ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಗೇಟ್‌ಗೆ ಬೀಗ

|
Google Oneindia Kannada News

ಬೆಂಗಳೂರು, ಏಪ್ರಿಲ್ 05: ಕಳೆದ ಒಂದು ವಾರದಿಂದ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ವಾಹನಗಳಿಗೆ ನಿಲುಗಡೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಹಾಗೆಯೇ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಲುಗಡೆ ನಿಷೇಧಿಸಲಾಗಿದೆ ಎನ್ನುವ ಫಲಕಗಳು ಕಾಣಸಿಗುತ್ತಿವೆ. ಆದರೆ ಪಾರ್ಕಿಂಗ್ ಗೆ ಗುತ್ತಿಗೆ ತೆಗೆದುಕೊಂಡಿರುವವರು ಗುತ್ತಿಗೆಯಿಂದ ಹಿಂದೆ ಸರಿದಿದ್ದಾರೆ. 15 ತಿಂಗಳ ಗುತ್ತಿಗೆಯನ್ನು ನೀಡಲಾಗಿದ್ದು ಇದೀಗ ನಾಲ್ಕು ತಿಂಗಳ ಹಿಂದಷ್ಟೇ ಕಾಮಗಾರಿ ಪೂರ್ಣಗೊಂಡಿತ್ತು.

ಮೆಟ್ರೋ: 6 ಬೋಗಿಗಳ ಅಳವಡಿಕೆಗೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇಲ್ಲ ಮೆಟ್ರೋ: 6 ಬೋಗಿಗಳ ಅಳವಡಿಕೆಗೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇಲ್ಲ

ಎಸ್‌ ಜಿ ಗ್ರೂಪ್ ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಮಾರ್ಚ್ 28ರಿಂದ ಪಾರ್ಕಿಂಗ್ ಗೇಟಿಗೆ ಬೀಗ ಹಾಕಲಾಗಿದೆ. ಪ್ರತಿನಿತ್ಯ 82 ನಾಲ್ಕು ಚಕ್ರದ ವಾಹನಗಳು ಹಾಗೂ 500 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಪ್ರಯಾಣಿಕರಿಗೆ ಸುಲಭವಾಗಿಸಲು ನಾಲ್ಕು ದಿಕ್ಕುಗಳಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

No Parking space at Kempegowda Metro Station

ಗುಬ್ಬಿ ತೋಟದಪ್ಪ ರಸ್ತೆಯ ಬಳಿ ಎರಡು ಪ್ರವೇಶ ದ್ವಾರ , ಟ್ಯಾಂಕ್ ಬಂಡ್ ರಸ್ತೆ ಬಳಿ ಎರಡು ಪ್ರವೇಶ ದ್ವಾರವನ್ನು ಕಲ್ಪಿಸಲಾಗಿತ್ತು. ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರು ಹೇಳುವ ಪ್ರಕಾರ ಇತ್ತೀಚೆಗೆ ಗುತ್ತಿಗೆ ಪಡೆದ ಕಂಪನಿಯು ತಮ್ಮ ಕೆಲಸವನ್ನು ನಿಲ್ಲಿಸಲು ತೀರ್ಮಾನಿಸಿತ್ತು. ಅವರು ಮೂರು ತಿಂಗಳುಗಳ ನೋಟಿಸ್ ನೀಡಿದ್ದಾರೆ.

ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿದೆ ಹಸಿರು ಮೆಟ್ರೋ!ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿದೆ ಹಸಿರು ಮೆಟ್ರೋ!

ಆದರೆ ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ. ಅವರು ಬಳಸಿಕೊಳ್ಳಬಹುದು ಬೇರೆ ಕಂಪನಿಯವರು ವಹಿಸಿಕೊಳ್ಳುವವರೆಗೆ ಪಾರ್ಕಿಂಗ್ ಉಚಿತವಾಗಿರುತ್ತದೆ ಬಂದ್ ಮಾಡುವುದಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಶೀಘ್ರದಲ್ಲಿ ಟೆಂಡರ್ ಕರೆಯಲು ಸಾಧ್ಯವಿಲ್ಲ.

ಪಾರ್ಕಿಂಗ್ ಪ್ರಾರಂಭವಾಗಿ ಒಂದು ತಿಂಗಳವರೆಗೆ ಪಾರ್ಕಿಂಗ್ ನಲ್ಲಿ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ರಾತ್ರಿ ಹೊತ್ತು ವಾಹನಗಳನ್ನು ಪಾರ್ಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಸ್ಯದಲ್ಲೂ ಕೂಡ ಅನಧಿಕೃತವಾಗಿ ಅವಕಾಶವನ್ನು ನೀಡಿದ್ದು ಬೆಳಕಿಗೆ ಬಂದಿತ್ತು ಎಂದು ವಿವರಿಸಿದರು.

English summary
For the last one week, those intending to park their vehicles at the Kempegowda metro station were greeted with a notice stating closed for renovation.However , the reality is that the contractor has decided to anondon the contract owing to poor patronage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X