ಓಲಾ ವಿರುದ್ಧ ಮುಷ್ಕರ ನಡೆಸಲು ಮುಂದಾದ ಚಾಲಕರ ಒಕ್ಕೂಟ
ಬೆಂಗಳೂರು, ಆಗಸ್ಟ್ 29: ಓಲಾ ಚಾಲಕರು ಸಂಸ್ಥೆ ವಿರುದ್ಧ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಚಾಲಕರ ವಿರುದ್ಧ ಸುಳ್ಳು ಕೇಸುಗಳನ್ನು ಓಲಾ ಸಂಸ್ಥೆ ದಾಖಲಿಸುತ್ತಿದೆ ಎಂದು ಆರೋಪಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.
ಕೆಲವು ಪ್ರಯಾಣಿಕರಿಂದ ಬಂದ ದೂರುಗಳನ್ನು ಆಧರಿಸಿ ಬೆಂಗಳೂರಿನ ಸಾವಿರಕ್ಕೂ ಹೆಚ್ಚು ಚಾಲಕರನ್ನು ಇತ್ತೂಚೆಗೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅವರ ಮೇಲೆ ಅನಗತ್ಯ ಕೇಸುಗಳನ್ನು ದಾಖಲಿಸಲಾಗುತ್ತಿದೆ.
ಪ್ರಯಾಣಿಕರು ನೀಡಿರುವ ಸ್ಟಾರ್ ರೇಟ್ ಕಡಿತಗೊಳಿಸಿ ವಾಹನ ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ತಿಳಿಸಿದ್ದಾರೆ.

ಪ್ರಯಾಣಿಕರ ಷೇರಿಂಗ್ ವ್ಯವಸ್ಥೆಯಲ್ಲಿ ಕಂಪನಿಯವರು ಕಿ.ಮೀಗೆ ರೂ.ಗಳನ್ನು ಚಾಲಕರಿಗೆ ನೀಡುತ್ತಿದ್ದಾರೆ. ಪ್ರತಿ ಕಿ.ಮೀ 24ರೂ.ಗಳನ್ನು ಕಡ್ಡಾಯವಾಗಿ ನೀಡಬೇಕು. ಚಾಲಕರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಯಾಣಿಕರೊಂದಿಗೆ ದುರ್ವರ್ತನೆ, ಓವರ್ ಸ್ಪೀಡ್, ಚಾಲನೆಯಲ್ಲಿ ಇರುವಾಗಲೇ ಮೊಬೈಲ್ ನಲ್ಲಿ ಮಾತನಾಡುವುದು ಸೇರಿದಂತೆ ಪದೇ ಪದೇ ಲೋಪ ಎಸಗುತ್ತಿರುವ ಒಂದು ಸಾವಿರ ಚಾಲಕರನ್ನು ಓಲಾ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕ್ರಮವನ್ನು ಖಂಡಿಸಿ ಓಲಾ ಸಂಸ್ಥೆ ಎದುರು ಚಾಲಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ.












Click it and Unblock the Notifications