Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ -ಬ್ಲಾಕ್ ಮೇಲ್ ಜಾಲ

ಬೆಂಗಳೂರು ಡಿ. 20: ಕಾಲ್ ಗರ್ಲ್ ಪೂರೈಕೆ ಮಾಡುವ ಸೋಗಿನಲ್ಲಿ ಹುಟ್ಟಿಕೊಂಡಿರುವ ಡೇಟಿಂಗ್ ಆಪ್‌ಗಳು ಗ್ರಾಹಕರಿಂದ ಅಡ್ವಾನ್ಸ್ ಪಡೆದು ನಾಮ ಹಾಕುವ ಹೊಸ ವಂಚನೆ ಹುಟ್ಟು ಹಾಕಿವೆ. ಒಂದೆಡೆ ಮುಂಗಡ ಹಣ ಪಡೆದು ಮೋಸ ಮಾಡಿದರೆ, ಮತ್ತೊಂದೆಡೆ ಬೆತ್ತಲೆ ಸೇವೆ ಒದಗಿಸಿ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಹಬ್ಬಿರುವ ಹೊಸ ರೀತಿಯ ವೇಶ್ಯಾವಾಟಿಕೆ ಬ್ಲಾಕ್ ಮೇಲ್ ಜಾಲದ ವಿವರ ಇಲ್ಲಿದೆ.

ವೇಶ್ಯಾವಾಟಿಕೆ ದಂಧೆ ತಂತ್ರಜ್ಞಾನ ಅಳವಡಿಸಿಕೊಂಡು ನಾನಾ ರೂಪ ಪಡೆದುಕೊಂಡಿದೆ. ಗ್ರಾಹಕರ ಮನೆ ಬಾಗಿಲಿಗೆ ಮಹಿಳೆಯರನ್ನು ಪೂರೈಸುವ ಹಂತಕ್ಕೆ ಬಂದು ನಿಂತಿವೆ. ಇನ್ನೊಂದೆಡೆ ಲೊಕ್ಯಾಂಟೋ ಸೇರಿದಂತೆ ಸಾಮಾಜಿಕ ಜಾಲ ತಾಣದಲ್ಲಿ ಯುವತಿಯರ ನಕಲಿ ಐಡಿ ಕ್ರಿಯೇಟ್ ಮಾಡಿ ಅವರ ಹೆಸರಿನಲ್ಲಿ ಮುಗ್ಧರಿಗೆ ವಂಚನೆ ಮಾಡುತ್ತಿರುವ ಹೊಸ ರೀತಿಯ ಜಾಲ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ. ಈ ವಂಚನೆ ಜಾಲಕ್ಕೆ ದೂರು ಕೊಡಲಾಗದೇ ಮಾನಕ್ಕೆ ಅಂಜಿ ದೂರು ಕೊಡದೇ ಅಂಗಲಾಚುತ್ತಾರೆ.

ಏನಿದು ದಂಧೆ: ಲೊಕಾಂಟೋ ಸೇರಿದಂತೆ ಅನೇಕ ಆನ್‌ಲೈನ್ ಜಾಲ ತಾಣದಲ್ಲಿ ಕಾಲ್ ಗರ್ಲ್ ಹೆಸರಿನಲ್ಲಿ ಸುಂದರ ಯುವತಿಯರ ಪೋಟೋ ಹಾಕಿ ಐಡಿ ಕ್ರಿಯೇಟ್ ಮಾಡುತ್ತಾರೆ. ಯುವತಿರ ಬಗ್ಗೆ ಒಂದಷ್ಟು ವಿವರ ಹಾಕುತ್ತಾರೆ. ಅಂತಹ ಯುವತಿಯರ ಪೋಟೋ ನೋಡಿ ಫಿದಾ ಆಗುವ ಮಂದಿ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮಾತನಾಡುತ್ತಾರೆ. ಗಂಟೆ ಲೆಕ್ಕದಲ್ಲಿ ಯುವತಿಯನ್ನು ಕಳುಹಿಸುವ ಬಗ್ಗೆ ಮಾತುಕತೆ ಆಗುತ್ತದೆ. ಯುವತಿಯನ್ನು ಕಾಯ್ದಿರಿಸುವ ಸಲುವಾಗಿ ಮುಂಗಡವಾಗಿ 1000 ರೂ. , 2000 ರೂ. ಕಳುಹಿಸುವಂತೆ ಸೂಚಿಸುತ್ತಾರೆ. ಹಣವನ್ನು ಪೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಾಕಿಸಿಕೊಳ್ಳುತ್ತಾರೆ. ಇನ್ನೇನು ಸಂಜೆ ವೇಳೆಗೆ ಕಾಲ್ ಗರ್ಲ್ ಜತೆ ಮಜಾ ಉಡಾಯಿಸುವ ಕನಸು ಕಾಣುತ್ತಿದ್ದವರಿಗೆ ಒಂದು ಮೊಬೈಲ್ ಕರೆ ಬರುತ್ತದೆ. ನೀವು ಬುಕ್ ಮಾಡಿರುವವರು ಇಲ್ಲ. ಹೆಚ್ಚುವರಿ ಹಣ ಕೊಟ್ಟರೆ ಮಾತ್ರ ಕರೆಸಲಾಗುವುದು ಎಂದು ಯಾಮಾರಿಸಿ ಎರಡನೇ ಕಂತಿನಲ್ಲಿ ಎರಡು ಮೂರು ಸಾವಿರ ವಸೂಲಿ ಮಾಡುತ್ತಾರೆ. ಹಣ ಕೊಟ್ಟ ಬಳಿಕ ಮೊಬೈಲ್ ನಂಬರ್ ಬ್ಲಾಕ್ ಮಾಡುತ್ತಾರೆ.

New prostitution racket reported in Bengaluru; Cheating and Blackmailing people through Dating Apps

ಬೇರೆ ನಂಬರ್‌ನಿಂದ ಕರೆ ಮಾಡಿ ಮಾತನಾಡಿ ಹಣ ವಾಪಸು ಕೇಳಿದರೆ ಅಲ್ಲಿ ನಿಜವಾದ ಸತ್ಯ ಹೊರ ಬರುತ್ತದೆ. ಹಣ ಕೊಟ್ಟ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಹೇಳಿದರೆ ಸಾಕು,ನೀವು ಯುವತಿಯನ್ನು ಬುಕ್ ಮಾಡೋಕೆ ಹಣ ಕೊಟ್ಟಿರೋದು, ಇದೇನು ಲೀಗಲ್? ನೀವು ಯುವತಿಯನ್ನು ಬುಕ್ ಮಾಡಲು ಮಾಡಿರುವ ಚಾಟಿಂಗ್, ವಾಯ್ಸ್ ಕಾಲ್ ಎಲ್ಲವನ್ನು ನನ್ನ ಬಳಿ ಇದೆ. ನಾವು ಪೊಲೀಸ್ ಠಾಣೆಗೆ ಬಂದು ದೂರು ಕೊಡ್ತೇವೆ ಎಂದು ಹೆದರಿಸುತ್ತಾರೆ. ಅಷ್ಟೊತ್ತಿಗೆ ಹಣ ಕೊಟ್ಟವರು ಸುಮ್ಮನಾಗುತ್ತಾರೆ.

New prostitution racket reported in Bengaluru; Cheating and Blackmailing people through Dating Apps

"ದಯವಿಟ್ಟು ತಪ್ಪು ತಿಳಿಯಬೇಡಿ, ನಾನು ಲೊಕ್ಯಾಂಟೋ ಆಪ್‌ನಲ್ಲಿ ಕಾಲ್ ಗರ್ಲ್ ನಂಬರ್ ಪಡೆದುಕರೆ ಮಾಡಿ ಬುಕ್ ಮಾಡಿದೆ. ಅನಂತರ ಮುಂಗಡ ಹಣವನ್ನು ಪಾವತಿಸಿದೆ. ಸಂಜೆ ವೇಳೆಗೆ ಮತ್ತೆ ಎರಡು ಸಾವಿರ ರೂ. ಕೊಡುವಂತೆ ಕೇಳಿದ್ದರು. ಅದನ್ನು ಕೊಟ್ಟೆ. ಆನಂತರ ಸಂಜೆ ವೇಳೆಗೆ ನನ್ನ ನಂಬರ್ ಬ್ಲಾಕ್ ಮಾಡಿದ್ದರು. ಕರೆ ಮಾಡುವ ನಂಬರ್ ಬೇರೆ. ಗೂಗಲ್ ಪೇ ಪಾವತಿಗೆ ಕೊಡುವ ನಂಬರ್ ಬೇರೆ. ದೂರು ಕೊಡುತ್ತೇನೆ ಎಂದರೆ ನನಗೆ ಹೆದರಿಸಿದರು,ಹೀಗಾಗಿ ದೂರು ನೀಡದೇ ಸುಮ್ಮನಾದೆ ಎಂದು ಸಂತ್ರಸ್ತ ಯುವಕ ಬಸವರಾಜು (ಹೆಸರು ಬದಲಿಸಿದೆ) ಒನ್ಇಂಡಿಯಾ ಕನ್ನಡಕ್ಕೆ ತನಗಾದ ಮೋಸದ ಬಗ್ಗೆ ವಿವರ ನೀಡಿದರು.

ಹೀಗೆ ಪ್ರತಿ ದಿನ ನೂರಾರು ಮಂದಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ವಂಚನೆ ಮಾಡುತ್ತಿದ್ದಾರೆ. ಇನ್ನೂ ಮೋಸ ಹೋದವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿಲ್ಲ. ದೂರು ಕೊಟ್ಟರು ಪೊಲೀಸರು ದೂರು ಕೊಟ್ಟವರನ್ನೇ ನಿಂದನೆ ಮಾಡುತ್ತಾರೆ. ಹೀಗಾಗಿ ಈ ಜಾಲಕ್ಕೆ ಅಂಕುಶ ಬೀಳುವ ಲಕ್ಷಣವೇ ಕಾಣುತ್ತಿಲ್ಲ. ಪ್ರತಿ ನಿತ್ಯ ನೂರಾರು ಮಂದಿ ಈ ಜಾಲಕ್ಕೆ ಬಿದ್ದು ಮೋಸ ಹೋಗುತ್ತಿದ್ದಾರೆ.

ಮೂರು ವಂಚನೆ ಪ್ರಕರಣಗಳ ವಿವರ: ಇನ್ನೂ ಇದೇ ರೀತಿಯ ನಾನಾ ರೀತಿಯ ವಂಚನೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು,ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಬೆತ್ತಲೆ ವಿಡಿಯೋ ಕಾಲ್ ಸೇವೆ ಪಡೆಯಲು ಹೋಗಿ ಮೂವರು ವಂಚನೆಗೆ ಒಳಗಾಗಿದ್ದಾರೆ. ಆನ್‌ಲೈನ್ ಡೇಟಿಂಗ್ ಆಪ್‌ಗಳ ಮೊರೆ ಹೋಗಿ ಹಣ ಕಳೆದುಕೊಂಡಿದ್ದಾರೆ. ವಿಲಾಸಿತ್ ಕುಮಾರ್, ತುಷಾರ್ ಗೋಯಲ್, ಫೆನಿಲ್ ಸುಚಕ್ ಎಂಬುವರು ವಂಚನೆಗೆ ಒಳಗಾದವರು. ಮೂವರು ಒಟ್ಟು 1.22 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಡೇಟಿಂಗ್ ಆಪ್ ನಲ್ಲಿ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡದ್ದ ಯುವತಿಯರು, ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹರಿದು ಬಿಡುವುದಾಗಿ ಹೆದರಿಸಿ ಹಣ ಪೀಕಿದ್ದು, ಆಗ್ನೇಯ ವಿಭಾಗದ ಸೈಬರ್ ವಿಭಾಗದಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.

New prostitution racket reported in Bengaluru; Cheating and Blackmailing people through Dating Apps

ಇಂತಹ ವಂಚನೆ ಜಾಲಕ್ಕೆ ಬೀಳುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ಪೊಲೀಸರು ಇಂತಹ ಜಾಲದ ಬಗ್ಗೆ ವಿನೂತನ ಕಾರ್ಯತಂತ್ರ ರೂಪಿಸಿ ಬಂದ್ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಇಲ್ಲದಿದ್ದರೆ ಅನೇಕರು ಮೋಸಕ್ಕೆ ಹೋಗುವುದು ನಿಶ್ಚಿತ.

Recommended Video

      ಇನ್ಮುಂದೆ ಯಾರೂ ಇಮ್ರಾನ್ ಖಾನ್ ವಿರುದ್ಧ ಸುದ್ದಿ ಪ್ರಸಾರ ಮಾಡಂಗಿಲ್ಲ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+