Property: ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ: ಈ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ! ಹೊಸ ಅಪ್ಡೇಟ್ಸ್‌

Property: ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆಯ ಬಗ್ಗೆ ಬಿಗ್ ಅಪ್ಡೇಟ್ಸ್‌ ಸಿಕ್ಕಿದೆ. ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಇದೀಗ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಬದಲಾಗಿದೆ. ಬಿಬಿಎಂಪಿಯ ಯುಗಾಂತ್ಯವಾಗಿ ಜಿಬಿಎ ರೂಪುಗೊಂಡ ಮೇಲೆ ವಿವಿಧ ಪ್ರದೇಶಗಳನ್ನು ಹಂತ ಹಂತವಾಗಿ ಬೆಂಗಳೂರು ವ್ಯಾಪ್ತಿಗೆ ಸೇರಿಸುವುದಾಗಿ ಈ ಹಿಂದೆಯೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದರು. ಇದೀಗ ಬೆಂಗಳೂರಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗುವ ಬಗ್ಗೆ ಬಿಗ್ ಅಪ್ಡೇಟ್ಸ್‌ ಬಂದಿದೆ. ಇದರಿಂದ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಗರ ಯೋಜನೆಯ ಜವಾಬ್ದಾರಿಯಿಂದ ಮುಕ್ತಯ ಮಾಡಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರದೇಶವನ್ನು / ಬಿಬಿಎಂಪಿ ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ ಎಂದು ಬದಲಾಯಿಸಲಾಗಿದೆ. ನಗರ ಯೋಜನೆಯ ಸಂಪೂರ್ಣ ಜವಾಬ್ದಾರಿ ಇನ್ಮುಂದೆ ಜಿಬಿಎಗೆ ಇರಲಿದೆ ಎಂದು "ಪ್ರಜಾವಾಣಿ" ವರದಿ ಮಾಡಿದೆ.

New areas added to Bengaluru Land in this area is worth gold New updates

ಜಿಬಿಎ ಇನ್ಮುಂದೆ ಬೆಂಗಳೂರಿನ ಯೋಜನಾ ಪ್ರಾಧಿಕಾರ ಸಹ ಆಗಿರಲಿದ್ದು, ಬೆಂಗಳೂರಿನ ವಸತಿ ಬಡಾವಣೆಗಳು, ಕೈಗಾರಿಕಾ ಬಡಾವಣೆಗಳನ್ನು ಅನುಮೋದಿಸುವ ಇದಕ್ಕೆ ಇರಲಿದೆ. ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ನ ಸ್ಥಳೀಯ ಯೋಜನಾ ಪ್ರದೇಶವನ್ನು ಇನ್ನಷ್ಟೇ ಸೇರ್ಪಡೆ ಮಾಡಬೇಕಿದೆ.

719.29 ಚದರ ಕಿ.ಮೀ ವ್ಯಾಪ್ತಿಯ ಜಿಬಿಎ ಪ್ರದೇಶದಲ್ಲಿದ್ದರೆ, 683 ಚದರ ಕಿ.ಮೀ ಮಾತ್ರ ಈಗ ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶವಾಗಿದೆ. ನೈಸ್‌ನೊಂದಿಗೆ ಭೂ ವ್ಯಾಜ್ಯ ಇರುವುದರಿಂದ ಈ ಪ್ರದೇಶವನ್ನು ಸದ್ಯಕ್ಕೆ ಸೇರಿಸಿಲ್ಲ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನೂ ಸೇರಿಸುವ ಸಾಧ್ಯತೆ ಇದೆ. ಒಟ್ಟಾರೆ ಬೆಂಗಳೂರಿನ / ಜಿಬಿಎ ಆಡಳಿತ ವ್ಯಾಪ್ತಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗುತ್ತಿದ್ದು, ಇದರಿಂದ ವಿವಿಧ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನ ಹೊರ ವಲಯ ವ್ಯಾಪ್ತಿಯ ಇನ್ನಷ್ಟು ಪ್ರದೇಶಗಳು ಬೆಂಗಳೂರು / ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಗೆ ಸೇರುವ ಸಾಧ್ಯತೆ ಇದೆ. ಇದರಿಂದ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ರಿಯಲ್ ಎಸ್ಟೇಟ್ ಬೂಸ್ಟ್‌ ಆಗಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+