ಬಿಎಂಟಿಸಿ ಬಸ್‌ಗಳ ಕಿಟಕಿ ಮೇಲ್ಭಾಗದ ಜಾಹಿರಾತುಗಳಿಗೆ ಬ್ರೇಕ್‌

Recommended Video

      ಬಿಎಂಟಿಸಿ ಬಸ್‌ಗಳ ಕಿಟಕಿ ಮೇಲಿನ ಜಾಹಿರಾತುಗಳಿಗೆ ಬ್ರೇಕ್‌ | Oneindia Kannada

      ಬೆಂಗಳೂರು, ಜೂನ್ 25: ಬಿಎಂಟಿಸಿ ಬಸ್‌ಗಳಲ್ಲಿರುವ ಪ್ರಯಾಣಿಕರಿಗೆ ಬಸ್‌ನಿಂದ ಹೊರಗಡೆಯ ಪ್ರದೇಶಗಳು ಕಾಣದಂತೆ ಕಿಟಕಿಯ ಮೇಲ್ಭಾಗದಲ್ಲಿ ಜಾಹಿರಾತುಗಳ ಅಳವಡಿಕೆಗೆ ತಡೆ ಬೀಳಲಿದೆ. ಬಿಎಂಟಿಸಿ ಬಸ್‌ಗಳ ಗಾಜಿನ ಮೇಲೆ ಇನ್ನುಮುಂದೆ ಜಾಹಿರಾತುಗಳನ್ನು ಹಾಕುವಂತಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಬಿಎಂಟಿಸಿ ತೆಗೆದುಕೊಂಡಿದೆ.

      ದಿನನಿತ್ಯ ಸಾವಿರಾರು ಮಂದಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ, ಬಿಎಂಟಿಸಿ ಬಸ್‌ನ ಗಾಜಿನ ಮೇಲೆ ಅಥವಾ ಪ್ರಯಾಣಿಕರಿಗೆ ಹೊರಗಡೆ ಕಾಣದ ಹಾಗೆ ಜಾಹಿರಾತು ಅಳವಡಿಸಲಾಗುತ್ತಿತ್ತು. ಇದರಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದರು. ತಾವು ಇಳಿಯುವ ಸ್ಥಳಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಜಾಹಿರಾತು ತೆಗೆದು ಹಾಕಿ ಎಂದು ಒತ್ತಾಯಿಸಿದ್ದರು.

      ಬದಲಾಗಿ ಕಿಟಕಿ ಮೇಲ್ಭಾಗದಲ್ಲಿ ಬಸ್‌ ಸಂಚರಿಸುವ ವಿವಿಧ ಮಾರ್ಗಗಳ ಮಾಹಿತಿ ಸಿಗಲಿದೆ. ಕಿಟಕಿ ಮೇಲ್ಭಾಗದಲ್ಲಿ ಗಾಜಿನಲ್ಲಿ ಜಾಹಿರಾತು ಹಾಕುವುದುರಿಂದ ಕಿರಿಕಿರಿಯಾಗುತ್ತಿರುವ ಬಗ್ಗೆ ನಿರಂತರ ದೂರುಗಳು ಬಂದಿದ್ದವು. ಬಸ್‌ನ ಅಂದಕ್ಕೂ ಈ ಜಾಹಿರಾತು ಅಡ್ಡಿಯಾಗುತ್ತಿತ್ತು.

      No Advertisement on BMTC bus windows glasses

      ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ನಿಗಮದ ಪ್ರಥಮ ಆದ್ಯತೆ ಆಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.

      ನಿಗಮ 2013ರಲ್ಲಿ ಪರಿಸರ ವಾಹಿನಿ, ಸುವರ್ಣ, ಇಕೋ ಪ್ಲಸ್‌, ಪುಷ್ಪಕ್ ಸಾರಿಗೆ ಸೇರಿದಂತೆ ನಿಗಮದ 3,500 ಬಸ್‌ಗಳ ಒಳ-ಹೊರಕವಚ ಮತ್ತು ಕಿಟಕಿ ಮೇಲ್ಭಾಗವನ್ನು ಜಾಹಿರಾತಿಗೆ ಬಳಸಿಕೊಳ್ಳಲು ಟೆಂಡರ್ ಆಹ್ವಾನಿಸಿತ್ತು.

      ಶಿವ ಆಡ್ಸ್ ಇಂಡಿಯಾ ಪ್ರೈ.ಲಿ. ಮತ್ತು ಸಾಯಿ ಅಡ್ವಟೈಸರ್ಸ್‌ ಸಂಸ್ಥೆ ಪಡೆದಿದ್ದ ಐದು ವರ್ಷಗಳ ಜಾಹಿರಾತು ಗುತ್ತಿಗೆ ಅವಧಿ ಕ್ರಮವಾಗಿ ಮುಂದಿನ ಜುಲೈ ಮತ್ತು ಆಗಸ್ಟ್‌ನಲ್ಲಿ ಅಂತ್ಯಗೊಳ್ಳಲಿದೆ. ಮೂರೂವರೆ ಸಾವಿರ ಬಸ್‌ಗಳಿಂದ ಜಾಹಿರಾತಿನಿಂದ ನಿಗಮಕ್ಕೆ ಮಾಸಿಕ 1 ಕೋಟಿ ರೂ. ಆದಾಯ ಬರುತ್ತಿತ್ತು ಇನ್ನುಮುಂದೆ ಅದು ಖೋತಾ ಆಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+