ಕರ್ನಾಟಕ ರಾಜಕೀಯದಲ್ಲಿ ರೋಚಕ ತಿರುವು: ಬಿಜೆಪಿ ನಾಯಕರೊಂದಿಗೆ ಸಾರಾ ಮಹೇಶ್!

Recommended Video

      ಕರ್ನಾಟಕ ರಾಜಕೀಯಕ್ಕೆ ಹೊಸ ತಿರುವು | ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ | H D Kumaraswamy

      ಬೆಂಗಳೂರು, ಜುಲೈ 11: ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿರುವ ಕರ್ನಾಟಕ ರಾಜಕೀಯ ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

      ಜೆಡಿಎಸ್ ನಾಯಕ, ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಅವರು ಬಿಜೆಪಿ ನಾಯಕರಾದ ಕೆ ಎಸ್ ಈಶ್ವರಪ್ಪ ಮತ್ತು ಮುರಳೀಧರ ರಾವ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದು ಭಾರೀ ಕುತೂಹಲ ಕೆರಳಿಸಿದೆ.

      New twist to Karnataka political crisis: Sa Ra Mahesh met BJP leaders

      ಮೂವರು ನಾಯಕರೂ ನಗರದ ಕೆಕೆ ಗೆಸ್ಟ್ ಹೌಸ್‌ನಲ್ಲಿ ಸುಮಾರು ಅರ್ಧ ಗಂಟೆಯ ಕಾಲ ಮಾತುಕತೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

      ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ ಆರ್ ನಗರ ಶಾಸಕ ಸಾರಾ ಮಹೇಶ್, ಇದೊಂದು ಆಕಸ್ಮಿಕ ಭೇಟಿ ಅಷ್ಟೆ. ಕೆಕೆ ಗೆಸ್ಟ್ ಹೌಸ್ ನಮ್ಮ ಇಲಾಖೆಯ ಅಡಿಯಲ್ಲಿ ಬರುತ್ತದೆ. ಆದ್ದರಿಂದ ನಾನು ಇಲ್ಲಿಗೆ ಬಂದಿದ್ದೆ. ಅದೇ ಸಂದರ್ಭದಲ್ಲಿ ಅವರೂ ಬಂದಿದ್ದರು. ಸೌಜನ್ಯಕ್ಕಾಗಿ ಮಾತನಾಡಿದೆವು ಅಷ್ಟೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+