ಬೆಂಗಳೂರಲ್ಲಿ ಹೊಸ ಕಾರು ಮನೆಗೆ ಬಂದಿದ್ದಷ್ಟೇ, 5 ಗಂಟೆಗಳಲ್ಲಿ ಮಾಯ
ಬೆಂಗಳೂರು, ಸೆಪ್ಟೆಂಬರ್ 11: ಆಗತಾನೆ ಹೊಸ ಕಾರು ಮನೆಗೆ ಬಂದಿತ್ತು, ಮನೆಯವರೆಲ್ಲಾ ಸಂತಸದಲ್ಲಿದ್ದರು ಆದರೆ ಐದು ಗಂಟೆಯೊಳಗೆ ಕಾರು ಕಳ್ಳತನವಾಗಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.
ಇಂದಿರಾನಗರದ ಎಚ್‌ಎಎಲ್ ಎರಡನೇ ಹಂತದ ಪ್ರಭು ಕೃಷ್ಣಸ್ವಾಮಿ ಎಂಬುವವರುಉ ಹುಂಡೈ ಟಕ್ಸನ್ ಕಾರು ಖರೀದಿಸಿ ರಾತ್ರಿ 10.45ಕ್ಕೆ ಮನೆಗೆ ತಂದು ಪಾರ್ಕ್ ಮಾಡಿದ್ದರು. ಬೆಳಗಿನ ಜಾವ ಗೇಟ್ ಸೌಂಡ್ ಆಗಿದ್ದು ಎಚ್ಚರಗೊಂಡ ಪ್ರಭು ಅವರ ಅತ್ತೆ ಉಷಾ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ಕಾರು ತೆಗೆದುಕೊಂಡು ಹೋಗುತ್ತಿರುವುದು ನೋಡಿ ಅಳಿಯ ಹೋಗುತ್ತಿರಬೇಕು ಅಂದುಕೊಂಡಿದ್ದಾರೆ.

ಬೆಳಗ್ಗೆ ಉಷಾ ಮನೆಯ ಹೊರಗೆ ಬಂದು ನೋಡಿದಾಗ ಅಲ್ಲಿ ಕಾರ್ ಇರಲಿಲ್ಲ, ಅಳಿಯನಿಗೆ ಕಾಲ್ ಮಾಡಿದರೆ ಆತ ಮನೆಯಲ್ಲೇ ಇರುವುದು ತಿಳಿದಿದೆ, ಹಿಂದಿನ ಬಾಗಿಲಿನಿಂದ ಬಂದ ಕಳ್ಳರು ಟೇಬಲ್ ಮೇಲಿಟ್ಟಿದ್ದ 15 ಸಾವಿರ ರೂ ಮತ್ತು ಕಾರಿನ ಕೀ ತೆಗೆದುಕೊಂಡಿದ್ದಾರೆ, ಬಳಿಕ ಮಹಡಿಗೆ ಹೋಗಿ ಡೈಮಂಡ್ ರಿಂಗ್, ಏಳು ಸಾವಿರ ಹಣವನ್ನು ದೋಚಿ ಕಾರು ಸಮೇತ ಪರಾರಿಯಾಗಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications