ಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸ್ ಕಮಿಷನರ್ ಸಂದರ್ಶನ
Recommended Video

ಹೊಸ ವರ್ಷಾಚರಣೆಗೆ ಬೆಂಗಳೂರು ಮಹಾನಗರ ಸಿದ್ದವಾಗುತ್ತಿದೆ, ಡಿಸೆಂಬರ್ 31ರ ಸಂಜೆಯಿಂದ ತಡರಾತ್ರಿಯವರೆಗೆ ಬೆಂಗಳೂರು ಪೊಲೀಸರು ಯಾವ ರೀತಿಯ ಭದ್ರತಾ ಕ್ರಮ ಮತ್ತು ಬಂದೋಬಸ್ತ್ ಅನ್ನು ನೀಡುತ್ತಿದ್ದಾರೆ?
ಬೆಂಗಳೂರು ನಗರದ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ (ಐಪಿಎಸ್) 'ಒನ್ ಇಂಡಿಯಾ' ಗೆ ನೀಡಿದ ಸಂದರ್ಶನದಲ್ಲಿ ಮುಂಜಾಗೃತ ಕ್ರಮದ ಬಗ್ಗೆ ವಿವರಿಸಿದ್ದಾರೆ. ಸಂದರ್ಶನದ ಪ್ರಮುಖಾಂಶ ಇಂತಿದೆ.

ಪ್ರ: ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಬಿಟ್ಟು, ನಗರದ ಇತರ ಪ್ರದೇಶಗಳಲ್ಲಿ ಯಾವ ರೀತಿ ಭದ್ರತೆ ಒದಗಿಸುತ್ತಿದ್ದೀರಾ?
ಕಮಿಷನರ್: ನಗರದಾದ್ಯಂತ ಒಟ್ಟು ಹದಿನೈದು ಸಾವಿರ ಪೊಲೀಸರನ್ನು ನೇಮಕ ಮಾಡುತ್ತಿದ್ದೇವೆ. 500 ವಾಹನ, 200 ಬೈಕುಗಳು ಮತ್ತು 250 ಗಸ್ತುವಾಹನದ ಮೂಲಕ ಭದ್ರತೆಯನ್ನು ಒದಗಿಸುತ್ತಿದ್ದೇವೆ. ನಗರದ ಎಲ್ಲಾ ಭಾಗಕ್ಕೂ ಆಯಾಯ ಪೊಲೀಸ್ ಠಾಣೆ ಮಿತಿಯಲ್ಲಿ ಬಂದೋಬಸ್ತ್ ಇರುತ್ತದೆ.
ಪ್ರ: ನಮ್ಮ ಮೆಟ್ರೋ ಎಂಜಿ ರಸ್ತೆ, ಟ್ರಿನಿಟಿ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ವಿಶೇಷ ವ್ಯವಸ್ಥೆ ಒದಗಿಸುತ್ತಿದೆ. ಬಿಎಂಟಿಸಿ ಬಗ್ಗೆ ಏನಾದರೂ ಮಾಹಿತಿ ಇದೆಯಾ?
ಕಮಿಷನರ್: ನಮ್ಮ ಮೆಟ್ರೋದವರಿಗೆ ರಾತ್ರಿ ಎರಡು ಗಂಟೆಯ ತನಕ (ಡಿ 31 ತಡರಾತ್ರಿ) ಸರ್ವಿಸ್ ನೀಡಲು ವಿನಂತಿಸಿಕೊಂಡಿದ್ದೇವೆ, ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಬಿಎಂಟಿಸಿ ಬಸ್ಸುಗಳನ್ನು ಕೂಡಾ ಸಾರ್ವಜನಿಕರಿಗೆ ಸಹಾಯವಾಗುವ ರೀತಿಯಲ್ಲಿ ಓಡಿಸಬೇಕೆಂದು ಕೇಳಿಕೊಂಡಿದ್ದೇವೆ, ಅವರೂ ನಮ್ಮ ಮನವಿಗೆ ಸ್ಪಂದಿಸಿದ್ದಾರೆ.
ಪ್ರ: ಹೊಸ ವರ್ಷಾಚರಣೆ ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ, ಈ ಬಗ್ಗೆ?
ಕಮಿಷನರ್: ಡಿಸೆಂಬರ್ 31 ಮತ್ತು ಜನವರಿ 1ರಂದು ಕರ್ನಾಟಕದಾದ್ಯಂತ ಮದ್ಯಪಾನ ನಿಷೇಧ ಮಾಡಬೇಕೆಂದು ಪಿಐಎಲ್ ಸಲ್ಲಿಸಲಾಗಿತ್ತು. ಈ ವಿಚಾರಣೆಯ ವೇಳೆ ಮಾನ್ಯ ಉಚ್ಚನ್ಯಾಯಾಲಯ ನಿರ್ದೇಶನವನ್ನು ನೀಡಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಹೈಕೋರ್ಟ್ ಸೂಚನೆ ನೀಡಿದೆ. ಅದಕ್ಕೆ ಸೂಕ್ತ ಬಂದೋಬಸ್ತ್ ನಾವು ಮಾಡುತ್ತೇವೆ.
ಪ್ರ: ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದಿದ್ದೀರಾ, ಬಂದವರು ಗಾಡಿ ಎಲ್ಲಿ ಪಾರ್ಕ್ ಮಾಡಬೇಕು?
ಕಮಿಷನರ್: ಶಿವಾಜಿನಗರ ಬಸ್ ಸ್ಟ್ಯಾಂಡ್ ಮತ್ತು ಇತರ ಪೂರ್ವ ನಿಗದಿತ ಪ್ರದೇಶಗಳಲ್ಲಿ ಪಾರ್ಕ್ ಮಾಡಬಹುದು. ಜೊತೆಗೆ, ಹೊಸವರ್ಷಾಚರಣೆ ಆಯೋಜಿಸುವ ಹೊಟೇಲ್ ಗಳು ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೇ ಹೊರತು, ಪೊಲೀಸ್ ಕಚೇರಿ ಇದಕ್ಕೆ ಜವಾಬ್ದಾರಿಯಲ್ಲ. ಇದರ ಹೊಣೆಯನ್ನು ಸಂಬಂಧಪಟ್ಟ organizers ಹೊರಬೇಕು.
ಪ್ರ: ಹೊಸ ವರ್ಚಾರಣೆ ಮಾಡಲು ಬರುವ ಶೇ. 70ರಷ್ಟು ಜನ ಕುಡಿದು ಬಂದಿರುತ್ತಾರೆ. ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ, ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿದ್ದೀರಾ, ಈ ಬಗ್ಗೆ?
ಕಮಿಷನರ್: ಕುಡಿದು ಬಂದವರ ವಿರುದ್ದ ಪೊಲೀಸ್ ಇಲಾಖೆಯಿಲ್ಲ. ಜನರು ಅವರ ಇತಿಮಿತಿಯಲ್ಲಿ ಇರಬೇಕು. ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುವುದು, ಬಾಟಲ್ ಅನ್ನು ರಸ್ತೆಯಲ್ಲಿ ಒಡೆಯುವುದು, ಹೆಣ್ಣುಮಕ್ಕಳನ್ನು ಚುಡಾಯಿಸುವುದು ಮುಂತಾದ ತಪ್ಪು ಕೆಲಸಗಳನ್ನು ಮಾಡಿದರೆ, ಅಲ್ಲೇ ಬಂದೋಬಸ್ತಿನಲ್ಲಿರುವ ಪೊಲೀಸರು ಅಂಥವರನ್ನು ಮುಲಾಜಿಲ್ಲದೇ ಅರೆಸ್ಟ್ ಮಾಡುತ್ತಾರೆ.
ಪ್ರ: ಒಂದು ಕಡೆ ಎರಡು ಗಂಟೆಯ ತನಕ ಬಾರ್ ಎಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡುತ್ತೀರಾ, ಇನ್ನೊಂದೆಡೆ ಕುಡಿದು ಗಾಡಿ ಚಲಾಯಿಸಿದರೆ ಕೇಸ್ ಹಾಕುತ್ತೇವೆ ಅಂತೀರಾ?
ಕಮಿಷನರ್: ಹೌದು, ಕುಡಿದು ಗಾಡಿ ಚಲಾಯಿಸಬಾರದು. ಕುಡಿದು ಗಾಡಿಯಲ್ಲಿ ಹಿಂದುಗಡೆ ಕುಳಿತುಕೊಂಡು ಹೋಗಬಾರದೆಂದು ನಾವು ಹೇಳಿಲ್ಲ. ಕುಡಿದು ಗಾಡಿ ಚಲಾಯಿಸಿದರೆ ಅಪಘಾತ ಆಗುವ ಸಾಧ್ಯತೆಯಿದೆ, ಜೊತೆಗೆ ಇವರಿಂದ ರಸ್ತೆಯಲ್ಲಿ ಹೋಗುವವರಿಗೂ ತೊಂದರೆಯಾಗುತ್ತದೆ. ಅವರ ಒಳ್ಳೆಯದಕ್ಕೇ ಈ ಕ್ರಮ ತೆಗೆದುಕೊಂಡಿದ್ದೇವೆ.
ಪ್ರ: ಹೊಸ ವರ್ಷಾಚರಣೆಯ ವೇಳೆ ಬರುವ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ, ವಿಶೇಷ ಭದ್ರತೆ ವ್ಯವಸ್ಥೆ ಏನಾದರೂ ಮಾಡಿದ್ದೀರಾ?
ಕಮಿಷನರ್: ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನೇಮಕ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಎಲ್ಲಿ ಜನ ಜಾಸ್ತಿ ಸೇರುತ್ತಾರೋ, ಆ ಭಾಗದಲ್ಲಿ ಎರಡು ಸಾವಿರ ಪೊಲೀಸರನ್ನು ನೇಮಕ ಮಾಡುತ್ತಿದ್ದೇವೆ. ಈವಾಗ ಇರುವ ಸಿಸಿಟಿವಿಯನ್ನು ಬಿಟ್ಟು ಇನ್ನೂ 200 ಹೆಚ್ಚುವರಿ ಸಿಸಿಟಿವಿ ಆವತ್ತಿನ ದಿನ ಅಳವಡಿಸುತ್ತಿದ್ದೇವೆ.
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026: ಬೆಂಗಳೂರು ಕ್ರಿಕೆಟ್ ಪ್ರೇಮಿಗಳೇ ಗಮನಿಸಿ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಈ ಹೊಸ ರೂಲ್ಸ್ ಗೊತ್ತಿರಲಿ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ












Click it and Unblock the Notifications