ಪರಿಸರ ಸಂರಕ್ಷಣೆಗೆ ಬೆಂಗಳೂರಲ್ಲಿ ಸೈಕಲ್ ಜಾಥಾ
ಬೆಂಗಳೂರು, ಡಿ. 14: 'ವಿಶ್ವ ಶಕ್ತಿ ಸಂರಕ್ಷಣಾ ದಿನಾಚರಣೆ' ಅಂಗವಾಗಿ ಅಸಿಸ್ಟ್ಹೆಲ್ಪ್ಸ್ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಸೈಕಲ್ ಜಾಥಾ ಆಯೋಜಿಸಿತ್ತು. ಸುಮಾರು 2000 ಕ್ಕೂ ಹೆಚ್ಚು ಶಾಲಾ ಮಕ್ಕಳು ಈ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು.
ಖಾಲಿಯಾಗುವ ಶಕ್ತಿ ಮೂಲಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು, ನವೀಕರಣಗೊಳಿಸಬಲ್ಲ ಇಂಧನ ಶಕ್ತಿ ಬಳಕೆ ಒತ್ತು ನೀಡುವುದು ಮತ್ತು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಸೈಕಲ್ ಜಾಥಾದ ಉದ್ದೇಶವಾಗಿತ್ತು.[ಪಾಲಿಥಿನ್ ಬ್ಯಾಗ್ ನಿಷೇಧ : ಉಡುಪಿ ಮಾದರಿ]

ಜೀವಿಕ ಆಸ್ಪತ್ರೆ ಮತ್ತು ರೆಡ್ಡಿ ಆಸ್ಪತ್ರೆ ಮುಖ್ಯಸ್ಥರಾದ ಡಾ. ಅಶೋಕ್ ರೆಡ್ಡಿ, ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್, ನಟಿ ದೀಪಿಕಾ ದಾಸ್ ಮತ್ತು ಆಶಿನಿ ಶೆಟ್ಟಿ ಭಾಗವಹಿಸಿದ್ದರು. ಆರ್ ಜೆ ವಿನಾಯಕ್ ಜೋಷಿ, ಲವ್ ಗುರು ರಾಜೇಶ್ ಸಾಥ್ಮ ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಹಾಜರಿದ್ದರು.
ಸೈಕಲ್ ಜಾಥಾದಲ್ಲಿ 17 ವರ್ಷದೊಳಗಿನ ಮಕ್ಕಳು ಮತ್ತು ಯುವಕರು ಭಾಗವಹಿಸಿದರು. ಅಸಿಸ್ಟ್ಹೆಲ್ಪ್ ಪ್ರತಿಷ್ಠಾನ ಮತ್ತು ಕ್ವಿಟಿಲ್ಸ್ ಇಂಡಿಯಾ ಆಯೋಜಿಸಿದ್ದ ಈ ಜಾಥಾ 5 ಕಿಮೀ ದೂರ ಸಾಗಿತು.[ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ]

ಎನ್ಜಿಓ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಸಿಸ್ಟ್ಹೆಲ್ಪ್ ಪ್ರತಿಷ್ಟಾನ ಒಂದು 'ಪ್ರತಿಯೊಬ್ಬರು ಪ್ರತಿಯೊಬ್ಬರಿಗಾಗಿ' ಎಂಬ ಧ್ಯೇಯ ಇಟ್ಟುಕೊಂಡು ಕೆಲಸಮಾಡುತ್ತಿದೆ. ಆರೋಗ್ಯ, ಪರಿಸರ, ವಿದ್ಯಾಭ್ಯಾಸ ಮತ್ತು ಬಡತನದ ಬಗ್ಗೆ ಜಾಗೃತಿ ಮತ್ತು ನಿರ್ಮೂಲನೆಗೆ ಪ್ರಯತ್ನಪಡುತ್ತಿದೆ.













Click it and Unblock the Notifications