NICE Road Toll Hike: ಬೆಂಗಳೂರು- ಮೈಸೂರು ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ: ಹೊಸ ದರಗಳ ಬಗ್ಗೆ ತಿಳಿಯಿರಿ
ಬೆಂಗಳೂರು, ಜೂನ್ 30: ಜುಲೈ 1 ರಿಂದ ಜಾರಿಗೆ ಬರುವಂತೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕವನ್ನು ಶೇಕಡಾ 11 ರಷ್ಟು ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ನೈಸ್ ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE) ಹೆಚ್ಚುತ್ತಿರುವ ವೆಚ್ಚಗಳನ್ನು ಉಲ್ಲೇಖಿಸಿ ಟೋಲ್ ಶುಲ್ಕವನ್ನು ಪರಿಷ್ಕರಿಸಿದೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆ ( ಕಾರುಗಳಿಗೆ ರೂ 40 ಮತ್ತು ದ್ವಿಚಕ್ರ ವಾಹನಗಳಿಗೆ ರೂ 15 ), ಕನಕಪುರ ರಸ್ತೆಯಿಂದ ಕ್ಲೋವರ್ ಲೀಫ್ ಜಂಕ್ಷನ್‌ವರೆಗೆ ( ಕಾರುಗಳಿಗೆ ರೂ 30 ಮತ್ತು ದ್ವಿಚಕ್ರ ವಾಹನಗಳಿಗೆ ರೂ 10 ) ಪರಿಷ್ಕೃತ ದರಗಳು ಜಾರಿಗೆ ಬರಲಿದೆ.
ಮೈಸೂರು ರಸ್ತೆಗೆ ( ಕಾರುಗಳಿಗೆ ರೂ. 25 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 10 ), ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ( ಕಾರುಗಳಿಗೆ ರೂ. 55 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 25), ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ ( ಕಾರುಗಳಿಗೆ ರೂ. 45 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 15 ) ಮತ್ತು ಲಿಂಕ್ ರಸ್ತೆ ( ಕಾರುಗಳಿಗೆ ರೂ. 60 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 20 ) ಆಗಿರಲಿದೆ.
ಬಸ್‌ಗಳು, ಟ್ರಕ್‌ಗಳು, ಲಘು ವಾಣಿಜ್ಯ ಮತ್ತು ಮಲ್ಟಿ ಆಕ್ಸಲ್ ವಾಹನಗಳಿಗೂ ದರ ಪರಿಷ್ಕರಿಸಲಾಗಿದೆ.

ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ಟೋಲ್ ದರವನ್ನು ನೈಸ್ ಕಂಪನಿ ಹೆಚ್ಚಿಸಿತ್ತು. ಜೂನ್ 1 ರಿಂದ ಜಾರಿಗೆ ಬಂದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ದರದಲ್ಲಿ ಹೆಚ್ಚಳದ ನಡುವೆ ಇತ್ತೀಚಿನ ಏರಿಕೆ ಮಾಡಲಾಗಿದೆ.
ಕಾರು ಪ್ರಯಾಣಿಕರು ಈಗ ಒಂದೇ ಮಾರ್ಗದ ಪ್ರಯಾಣಕ್ಕೆ 320 ರೂ. ಮತ್ತು ಅದೇ ದಿನ ಹಿಂದಿರುಗುವ ಪ್ರಯಾಣಕ್ಕೆ 485 ರೂಗಳನ್ನು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪಾವತಿಸಬೇಕಾಗುತ್ತದೆ.
NICE ರಸ್ತೆಯು ಆರು-ಪಥದ ಖಾಸಗಿ ಎಕ್ಸ್‌ಪ್ರೆಸ್‌ವೇ ಆಗಿದ್ದು ಅದು ಬೆಂಗಳೂರಿನ ವಿವಿಧ ಭಾಗಗಳನ್ನು ಅದರ ಹೊರ ಜಂಕ್ಷನ್‌ನೊಂದಿಗೆ ಸಂಪರ್ಕಿಸುತ್ತದೆ. ಆರಂಭದಲ್ಲಿ ಬೆಂಗಳೂರು-ಮೈಸೂರು ನಡುವೆ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅದು ವಿವಾದಕ್ಕೆ ಸಿಲುಕಿ ನನೆಗುದಿಗೆ ಬಿದ್ದಿತ್ತು.












Click it and Unblock the Notifications