• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ 'ನೋ ಹೆಲ್ಮೆಟ್, ನೋ ಪೆಟ್ರೋಲ್' ಆಗಸ್ಟ್ 05ರಿಂದ ಶುರು

|

ಬೆಂಗಳೂರು, ಆಗಸ್ಟ್ 02: ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಹೆಚ್ಚಿನ ಮೊತ್ತದ ದಂಡ ವಿಧಿಸುವ ತಿದ್ದುಪಡಿಯೊಂದಿಗೆ ಮೋಟಾರು ವಾಹನ ಕಾಯ್ದೆ ಜಾರಿಗೊಂಡಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಹೊಸ ನಿಯಮ 'ನೋ ಹೆಲ್ಮೆಟ್, ನೋ ಪೆಟ್ರೋಲ್' ಆಗಸ್ಟ್ 05ರಿಂದ ಜಾರಿಗೊಳ್ಳಲಿದೆ. ಇದಕ್ಕೂ ಮುನ್ನ ಈ ನಿಯಮದ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಚರ್ಚೆ ನಡೆಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

"ಈಗಾಗಲೇ ನೋಯ್ಡಾ, ಆಲಿಘರ್ ನಲ್ಲಿ ಈ ನಿಯಮ ಜಾರಿಯಲ್ಲಿದ್ದು, ತಕ್ಕಮಟ್ಟಿನ ಯಶಸ್ಸು ಗಳಿಸಿದೆ. ಈ ನಿಯಮದ ಪ್ರಕಾರ ಹೆಲ್ಮೆಟ್ ಧರಿಸದಿದ್ದರೆ ಇಂಧನ ಹಾಕಿಸಿಕೊಳ್ಳಲು ಆಗುವುದಿಲ್ಲ, ರಸ್ತೆ ಸುರಕ್ಷತೆ, ವಾಹನ ಸವಾರರ ಭದ್ರತೆ, ಇಂಧನ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಸೂಕ್ತವಾಗಿದೆ" ಎಂದು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರಿಶೇಖರನ್ ಹೇಳಿದ್ದಾರೆ.

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ? ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

ಇನ್ನು ದಂಡಗಳ ವಿಷಯಕ್ಕೆ ಬಂದರೆ, ತ್ರಿಬಲ್ ರೈಡಿಂಗ್ ಮಾಡಿದರೆ ವಿಧಿಸುತ್ತಿದ್ದ 100 ರೂ. ದಂಡವನ್ನು 2 ಸಾವಿರಕ್ಕೆ ಏರಿಕೆ ಮಾಡಲಾಗುತ್ತದೆ. ಡಿಎಲ್ ಕ್ಯಾನ್ಸಲ್ ಮಾಡುವ ಅವಕಾಶವೂ ಇದೆ. ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 1000 ರೂ. ಇದ್ದ ದಂಡದ ಮೊತ್ತ 2 ಸಾವಿರಕ್ಕೆ ಏರಿಕೆಯಾಗಲಿದೆ. ಸೀಟ್ ಬೆಲ್ಟ್ ಹಾಕಿಲ್ಲದಿದ್ದರೆ 1000 ರೂ. ದಂಡ ವಿಧಿಸುವ ಅವಕಾಶವಿದೆ.

ದ್ವಿಚಕ್ರವಾಹನ ಸವಾರರ ಸುರಕ್ಷತೆಗಾಗಿ ದೇಶದ ಹಲವೆಡೆಯಲ್ಲಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 129 ಅನ್ವಯ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವಿದೆ. ಕರ್ನಾಟಕದಲ್ಲಿ ಈ ನಿಯಮ ಇಲ್ಲಿ ತನಕ ಸರಿಯಾಗಿ ಪಾಲನೆಯಾಗಿಲ್ಲ. ಕಾನೂನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ ಪ್ರಕಾರ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಕಾನೂನನ್ನು ಕಟ್ಟುನಿಟ್ಟಾಗಿ ವಾಹನ ಸವಾರರು ಪಾಲಿಸುವಂತೆ ಮಾಡಲು ಪೆಟ್ರೋಲ್ ಬಂಕ್ ಮಾಲೀಕರು ಈ ರೀತಿ ನಿಯಮ ಕಂಡುಕೊಂಡಿದ್ದಾರೆ. ಹೆಲ್ಮೆಟ್ ರಹಿತ ವಾಹನ ಚಾಲನೆಗೆ ದಂಡದ ಮೊತ್ತವನ್ನು ಹೆಚ್ಚಿಸಿದ್ದರೂ, ಹೆಲ್ಮೆಟ್ ಧಾರಿಗಲ ಸಂಖ್ಯೆ ಹೆಚ್ಚಾಗಿರಲಿಲ್ಲ.

'ನೋ ಹೆಲ್ಮೆಟ್ - ನೋ ಪೆಟ್ರೋಲ್' ನಿಯಮ ಬಹುತೇಕ ಆಗಸ್ಟ್ 05ರಿಂದ ಜಾರಿಗೆ ಬರಲು ಸಜ್ಜಾಗಿದೆ. ಈ ಕುರಿತು ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಪೊಲೀಸರು ಮಾತುಕತೆ ಫಲಪ್ರದವಾದರೆ, ಅಂದಿನಿಂದಲೇ ನಿಯಮ ಜಾರಿಗೆ ಬರಬಹುದು. ಜನವರಿ 01 ರಿಂದ ಜೂನ್ 30ರ ಅವಧಿಯಲ್ಲಿ ಹೆಲ್ಮೆಟ್ ನಿಯಮ ಉಲ್ಲಂಘನೆ ಮಾಡಿದ್ದರಿಂದ 105 ಸವಾರರು ಸಾವನ್ನಪ್ಪಿದ್ದರೆ, 667 ಮಂದಿ ಗಾಯಗೊಂಡಿದ್ದಾರೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

English summary
No Helmet, No Fuel: New rule to be implemented in Bengaluru from Aug 5
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X