ಟ್ಯಾಂಕರ್ ನೀರು ಪೂರೈಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಅರ್ಚಕರ ಸಂಘ ಮುಂದಾಗಿದೆ.
ಮಲ್ಲೇಶ್ವರದ ಸುತ್ತಮುತ್ತ ದೇವಸ್ಥಾನ ಸೇರಿದಂತೆ ಮಹಾಲಕ್ಷ್ಮಿ ಲೇಔಟ್‌ನ ದೊಡ್ಡಾಂಜನೇಯ ದೇವಸ್ಥಾನಕ್ಕೆ ಸಮಸ್ಯೆಯಾಗಿಲ್ಲ. ಆದರೆ ಕೆಲವೆಡೆ ಬೋರ್‌ವೆಲ್ ಬತ್ತಿದ್ದರೆ, ಇನ್ನು ಕೆಲವೆಡೆ ಒಂದು ಇಂಚು ಸಣ್ಣದಾಗಿ ನೀರು ಬರುತ್ತಿದೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೆ ಕಷ್ಟವಾಗಲಿದೆ ಎಂದು ದೇವಸ್ಥಾನ ಅರ್ಚಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅರ್ಚಕರ ಸಂಘದ ಕೆಎಸ್‌ಎನ್ ದೀಕ್ಷಿತ್ ಅವರು, ನಗರದ ಹಲವು ದೇವಸ್ಥಾನಗಳಲ್ಲಿ ನೀರಿನ ಕೊರತೆ ಎದುರಾಗಿದೆ. ದೇವರಿಗೆ ಹಾಲು, ಮೊಸರು ಸೇರಿನಗರದ ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಕೈಕಾಲು ತೊಳೆಯುವ ನಲ್ಲಿಗೆ ಏರಿಯೇಟರ್ ಟ್ಯಾಪ್ ಹಾಕಿಸಿ ಕಡಿಮೆ ನೀರು ಖರ್ಚಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿದಲ್ಲಿ ಹೆಚ್ಚಿನ ನೀರು ಖರ್ಚಾಗುತ್ತಿದೆ. ಇದಕ್ಕೆ ನಿಯಂತ್ರಣ ಮಾಡಲಾಗುತ್ತಿದೆ. ಪ್ರಸಾದ ತಯಾರಿಕೆಗೆ ಫಿಲ್ಟರ್ ನೀರನ್ನು ತರಿಸಿಕೊಳ್ಳಲಾಗುತ್ತಿದೆ. ಉಳಿದ ಬಳಕೆಗೆ ಟ್ಯಾಂಕರ್ ನೀರನ್ನು ಬಳಸಲಾಗುತ್ತಿದೆ. ಕೋಟೆ ವೆಂಕಟೇಶ್ವರ ದೇಗುಲ ಸೇರಿ ಕೆಲವೆಡೆ ಪ್ರಸಾದ ತಯಾರಿಸಿಕೊಳ್ಳಲೂ ಸಮಸ್ಯೆಯಾಗಿದೆ ಎಂದರು.
ಈ ಬಗ್ಗೆ ಮಾತನಾಡಿದ ಬನಶಂಕರಿ ದೇವಸ್ಥಾನದ ಇಒಬಿ.ಲಕ್ಷ್ಮಿ ಅವರು ಬೆಳಗ್ಗೆ ಭಕ್ತರಿಗೆ ಸ್ಟೀಲ್ ಪ್ಲೇಟ್ ಬದಲು ದೊನ್ನೆಯಲ್ಲಿ ಪ್ರಸಾದ ನೀಡುತ್ತಿದ್ದೇವೆ. ಭಕ್ತರು ಕೈಕಾಲು ತೊಳೆಯುವ ನಲ್ಲಿಗೆ ಏರಿಯೇಟರ್ ಟ್ಯಾಪ್ ಹಾಕಿಸಿ ಕಡಿಮೆ ನೀರು ಖರ್ಚಾಗುವಂತೆ ಮಾಡಿದ್ದೇವೆ. ಸಾಧಾರಣ ದಿನಗಳಲ್ಲಿ ಒಂದು ಸಾಔಇರ, ಮಂಗಳವಾರ ಐದು ಸಾಔಇರ, ಶುಕ್ರವಾರ ಎಂಟು ಸಾವಿರದವರೆಗೆ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ.
ಇಲ್ಲಿಯೂ ನೀರುಳಿಸಲು ಪ್ಲೇಟ್ ತೊಳೆಯಲು ಡಿಶ್ ವಾಶರ್ ಖರೀದಿಗೆ ಮುಂದಾಗಿದ್ದೇವೆ. ದೇವಸ್ಥಾನಕ್ಕೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ ಎಂದರು. ಕೆಆರ್ ಮಾರ್ಕೆಟ್ ಗಣಪತಿ ದೇವಸ್ಥಾನದಲ್ಲೂ ನೀರಿನ ಸಮಸ್ಯೆಯಾಗಿದ್ದು, ಟ್ಯಾಂಕರ್ ನೀರು ತರಿಸಿಕೊಳ್ಳಲಾಗುತ್ತಿದೆ. ಮಲ್ಲೇಶ್ವರದ ದೊಡ್ಡಗಣಪತಿ ದೇವಸ್ಥಾನದ ವಿಶ್ವನಾಥ್ ಅವರು, ದೇವಸ್ತಾನದ ಬೋರ್‌ಗಳಲ್ಲಿ ಸಣ್ಣದಾಗಿ ನೀರು ಬರುತ್ತಿದೆ. ಇದ್ದುದರಲ್ಲೇ ನಿರ್ವಹಿಸುತ್ತಿದ್ದೇವೆ. ಇನ್ನೇರಡು ತಿಂಗಳು ಕಳೆಯುವುದು ಕಷ್ಟವಿದೆ ಎಂದು ಆತಂಕ ವ್ಯಕ್ತಪಡಿಸಿದರು.












Click it and Unblock the Notifications