ಬೆಂಗಳೂರಲ್ಲಿ ರಾತ್ರಿ ಸ್ವಚ್ಛತೆ: 98 ಟನ್ ಕಸ ಸಂಗ್ರಹಿಸಿದ ಪಾಲಿಕೆ!
ಬೆಂಗಳೂರಿನಲ್ಲಿ ರಾತ್ರಿ ವೇಳೆ ಸ್ವಚ್ಛತಾ ಕಾರ್ಯಾಚರಣೆಯಂತಹ ಭಿನ್ನವಾದ ವಿಶೇಷ ಅಭಿಯಾನಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ತೆಗೆದುಕೊಳ್ಳುತ್ತಿದೆ. ಇದೀಗ ಮೊದಲ ಹಂತದಲ್ಲಿ ಮಾಡಿರುವ ಸ್ವಚ್ಛತಾ ಅಭಿಯಾನದಿಂದ ಮಹತ್ವದ ಬದಲಾವಣೆ ಆಗಿದೆ. ಬೆಂಗಳೂರು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಶನಿವಾರ ರಾತ್ರಿ 10.30ಕ್ಕೆ ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರ ಸೇತುವೆಯಿಂದ ವೀರಣ್ಣಪಾಳ್ಯ ಜಂಕ್ಷನ್(ORR) ವರೆಗೆ ಸುಮಾರು 7.1 ಕಿಲೋ ಮೀಟರ್ ತೀವ್ರ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ನಡೆದ ಸ್ವಚ್ಛತಾ ಕಾರ್ಯಾಚರಣೆ ಇದಾಗಿದೆ. ಅಭಿಯಾನದ ವೇಳೆ ಒಟ್ಟು 75 ಆಟೋ ಟಿಪ್ಪರ್‌ಗಳು, 16 ಟ್ರ್ಯಾಕ್ಟರ್‌ಗಳು, 2 ಕಾಂಪ್ಯಾಕ್ಟರ್‌ಗಳು, 2 ಜೆಟ್ಟಿಂಗ್ ಯಂತ್ರಗಳು, 4 ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳು ಮತ್ತು 3 ಜೆಸಿಬಿಗಳು ಬಳಸಿ ವ್ಯಾಪಕ ಹೂಳು ಮತ್ತು ಕಸ ತೆರವು ಕಾರ್ಯ ನಡೆದಿದೆ. ಸುಮಾರು 3.2 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ.

80 ಅಡಿ ರಸ್ತೆಯ Imperio Hotel ಜಂಕ್ಷನ್‌ನಿಂದ ನಾಗವಾರ ಸಿಗ್ನಲ್ ವರೆಗೆ ಸುಮಾರು 3.2 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಉತ್ತರ ನಗರ ಪಾಲಿಕೆ ಆಯುಕ್ತರು ಸ್ಥಳೀಯ ಸ್ವಚ್ಛತಾ ಕಾರ್ಯ ಮತ್ತು ರಸ್ತೆ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲಾಗಿದೆ.
ಪ್ರಮುಖ ನಿರ್ದೇಶನಗಳು:
1. ಅಂಗಡಿ ಮುಂದೆ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಹಾಗೂ ದಂಡ ವಿಧಿಸಲು ಸೂಚನೆ.
2. ಬಿಡಿಎ ಪಾರ್ಕ್ ಆವರಣವನ್ನು ಸರಿಯಾಗಿ ನಿರ್ವಹಿಸಲು ಸೂಚನೆ.
3. ಸರ್ವಿಸ್ ರಸ್ತೆಯ ಉದ್ದಕ್ಕೂ ಇರುವ ಗುಂಡಿಗಳನ್ನು ತಕ್ಷಣ ಮುಚ್ಚಲು ತಿಳಿಸಲಾಗಿದೆ.
4. ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು.
ಕಾರ್ಯಾಚರಣೆಯ ಫಲಿತಾಂಶ:
1. ರಿಂಗ್‌ರಸ್ತೆಯ ಉದ್ದಕ್ಕೂ 16 ಟ್ರ್ಯಾಕ್ಟರ್‌ಗಳಿಂದ ಸುಮಾರು 28 ಟನ್‌ಗಳಷ್ಟು ಹೂಳು ತೆರವು ಮಾಡಲಾಗಿದೆ.
2. 2 ಕಾಂಪ್ಯಾಕ್ಟರ್‌ಗಳಿಂದ 18 ಟನ್‌ಗಳಷ್ಟು ಕಸ ಹಾಗೂ ಸಣ್ಣ ಮರಗಳ ಕತ್ತರಿಸುವಿಕೆ ತೆರವು ಗೊಂಡಿದೆ.
3. 2 ಜೆಟ್ಟಿಂಗ್ ಯಂತ್ರಗಳ ಮೂಲಕ 11 ಬಸ್‌ಸ್ಟಾಪ್‌ಗಳಲ್ಲಿ ವಾಟರ್‌ವಾಶ್ ಕ್ಲೀನಿಂಗ್ ಕಾರ್ಯ ಪೂರ್ಣಗೊಂಡಿದೆ.
ಅಕ್ಟೋಬರ್ 10 ರಂದು 40 ಟನ್ ತ್ಯಾಜ್ಯ ವಿಲೇವಾರಿ: ಉತ್ತರ ನಗರ ಪಾಲಿಕೆ ಸರ್ವಜ್ಞ ನಗರ ವಿಭಾಗದಲ್ಲಿ 375 ಪೌರಕಾರ್ಮಿಕರು, 5 ಟ್ರ್ಯಾಕ್ಟರ್‌ಗಳು, 1 ಜೆಸಿಬಿ, ಜೆಹಚ್ಐ, ಮಾರ್ಷಲ್‌ಗಳು ಪೌರಕಾರ್ಮಿಕರ ಮೇಲ್ವಿಚಾಕರು ನೇತೃತ್ವದಲ್ಲಿ, 8 ಟನ್ ತ್ಯಾಜ್ಯ, 18 ಟನ್ ಮರ ಕತ್ತರಿಸಿರುವ ಭಾಗ ಜಾಗೂ 14 ಟನ್ ಹೂಳು ಮತ್ತು ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 40 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.
ಅಕ್ಟೋಬರ್ 11 ರಂದು 58 ಟನ್ ತ್ಯಾಜ್ಯ ವಿಲೇವಾರಿ: ಉತ್ತರ ನಗರ ಪಾಲಿಕೆ ಸರ್ವಜ್ಞ ನಗರ ವಿಭಾಗದಲ್ಲಿ 375 ಪೌರಕಾರ್ಮಿಕರು, 5 ಟ್ರ್ಯಾಕ್ಟರ್ ಗಳು, 1 ಜೆಸಿಬಿ, ಜೆಹಚ್ಐ, ಮಾರ್ಷಲ್ ಗಳು ಪೌರಕಾರ್ಮಿಕರ ಮೇಲ್ವಿಚಾಕರು ನೇತೃತ್ವದಲ್ಲಿ, 18 ಟನ್ ತ್ಯಾಜ್ಯ, 12 ಟನ್ ಮರ ಕತ್ತರಿಸಿರುವ ಭಾಗ ಜಾಗೂ 28 ಟನ್ ಹೂಳು ಮತ್ತು ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 58 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಒಟ್ಟಾರೆಯಾಗಿ ಎರಡು ದಿನಗಳು ಸೇರಿ 98 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರವನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ವಿಶ್ರಾಂತಿ ಇಲ್ಲದೆ ನಿರಂತರವಾಗಿ ಶ್ರಮಿಸುತ್ತಿದ್ದು ಸಾರ್ವಜನಿಕರು ನಮ್ಮ ಪಾಲಿಕೆಯ ತಂಡದೊಂದಿಗೆ ಸಹಕರಿಸಬೇಕಾಗಿ ಉತ್ತರ ನಗರ ಪಾಲಿಕೆಯ ಆಯುಕ್ತರು ವಿನಂತಿಸಿದ್ದಾರೆ.












Click it and Unblock the Notifications