ಜೂ.4ರ ಮೆಟ್ರೋ ಮುಷ್ಕರ ಕೈಬಿಟ್ಟ ನೌಕರರು
ಬೆಂಗಳೂರು, ಮೇ 30: ನಮ್ಮ ಮೆಟ್ರೋ ನೌಕರರು ಜೂನ್ 4 ರಂದು ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ನಡೆಸದಿರುವಂತೆ ಕ್ರಮ ಕೈಗೊಂಡಿದ್ದಾರೆ. ಮೆಟ್ರೋ ನೌಕರರ ಮುಷ್ಕರ ಕುರಿತಂತೆ ಹೈಕೋರ್ಟ್ ನಲ್ಲಿ ಸೋಮವಾರ ನಡೆಯಬೇಕಿದ್ದ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಅಂದು ಮುಷ್ಕರ ನಡೆಸದಿರುವಂತೆ ಹೈಕೋರ್ಟ್ ಸೂಚನೆಯನ್ನು ನೌಕರರು ಒಪ್ಪಿಕೊಂಡಿದ್ದಾರೆ. ನಿಗದಿಯಂತೆ ನ್ಯಾ.ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ಬಿಎಂಆರ್ ಸಿಎಲ್ ಎಸ್ಮಾ ಜಾರಿಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋಟಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಿತು.
ಆಗ ನಿಗಮದ ಪರ ವಕೀಲರು ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಕಾರ್ಮಿಕ ಆಯುಕ್ತರು ಮೆಟ್ರೋ ನೌಕರರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಆಯುಕ್ತರು ಮಾತುಕತೆ ವಿವರಗಳನ್ನು ನ್ಯಾಯಾಲಯಕ್ಕೆ ವರದಿ ರೂಪದಲ್ಲಿ ಸಲ್ಲಿಸಲಿದ್ದಾರೆ ಹಾಗಾಗಿ ವಿಚಾರಣೆ ಮುಂದೂಡಬೇಕು ಎಂದು ವಕೀಲರು ಮನವಿ ಮಾಡಿದರು.

ಈ ಮಧ್ಯೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿರುವ ನೌಕರರ ಸಂಘ, ಜೂ.4 ರಂದು ನೌಕರರು ಮುಷ್ಕರ ನಡೆಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ. ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ನೌಕರರ ಸಂಘ ಕೋರ್ಟ್ ತೀರ್ಮಾನಕ್ಕೆ ಕಾಯಲು ತೀರ್ಮಾನಿಸಿದೆ. ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮುಷ್ಕರಕ್ಕೂ ತಯಾರಿ ನಡೆಸಿದೆ.












Click it and Unblock the Notifications