ಹೊಸ ವರ್ಷಕ್ಕೆ ನಮ್ಮ ಮೆಟ್ರೋದಲ್ಲಿ ಪಾಲಿಸಬೇಕಾದದ್ದು ಏನು?
ಬೆಂಗಳೂರು, ಡಿಸೆಂಬರ್ 31: 2019 ನೇ ವರ್ಷಕ್ಕೆ ಇನ್ನೇನು ಗುಡ್ ಬಾಯ್ ಹೇಳಲು ಬೆಂಗಳೂರಿಗರು ತುದಿಗಾಲ ಮೇಲೆ ನಿಂತಿದ್ದಾರೆ. 2020 ನೇ ವರ್ಷ ಬರಮಾಡಿಕೊಳ್ಳಲು ಬೆಂಗಳೂರಿಗರು ಇಂದು ರಾತ್ರಿ ವಿಶೇಷ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ನಗರದ ಪ್ರಮುಖ ಸ್ಥಳಗಳಾದ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ ಸಿದ್ಧಗೊಂಡಿವೆ.
ಹೊಸ ವರ್ಷಾಚರಣೆ ಮಾಡಬೇಕು ಎನ್ನವರಿಗೆ ನಮ್ಮ ಮೆಟ್ರೋ ಕೂಡ ಸಾತ್ ನೀಡಿದ್ದು, ಮೆಟ್ರೋದಲ್ಲಿ ಸಂಚರಿಸುವ ಅವಧಿಯನ್ನು ರಾತ್ರಿ 2 ಗಂಟೆಗೆ ವಿಸ್ತರಿಸಿರುವುದು ಈಗಾಗಲೇ ಖಚಿತವಾಗಿದೆ. ಆದರೆ, ಮಂಗಳವಾರ ಡಿಸೆಂಬರ್ 31 ರಂದು ಮದ್ಯಪಾನ ಮಾಡಿ ಮೆಟ್ರೋ ರೈಲು ಹತ್ತುವ ಹಾಗಿಲ್ಲ ಎಂದು ಬಿಎಂಆರ್‌ಸಿಎಲ್ ಕಟ್ಟುನಿಟ್ಟಿನ ಆದೇಶ ಮಾಡಿದೆ. ಇದೇ ನಿಯಮವನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸಲು ಮೆಟ್ರೋ ಮುಂದಾಗಿದೆ ಎಂದು ತಿಳಿದು ಬಂದಿದೆ. ಮದ್ಯಪಾನ ಮಾಡಿ ಮೆಟ್ರೋ ಪ್ರವೇಶಿಸಿ, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವವರನ್ನು ಮೆಟ್ರೋ ನಿಲ್ದಾಣದಿಂದ ಹೊರಹಾಕುವುದಲ್ಲದೇ ಸಂಬಂದಿಸಿದ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಆರ್‌ಸಿಎಲ್ ಎಚ್ಚರಿಸಿದೆ.

ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಅನೇಕ ಪ್ರಮುಖ ಮಾಲ್ ಹೋಟೆಲ್‌ಗಳಿಗೆ ತೆರಳಲಿದ್ದಾರೆ. ಇದರಿಂದ ಜನಕ್ಕೆ ಅನಾನುಕೂಲ ಆಗದಿರಲೆಂದು ಬಿಎಂಆರ್‌ಸಿಎಲ್ ಅವತ್ತೊಂದಿನ ಮಾತ್ರ ರಾತ್ರಿ 2 ಗಂಟೆವರೆಗೆ ಈ ಸೇವೆ ನೀಡಿದೆ.












Click it and Unblock the Notifications