ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಸುರಕ್ಷಿತ, ಭಯ ಬೇಡ: ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 09: ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವುದು ಸುರಕ್ಷಿತವಾಗಿದೆ ಪಾವತಿದಾರರು ಭಯ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಭರವಸೆ ನೀಡಿದೆ.
ತೆರಿಗೆ ಪಾವತಿ ವೇಳೆ ಸೂಕ್ಷ್ಮ ವಿಚಾರಗಳನ್ನು ಆನ್‌ಲೈನ್ ಮೂಲಕ ಹಂಚಿಕೊಳ್ಳಬೇಡಿ ಎನ್ನುವ ಅಲರ್ಟ್ ರೀಡಿಂಗ್‌ಗಳು ಬರುತ್ತಿರುವುದು ತೆರಿಗೆ ಪಾವತಿದಾರರಿಗೆ ಭಯ ಹುಟ್ಟಿಸಿದೆ. ಆನ್‌ಲೈನ್‌ನಲ್ಲಿ ನೀವು ನೀಡುವ ದಾಖಲೆಗಳು ಸುರಕ್ಷಿತವಾಗಿರುತ್ತದೆ.
ಯಾವುದೇ ಕಾರಣಕ್ಕೂ ಬೇರೆ ಯಾರಿಗೂ ಮಾಹಿತಿ ರವಾನೆಯಾಗಲು ಸಾಧ್ಯವಿಲ್ಲ ಹಾಗಾಗಿ ನಿಮ್ಮ ಎಲ್ಲ ದಾಖಲೆಗಳು ಸುರಕ್ಷಿತ, ಭಯ ಪಡುವುದು ಬೇಡ ಎಂದು ಬಿಬಿಎಂಪಿ ಜಂಟಿ ಆಯುಕ್ತ(ರೆವಿನ್ಯೂ) ಎಂ. ವೆಂಕಟಾಚಲಪತಿ ಭರವಸೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆನ್‌ಲೈನ್ ಪಾವತಿ ಮುಂದುವರೆಯುತ್ತಿದೆ ಇಲ್ಲಿಯವರೆಗೆ ಆನ್‌ಲೈನ್ ಮೂಲಕ ಒಟ್ಟು 44 ಕೋಟಿ ತೆರಿಗೆ ಸಂಗ್ರಹವಾಗಿದೆ. ಯಾರ ದಾಖಲೆಗಳನ್ನೂ ಕದಿಯಲು ಸಾಧ್ಯವಿಲ್ಲ ಎಲ್ಲವೂ ಸುರಕ್ಷಿತವಾಗಿದೆ. ಆದರೆ ಇಂಟರ್ ನೆಟ್ ನಿಧಾನವಿರುವ ಕಾರಣ ಹೆಚ್ಚು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಚುನಾವಣಾ ಕೆಲಸದಲ್ಲಿ ಬಿಬಿಎಂಪಿ ಅಧಿಕಾರಿಗಳು ತೊಡಗಿದ್ದಾರೆ.












Click it and Unblock the Notifications