ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ, ಸಚಿವರು..ಸೆಲೆಬ್ರಿಟಿಗಳು ಬೀದಿಗೆ: ಭಯಾನಕ ಭವಿಷ್ಯ
ಬೆಂಗಳೂರು, ಏಪ್ರಿಲ್ 12: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜೀನಾಮೆ, ಸಚಿವರಿಂದ ಹಿಡಿದು ಸಿನಿಮಾ ನಟ ನಟಿಯರು ಬೀದಿಗೆ, ಜನ ರೋಗ-ರುಜಿನಗಳಿಂದ ಬಳಲುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಈ ವರ್ಷದ ಭಯಾನಕ ಭವಿಷ್ಯ ನುಡಿದಿದ್ದಾರೆ. ಐತಿಹಾಸಿಕ ಬೆಂಗಳೂರು ಕರಗ ನಡೆಯುವ ಧರ್ಮರಾಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಬ್ರಹ್ಮಾಂಡ ಗುರೂಜಿ ಮುಂಬರುವ ದಿನಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ನಾಡಿನ ಜನತೆಗೆ ಎಚ್ಚರಿಕೆ ಮೇಲೆ ಎಚ್ಚರಿಕೆಗಳನ್ನು ನೀಡಿದ್ದಾರೆ.
'ಈ ವರ್ಷ ದೇಶದಲ್ಲಿ ರೋಗ-ರುಜಿನಗಳು ಹೆಚ್ಚಾಗುತ್ತದೆ. ಬಹಳಷ್ಟು ಜನ ಬಿಸಿಲಿನ ತಾಪದಿಂದ, ಚರ್ಮ ರೋಗದಿಂದ, ರೋಗ-ರುಜಿನಗಳಿಂದ ಬಳಲುತ್ತಾರೆ. ಇದು ಸತ್ಯ. ಯಾಕೆಂದರೆ ನೀವೆಲ್ಲರೂ ಮನೆಯಲ್ಲಿ ಅಡುಗೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದೀರಾ. ಹೋಟೆಲ್ ಅಲ್ಲಿ ತಿನ್ನುವುದು, ಬೀದಿಯಲ್ಲಿ ತಿನ್ನುವುದು ಜಾಸ್ತಿಯಾಗಿದೆ. ಯಾರು ಯಾವ ನೀರಿನಲ್ಲಿ ಮಾಡುತ್ತಾರೆ ಗೊತ್ತಿಲ್ಲ. ಹೀಗಾಗಿ ಮೀನಾ ರಾಶಿಯಲ್ಲಿರುವ ಶನೀಶ್ವರ ವ್ಯಾದಿಯನ್ನು ಕೊಡುವುದು ಸತ್ಯ' ಎಂದು ಹೇಳಿದರು.

'ಮುಂದಿನ ತಿಂಗಳು ಇಪ್ಪತ್ತೊಂಬತ್ತಕ್ಕೆ ರಾಹು ಕೇತು ಬದಲಾಗುತ್ತಾರೆ. ನಾಲ್ಕು ಗ್ರಹಗಳು ಮೂರೇ ತಿಂಗಳಲ್ಲಿ ಬದಲಾಗುವುದರಿಂದ ಅನೇಕ ಬದಲಾವಣೆಯಾಗುತ್ತದೆ. ಇನ್ನೂ ಒಂದೂವರೆ ವರ್ಷದಲ್ಲಿ ಪ್ರಧಾನಿ ಮೋದಿ ರಾಜೀನಾಮೆ ಕೊಡುತ್ತಾರೆ. ವಿಶೇಷವಾಗಿ ಅಧಿಕಾರ ಬಿಟ್ಟು ಹೋಗುವಂತಹದ್ದು ಆಗುತ್ತದೆ. ಯಾಕೆಂದರೆ ವೈರಾಗ್ಯ ಬಂದ ಮೇಲೆ ಏನೂ ಮಾಡಲು ಆಗುವುದಿಲ್ಲ. ಹೀಗಾಗಿ ಮುಂದೆ ದೇಶವನ್ನು ಆಳುವುದು ಸನ್ಯಾಸಿ ಅಂತಾ ವಿಶೇಷವಾಗಿ ಹೇಳಬಹುದು' ಎಂದರು.
'ಹೀಗಾಗಿ ಈ ವರ್ಷ ಆರೋಗ್ಯದ ರಕ್ಷಣೆ ಮಾಡಿಕೊಳ್ಳಿ. ಊಟ ತಿಂಡಿ ಯಾವ ಜಾಗದಲ್ಲಿ ಮಾಡುತ್ತೀರಾ ಎನ್ನುವದನ್ನು ಎಚ್ಚರ ವಹಿಸಿ. ಮಕ್ಕಳನ್ನು ಮೈ ತುಂಬಾ ಕಣ್ಣು ಎನ್ನುವಂತೆ ನೋಡಿಕೊಳ್ಳಿ. ಯಾವ ರೀತಿ ಅಪಘಾತಗಳು ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಎಲ್ಲರೂ ನಿಧಾನವಾಗಿ ವಾಹನ ಚಲಾಯಿಸಿ'.

'ಇನ್ನು ಮೇಲೆ ಮಿಥುನ ರಾಶಿಗೆ ಗುರು ಬರುವುದರಿಂದ ಯಾರ್ಯಾರು ಇಬ್ಬರು ಹೆಂಡತಿಯನ್ನು ಇಟ್ಟುಕೊಂಡಿದ್ದೀರಾ, ಮೂರು ಮೂರು ಕಟ್ಟಿಕೊಂಡಿದ್ದೀರಾ, ಯಾರು ಗೊತ್ತಿಲ್ಲದೇ ಸಂಬಂಧವನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದೀರಾ ಅವರೆಲ್ಲಾ, ದೊಡ್ಡ ಸಚಿವರಿಂದ ಹಿಡಿದು ಸಿನಿಮಾ ಸೆಲೆಬ್ರಿಟಿಗಳು ಬೀದಿಗೆ ಬರುವುದು ಗ್ಯಾರಂಟಿ. ವಕೀಲ ವರ್ಗಕ್ಕೆ, ಮಾಧ್ಯಮ ವರ್ಗಕ್ಕೆ ಕೆಲಸ ಹೆಚ್ಚಾಗುತ್ತದೆ. ಪೊಲೀಸರು ವಿಶೇಷವಾಗಿ ರಕ್ತಪಾತ ಆಗುವುದನ್ನು ನಿಲ್ಲಿಸಬೇಕು. ಎಲ್ಲರೂ ದೇವರಲ್ಲಿ ಒಳ್ಳೆಯದನ್ನೇ ಮಾಡಪ್ಪ ಅಂತಾ ಬೇಡಿಕೊಳ್ಳಬೇಕು' ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.












Click it and Unblock the Notifications