ಶಾಲಾ ಮಕ್ಕಳಿಗಾಗಿ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆ
ಬೆಂಗಳೂರು, ಅಕ್ಟೋಬರ್ 5: 'ನ್ಯೂ ಇಂಡಿಯಾ @ 70 ಅಂಡ್ ಯುವರ್ ಕಾಂಟ್ರಿಬ್ಯೂಷನ್' ಇದು ಟಾಟಾ ಗ್ರೂಪ್ 12 ನೇ ಸರಣಿಯ ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಕೂಲ್ ಪ್ರಬಂಧ ಸ್ಪರ್ಧೆಯ ಈ ವರ್ಷದ ವಿಷಯ. ಬೆಂಗಳೂರಿನ ವಿಸ್ಡಂ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆಯಲಿರುವ ಈ ಪ್ರಬಂಧ ಸ್ಪರ್ಧೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಇರಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಅಂದರೆ 2017-18 ನೇ ಸಾಲಿನಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನ 80 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಟಾಟಾ ಬಿಲ್ಡಿಂಗ್ ಇಂಡಿಯಾ ಭಾರತದ ಅತಿ ದೊಡ್ಡ ಶಾಲಾ ಮಟ್ಟದ ಪ್ರಬಂಧ ಸ್ಪರ್ಧೆಯಾಗಿದೆ. ಎರಡು ಹಂತದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 250 ಕ್ಕೂ ಹೆಚ್ಚು ನಗರಗಳ 9,500 ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇಂಗ್ಲೀಷ್, ಹಿಂದಿ, ಬೆಂಗಾಲಿ, ಗುಜರಾತಿ, ತಮಿಳು, ಮರಾಠಿ, ಕನ್ನಡ, ಒರಿಯಾ, ತೆಲುಗು, ಮಲಯಾಳಂ, ಪಂಜಾಬಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ನಡೆಯಲಿದೆ.

ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ.
1. ಜೂನಿಯರ್ ಹಂತ: ಈ ವಿಭಾಗದಲ್ಲಿ 6 ರಿಂದ 8 ನೇ ತರಗತಿಯ ಮಕ್ಕಳು ಪಾಲ್ಗೊಳ್ಳಲಿದ್ದರೆ,
2. ಸೀನಿಯರ್ ಹಂತ: ಇದರಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.
ಮಕ್ಕಳು ಬರೆದ ಪ್ರಬಂಧವನ್ನು ಅವರು ತೆಗೆದುಕೊಂಡಿರುವ ವಿಷಯ, ಅದರ ಸಂರಚನೆ, ಸೃಜನಶೀಲತೆ, ಕಲ್ಪನೆ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಶಾಲೆ, ನಗರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜಯಶಾಲಿಯಾದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ.
ರಾಷ್ಟ್ರ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಸುವರ್ಣವಕಾಶವೂ ಲಭ್ಯವಾಗಲಿದೆ. ಇಷ್ಟೇ ಅಲ್ಲದೇ, ರಾಷ್ಟ್ರಪತಿ ಸೇರಿದಂತೆ ಮತ್ತಿತರ ಗಣ್ಯಾತಿಗಣ್ಯರನ್ನು ಭೇಟಿ ಮಾಡುವ ಸೌಭಾಗ್ಯವೂ ದೊರಕಲಿದೆ.
ಕಳೆದ ಹಲವು ವರ್ಷಗಳಿಂದ ನಡೆಯುತ್ತಾ ಬಂದಿರುವ ಈ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯನ್ನು ಒದಗಿಸಿಕೊಡಲಾಗುತ್ತಾ ಬರಲಾಗಿದೆ. ಉತ್ತಮ ಭಾರತಕ್ಕಾಗಿ ಡಿಜಿಟಲ್ ತಂತ್ರಜ್ಞಾನ, ಸ್ವಚ್ಛ ಭಾರತ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಮತ್ತಿತರೆ ಪ್ರಮುಖ ವಿಷಯಗಳ ಬಗ್ಗೆ ಈ ಹಿಂದೆ ಸ್ಪರ್ಧೆ ಏರ್ಪಡಿಸಲಾಗಿತ್ತು.
2006 ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಆರಂಭವಾದ ಈ ಟಾಟಾ ಬಿಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ ಸ್ಪರ್ಧೆ ಪ್ರತಿವರ್ಷ ನಡೆಯುತ್ತಾ ಬಂದಿದೆ. ಈ ಮೂಲಕ ದೇಶದೆಲ್ಲೆಡೆ ಯುವ ಸಮುದಾಯವನ್ನು ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ತೋರುವಂತೆ ಪ್ರೇರೇಪಿಸಿ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೇ, ಸದೃಢವಾದ ದೇಶ ನಿರ್ಮಾಣಕ್ಕೆ ಅಣಿಗೊಳಿಸುವ ಪ್ರಯತ್ನ ಇದಾಗಿದೆ. ಈ ವೇದಿಕೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರಬಂಧಗಳ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಅಗತ್ಯವಾದ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಇದರ ಜತೆಗೆ ಟಾಟಾ ಕ್ಲಾಸ್‍ಎಡ್ಜ್ (ತಂತ್ರಜ್ಞಾನ ಆಧಾರಿತ ಸ್ಪರ್ಧೆ) ಅನ್ನೂ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆಯನ್ನೂ ತಮ್ಮ ಶಾಲೆಗಳಲ್ಲಿ ನಡೆಸಬಹುದಾಗಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications