Property: ಬೆಂಗಳೂರು ಈ ನಗರದ ನಡುವೆ ಹೊಸ ಯೋಜನೆ: ಭೂಮಿ ಬೆಲೆ ಭರ್ಜರಿ ಹೆಚ್ಚಳದ ನಿರೀಕ್ಷೆ!
New Namma Metro Project: ಬೆಂಗಳೂರು ಹಾಗೂ ತುಮಕೂರಿನ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದಂತೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಬಂದಿದೆ. ಹೌದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೆಳೆಯುತ್ತಿದ್ದು ಬೆಂಗಳೂರಿನ ರಿಯಲ್ ಎಸ್ಟೇಟ್‌ನೊಂದಿಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೂ ರಿಯಲ್ ಎಸ್ಟೇಟ್ ಬಂಪರ್ ಬಂದಿದ್ದು ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಬೆಂಗಳೂರು - ತುಮಕೂರು ಮೆಟ್ರೋ ವಿಸ್ತರಣೆಯಿಂದಾಗಿ ಬೆಂಗಳೂರು ಹಾಗೂ ತುಮಕೂರಿನ ವಿವಿಧ ಭಾಗದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಗೋಲ್ಡ್ ರೇಟ್ ಬರ್ತಿದೆ. ಹಾಗಾದರೆ ಬೆಂಗಳೂರು - ತುಮಕೂರಿನ ಯಾವೆಲ್ಲಾ ಭಾಗದಲ್ಲಿ ಭೂಮಿಗೆ ಭರ್ಜರಿ ಬೆಲೆ ಬರುತ್ತಿದೆ ಹಾಗೂ ಇದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ಅಭಿವೃದ್ಧಿ ಆದಂತೆಲ್ಲ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿಗೆ ಚಿನ್ನದ ದರ ಬರುತ್ತಿದ್ದು. ಭೂಮಿ ಹಾಗೂ ಆಸ್ತಿ ಮಾರಾಟ ಜೋರಾಗಿದೆ. ನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದು ತುಂಬಾ ಸಮಯವಾಗಿದೆ.

ಇದೀಗ ಇದು ಹೊಸ ಪ್ರದೇಶಗಳಿಗೆ ವಿಸ್ತರಿಸುವುದಕ್ಕೆ ಪ್ರಾರಂಭವಾಗಿಳೂರು - ತುಮಕೂರು ಮೆಟ್ರೋ ನಿಲ್ದಾಣ ಅಭಿವೃದ್ಧಿಗೆ ಕೆಲವು ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿರುವುದರ ಹೊರತಾಗಿಯೂ ಮೆಟ್ರೋ ವಿಸ್ತರಣೆಯ ಸಿದ್ಧತೆ ಸದ್ದಿಲ್ಲದೆ ನಡೆದಿದೆ. ಇನ್ನು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲೇ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು.
ತುಮಕೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಒಂದಾಗಿದ್ದರು. ಅಲ್ಲದೇ ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ರಾಜ್ಯ & ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ. ಇದರ ಬೆನ್ನಲ್ಲೇ ತುಮಕೂರಿಗೆ ಮತ್ತೊಂದು ಬಂಪರ್ ಹಾಗೂ ದೊಡ್ಡ ಯೋಜನೆ ಬಂದಿದ್ದು. ಎರಡೂ ನಗರಗಳ ಆಸ್ತಿದಾರರು ಹಾಗೂ ಜಾಗ ಖರೀದಿ ಮಾಡಬೇಕು ಎಂದು ಕೊಂಡಿರುವವರು ಖುಷಿಯಾಗಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆದಾಯವಿದೆ. ಅದರೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರಿನ ವಿಸ್ತೀರ್ಣ ಹೆಚ್ಚಾಗುತ್ತಿದ್ದು. ಬ್ರ್ಯಾಂಡ್ ಬೆಂಗಳೂರು ಮೌಲ್ಯವೂ ಹೆಚ್ಚಾಗಲಿದೆ. ಹೀಗಾಗಿ, ಹೊಸ ಯೋಜನೆಗಳು ರಿಯಲ್ ಎಸ್ಟೇಟ್‌ಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗಿದೆ.
ಬೆಂಗಳೂರು - ತುಮಕೂರು ಮೆಟ್ರೋ ಯಾವ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ ?
ಇನ್ನು ಬೆಂಗಳೂರು ಹಾಗೂ ತುಮಕೂರಿನ ನಡುವೆ ಹಲವು ಪ್ರಮುಖ ಪ್ರದೇಶಗಳಲ್ಲಿ ಮೆಟ್ರೋ ಹಾದು ಹೋಗಲಿದ್ದು. ಈ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳದ ನಿರೀಕ್ಷೆ ಮಾಡಲಾಗಿದೆ.
* ಮಾದಾವರ ಮೆಟ್ರೋ ನಿಲ್ದಾಣದಿಂದ ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನಕೋಟೆ ಹಾಗೂ ಸೋಂಪುರ ಕೈಗಾರಿಕಾ ಪ್ರದೇಶ ಪ್ರಮುಖವಾಗಿವೆ.
ಇದರೊಂದಿಗೆ ದಾಬಸ್‌ಪೇಟೆ, ನಲ್ಲಯನಪಾಳ್ಯ ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್ ಮತ್ತು ನಾಗಣ್ಣನ ಪಾಳ್ಯದ ವರೆಗೆ ಮೆಟ್ರೋ ವಿಸ್ತರಣೆ ಆಗಲಿದೆ. ಅಲ್ಲದೇ ಶಿರಾ ಗೇಟ್ ವರೆಗೆ ಮೆಟ್ರೋ ಬರಲಿದೆ ಎಂದು ಹೇಳಲಾಗಿದೆ. ಹೀಗಾಗಿ, ಈ ಪ್ರದೇಶಗಳ 500 ಮೀ. ವ್ಯಾಪ್ತಿಯಲ್ಲಿ ಆಸ್ತಿಗೆ ಭರ್ಜರಿ ಬೆಲೆ ಬಂದಿದೆ.
ಈ ಮೂಲಕ ಶಿರಾ ಭಾಗದಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕನಸು ಈಡೇರಲಿಲ್ಲ ಎಂದು ಕೊರಗುತ್ತಿದ್ದ ಜನರಿಗೆ ಇದೀಗ ಮೆಟ್ರೋ ವಿಸ್ತರಣೆ ಸಂತೋಷ ತಂದಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications