ಜನ ಬರ್ತಿಲ್ಲ, ಆಕೆ ಮಾತಾಡಲ್ಲ, ಜೈಲಲ್ಲಿ ಶಶಿಕಲಾನ ಕೇಳೋರು ದಿಕ್ಕಿಲ್ಲ!
ಬೆಂಗಳೂರು, ಮೇ 3: ಕೆಲ ತಿಂಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಮೇಲೆ ಕೂತೇ ಬಿಡ್ತಾರೆ ಅಂದುಕೊಂಡಿದ್ದ ಶಶಿಕಲಾ ನಟರಾಜನ್, ಇದೀಗ ಸೊಳ್ಳೆ ವಿಪರೀತ ಇದೆ. ಒಂದು ಸೊಳ್ಳೆ ಪರದೆ ಕೊಡಿ ಎಂದು ಪರಪ್ಪನ ಅಗ್ರಹಾರದ ಪೊಲೀಸರನ್ನು ಕೇಳಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾದ ಶಶಿಕಲಾರನ್ನು ಭೇಟಿಯಾಗುವುದಕ್ಕೆ ಯಾರೂ ಬರುತ್ತಿಲ್ಲ.
ಆದರೆ, ಒಬ್ಬ ವ್ಯಕ್ತಿ ಮಾತ್ರ ಧಾರ್ಮಿಕ ಶ್ರದ್ಧೆ ಎಂಬಂತೆ ಶಶಿಕಲಾ ಭೇಟಿಗೆ ಬರ್ತಿದ್ದ, ಆತ ಟಿಟಿವಿ ದಿನಕರನ್. ಚುನಾವಣೆ ಆಯೋಗಕ್ಕೆ ಲಂಚ ಆಮಿಷ ಒಡ್ಡಿದ ಪ್ರಕರಣದಲ್ಲಿ ಆತನೂ ಜೈಲು ಪಾಲಾದ ಮೇಲೆ ಯಾರೂ ಬರುವುದಿಲ್ಲ. ಶಶಿಕಲಾ ಜೈಲಿಗೆ ಬಂದ ಹೊಸತರ;;ಇ ಹಲವರು ಭೇಟಿಗೆ ಬರುತ್ತಿದ್ದರು.

ಬಹುತೇಕರು ತಮಿಳುನಾಡಿನಿಂದ ಬರುತ್ತಿದ್ದರು. ಯಾವಾಗ ಎಐಎಡಿಎಂಕೆ ಬಣಗಳೆರಡು ಒಂದಾಗಬೇಕು ಅಂದರೆ ಶಶಿಕಲಾರನ್ನು ಪಕ್ಷದಿಂದ ಹೊರಗಿಡಬೇಕು ಎಂಬ ಪೂರ್ವ ಷರತ್ತು ಹಾಕಲಾಯಿತೋ ಆಗಿನಿಂದ ಬೆಂಗಳೂರು ಸೆಂಟ್ರಲ್ ಜೈಲಿನ ಕಡೆ ಯಾರೂ ಸುಳಿಯುತ್ತಿಲ್ಲ.

ಇತ್ತೀಚೆಗೆ ಆಕೆ ಯಾರಾ ಜತೆಗೂ ಮಾತನಾಡೋದಿಲ್ಲ. ಬಹುತೇಕ ಸಮಯ ಆಕೆಯ ಸೆಲ್ ನಲ್ಲೇ ಇರ್ತಾರೆ. ಒಂದೋ ಪತ್ರಿಕೆ ಓದ್ತಾ ಅಥವಾ ತಮಿಳು ಸಿನಿಮಾ ನೋಡ್ತಾ ಕಾಲ ಕಳೆಯುತ್ತಾರೆ. ಕಾರಿಡಾರ್ ನಲ್ಲಿ ಓಡಾಡುವುದನ್ನು ಸಹ ಸಂಪೂರ್ಣ ನಿಲ್ಲಿಸಿಬಿಟ್ಟಿದ್ದಾರೆ. ಶಶಿಕಲಾ ಜೈಲು ಸೇರಿದ ದಿನಕ್ಕೂ ಇಂದಿಗೂ ಬಹಳ ಬದಲಾವಣೆಗಳಾಗಿವೆ.

ಆಕೆಯ ಭೇಟಿಗೆ ಬರುತ್ತಿದ್ದವರ ಸಂಖ್ಯೆ ಕುಸಿದುಹೋಗಿದೆ. ಅಕೆ ಬೆಂಬಲಿಗರ ಸಂಖ್ಯೆಯೂ ಪಕ್ಷದಲ್ಲಿ ಬಿದ್ದುಹೋಗಿದೆ. ಆಕೆಯ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಬಂದ ಮೇಲೆ ಬದುಕೇ ಬದಲಾಗಿ ಹೋಗಿದೆ. ಶಶಿಕಲಾ ನಟರಾಜನ್ ಇನ್ನೇನು ತಮಿಳುನಾಡಿನ ಮುಖ್ಯಮಂತ್ರಿ ಆಗೇಬಿಟ್ಟರು ಅನ್ನೋವರೆಗೆ ಪರಿಸ್ಥಿತಿ ಇತ್ತು.
ಆಕೆಯ ಪಾಲಿಗೆ ಸುಪ್ರೀಂ ಕೋರ್ಟ್ ತೀರ್ಪು ಶಾಪವಾಯಿತು. ವಿಪರೀತ ಸೊಳ್ಳೆ ಕಾಟ ಆಗಿದೆ. ಒಂದು ಸೊಳ್ಳೆ ಪರದೆ ಕೊಡಿ ಎಂದು ಅಧಿಕಾರಿಗಳಿಗೆ ಕೇಳಿಕೊಂಡಿದ್ದಾರೆ. ಸದ್ಯಕ್ಕೆ ಆಕೆಗೆ ನೀಡಿರುವ ಸೌಕರ್ಯ ಅಂದರೆ ಟಿವಿ ಮತ್ತು ಫ್ಯಾನ್. ಆದರೂ ಅಕೆಯ ಗಮನ ತಮಿಳುನಾಡು ರಾಜಕೀಯದ ಕಡೆ ಇರುತ್ತದೆ.

ಶಶಿಕಲಾ ನಟರಾಜನ್ ಬಗ್ಗೆ ಆರಂಭದಲ್ಲಿ ಅಬ್ಬರವಾಗಿ ಬರುತ್ತಿದ್ದ ಸುದ್ದಿಯು ಬರಿದಾದವು. ಆಕೆ ಮಾತ್ರ ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಳ್ಳುತ್ತಾರೆ. ಆಕೆ ಮಾತನಾಡುವುದು ಕಡಿಮೆ ಮತ್ತು ಇನ್ನೊಬ್ಬರ ಜತೆಗೆ ಮಾತನಾಡುವುದು ಇನ್ನು ಕಡಿಮೆ.












Click it and Unblock the Notifications