ನೈಸ್‌ನಿಂದಾಗಿ ನಾಗಸಂದ್ರ-ಮಾದಾವರ ಲೈನ್‌ ಕಾಮಗಾರಿ ಸ್ಥಗಿತ: ಬಿಎಂಆರ್‌ಸಿಎಲ್

ಬೆಂಗಳೂರು ಜನವರಿ 3: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಾಗಸಂದ್ರದಿಂದ ಮಾದಾವರ (ಹಿಂದಿನ BIEC) ನಡುವಿನ ಹಸಿರು ಮಾರ್ಗದ ವಿಸ್ತರಣೆಯ ಒಂದು ಭಾಗದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಪ್ರಮುಖ ಸವಾಲನ್ನು ಎದುರಿಸುತ್ತಿದೆ. ಇದು 3.05 ಕಿಮೀ ಉದ್ದದ ಈ ಮಾರ್ಗ 2022 ರಲ್ಲಿ ಉದ್ಘಾಟನೆಗೊಳ್ಳುವ ಮೊದಲ ಯೋಜನೆಯಾಗಿದೆ. ಆದರೆ ಇದರ ನಿರ್ಮಾಣ ಕಾರ್ಯಕ್ಕೆ ನೈಸ್ ಅಡ್ಡಿಯಾಗಿದೆ.

ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (NICE) ರಸ್ತೆ ಬಳಕೆಗಾಗಿ ನಿರಾಕರಿಸುತ್ತಿದೆ. BMRCL ಮಾಸಿಕ 5.75 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸಲು ಸಿದ್ಧರಿದ್ದರೂ ಅದರ ನಿರ್ಮಾಣ ಸ್ಥಳವನ್ನು ಬಳಸಲು ನೈಸ್ (NICE) ಅನುಮತಿಸುತ್ತಿಲ್ಲ ಎಂದು ಮೂಲಗಳು ಹೇಳುತ್ತಿವೆ. ಹೀಗಾಗಿ ಮೆಟ್ರೋ ಮಾರ್ಗ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು BMRCL ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಾರ್ಗವನ್ನು ಪೂರ್ಣಗೊಳಿಸಲು BMRCL 3,839 ಚ.ಮೀ NICE ಭೂಮಿಯನ್ನು ಪ್ರವೇಶಿಸುವ ಅಗತ್ಯವಿದೆ. ಇದಕ್ಕೆ "NICE ಆಗಸ್ಟ್ 4, 2021 ರ ಪತ್ರದ ಪ್ರಕಾರ ಜೀವಿತ ಅವಧಿಯಲ್ಲಿ ತಿಂಗಳಿಗೆ 5.75 ಲಕ್ಷ ರೂಪಾಯಿಗಳ ಬಾಡಿಗೆ ಶುಲ್ಕವನ್ನು ಕೋರಿತ್ತು. BMRCL ಷರತ್ತನ್ನು ಒಪ್ಪಿಕೊಂಡಿತು ಮತ್ತು ಆಗಸ್ಟ್ 24, 2021 ರಂದು ಅದರ ಸ್ವೀಕಾರವನ್ನು ತಿಳಿಸಿತು. ಅದರ ಹೊರತಾಗಿಯೂ, NICE ನಮಗೆ ಅನುಮತಿ ನೀಡುತ್ತಿಲ್ಲ. ಅವರ ಜಮೀನಿನ ಮೂಲಕ ಕಾಮಗಾರಿ ಪ್ರವೇಶಿಸದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ,'' ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Bengaluru Nagasandra-Madawar Yellow Metro Line shutdown

ನೈಸ್ ರಸ್ತೆಯ ಟ್ರಂಪೆಟ್-ಟರ್ನ್-ಏರಿಯಾದಲ್ಲಿ ಏಳು ಸ್ಪ್ಯಾನ್‌ಗಳನ್ನು ಒಳಗೊಂಡಿದೆ. ಬಿಎಂಆರ್‌ಸಿಎಲ್ ಚಿಕ್ಕಬಿದರಕಲ್ಲು ಮತ್ತು ಮಾದಾವರ ನಡುವೆ ವಾಯಡಕ್ಟ್ ಹಾಕಲು 11 ಮೀಟರ್ ಅಗಲದ ಭೂಮಿಯನ್ನು ಮತ್ತು ಬಿಐಇಸಿ ನಿಲ್ದಾಣ ನಿರ್ಮಾಣಕ್ಕಾಗಿ 11,038 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಈ ಹದಗೆಟ್ಟ ಸಮಸ್ಯೆಯ ಹಿಂದೆ ಇತಿಹಾಸವಿದೆ. ಬಿಎಂಆರ್‌ಸಿಎಲ್ ಚಿಕ್ಕಬಿದರಕಲ್ಲು ಮತ್ತು ಮಾದಾವರ ನಡುವೆ ವಾಯಡಕ್ಟ್ ಹಾಕಲು 11 ಮೀಟರ್ ಅಗಲದ ಭೂಮಿಯನ್ನು ಮತ್ತು ಬಿಐಇಸಿ ನಿಲ್ದಾಣ ನಿರ್ಮಾಣಕ್ಕಾಗಿ 11038 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. "ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. ನೈಸ್ ಮತ್ತು ಲೋಕೋಪಯೋಗಿ ಇಲಾಖೆ ನಡುವಿನ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹೈಕೋರ್ಟ್‌ನಲ್ಲಿ ಹಣ ಠೇವಣಿ ಇಡುವ ಪ್ರಕ್ರಿಯೆಯಲ್ಲಿದೆ,'' ಎಂದು ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದಾಗ NICE ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, "BMRCL ಯೋಜನೆಗಾಗಿ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ನಮಗೆ ಇನ್ನೂ ಯಾವುದೇ ಪರಿಹಾರವನ್ನು ಪಾವತಿಸಲಾಗಿಲ್ಲ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಕೇಳಿದ್ದರಿಂದ ಕೊಟ್ಟಿದ್ದೇವೆ. BMRCL ನ್ಯಾಯಾಲಯದಲ್ಲಿ ನಮಗೆ ಪಾವತಿಸುವುದಾಗಿ ಭರವಸೆ ನೀಡಿತ್ತು. ಆದರೆ 2.5 ವರ್ಷಗಳ ನಂತರ ನಮಗೆ ಏನನ್ನೂ ಪಾವತಿಸಿಲ್ಲ. ಹೀಗಾಗಿ ನಾವು ಕಾಮಗಾರಿಯನ್ನು ತಡೆಹಿಡಿದಿದ್ದೇವೆ" ಎಂದು ಅಶೋಕ್ ಹೇಳಿಕೊಂಡಿದ್ದಾರೆ. ಬಿಎಂಆರ್‌ಸಿಎಲ್‌ ನೈಸ್‌ನೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವುದು ಬಿಕ್ಕಟ್ಟನ್ನು ಪರಿಹರಿಸಲು ಮುಂದಿನ ಮಾರ್ಗವಾಗಿದೆ ಎಂದು ಖೇಣಿ ಹೇಳಿದರು.

ನಮ್ಮ ಮೆಟ್ರೋ ಇನ್ನಷ್ಟು ವಿಸ್ತಾರವಾಗಲಿದೆ. ಮೂರನೇ ಹಂತದ ಯೋಜನೆಯನ್ನು ಅಂತಿಮಗೊಳಿಸಲಾಗಿದ್ದು, 2027-28ರ ವೇಳೆಗೆ ಸೇವೆಗೆ ಸಿದ್ಧವಾಗಲಿದೆ. 42 ಕಿ.ಮೀ. ವಿಸ್ತೀರ್ಣದ ಈ ಯೋಜನೆ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಜೆ.ಪಿ.ನಗರದಿಂದ ಹೆಬ್ಬಾಳದವದರೆಗಿನ 31 ಕಿ.ಮೀ. ಹಾಗೂ ಹೊಸಹಳ್ಳಿ ಟೋಲ್‌ನಿಂದ ಕಡಬಗವರೆಗಿನ 11 ಕಿ.ಮೀ. ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಒಟ್ಟು 31 ನಿಲ್ದಾಣಗಳು ಈ ಮಾರ್ಗದಲ್ಲಿ ತಲೆಯೆತ್ತಲಿವೆ. ಇದರಲ್ಲಿ 22 ನಿಲ್ದಾಣಗಳು ಕಾರಿಡಾರ್‌ 1ರಲ್ಲಿ ಹಾಗೂ ಉಳಿದ 9 ಕಾರಿಡಾರ್‌ ಎರಡರಲ್ಲಿ ತಲೆಯೆತ್ತಲಿವೆ. ಈ ಯೋಜನೆ ಉಪನಗರ ರೈಲು, ಬಸ್‌ ಡಿಪೋಗಳು ಸೇರಿದಂತೆ 9 ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸೋಮನಹಳ್ಳಿ ಕ್ರಾಸ್‌ ಇಂಟರ್‌ಚೇಂಜ್‌ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ.

Recommended Video

      'ಡಿಸೈನ್ ವೀರರಿಗೆ' ನಮ್ಮ ನೆಲ, ನಮ್ಮ ಜಲ ಈಗ ನೆನಪಾಗಿದೆ: ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಕಿಡಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+