ಯಲಹಂಕಕ್ಕೆ ಆಗಮಿಸಿದ ಮೋದಿ, ಏರ್ ಶೋ ಉದ್ಘಾಟನೆ
ಬೆಂಗಳೂರು, ಫೆ. 18 : ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಭೇಟಿಗಾಗಿ ಬುಧವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ 'ಏರೋ ಇಂಡಿಯಾ' ಪ್ರದರ್ಶನಕ್ಕೆ ಮೋದಿ ಚಾಲನೆ ನೀಡಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಕ್ಷಣಾ ಸಚಿವ ಮನೋಹಕ್ ಪಾರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ ಮುಂತಾದವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. [ಮೋದಿ ಬೆಂಗಳೂರಿನ ಕಾರ್ಯಕ್ರಮಗಳು]

ಮೋದಿ ಭಾಷಣದ ಮುಖ್ಯಾಂಶಗಳು
* ಏರ್ ಶೋ ಉದ್ಘಾಟಸಿ ಮಾತನಾಡಿದ ಪ್ರಧಾನಿ ಮೋದಿ ಏರ್ ಶೋಗೆ ಆಗಮಿಸಿರುವ ಎಲ್ಲಾ ಕಂಪನಿಗಳಿಗೆ ಸ್ವಾಗತ ಕೋರುತ್ತೇನೆ ಎಂದರು. ಭಾರತದಲ್ಲಿ ಹೂಡಿಕೆ ಮಾಡಲು ಅನೇಕ ರಾಷ್ಟ್ರಗಳು ಮುಂದೆ ಬಂದಿವೆ ಎಂದು ಹೇಳಿದರು. [ಮೋದಿ ಭೇಟಿ ಸಂಚಾರ ಮಾರ್ಗ ಬದಲಾವಣೆ]

* ಭಾರತದಲ್ಲಿ ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದೆ ಎಂದು ಹೇಳಿದ ಪ್ರಧಾನಿ, ರಕ್ಷಣಾ ಕ್ಷೇತ್ರದಲ್ಲಿಯೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. [ಏರ್ ಶೋ ಚಿತ್ರಗಳನ್ನು ನೋಡಿ]

* ಭಾರತದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು ಎಂದು ಹೇಳಿದ ಅವರು, ಇದರಿಂದ ದೇಶದಲ್ಲಿ ಹೆಚ್ಚು-ಹೆಚ್ಚು ಉದ್ಯಮ ಸ್ಥಾಪನೆಯಾಗುತ್ತದೆ ದೇಶದ ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು. [ಎಚ್ ಎಎಲ್ ವಿಮಾನಗಳ ಶಕ್ತಿ ಪ್ರದರ್ಶನ]

* ದೇಶದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸಲು ನಾವು ಸಿದ್ದವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
A strong Indian defence industry will not only make India more secure. It will also make India more prosperous: PM @narendramodi
— PMO India (@PMOIndia) February 18, 2015 * ದೇಶಕ್ಕೆ ಶೇ 60 ರಷ್ಟು ರಕ್ಷಣಾ ಸಾಮಾಗ್ರಿಗಳು ಆಮದಾಗುತ್ತಿವೆ, ಆಮದು ಪ್ರಮಾಣ ಕಡಿಮೆಯಾಗಬೇಕು ಎಂದು ಮೋದಿ ಹೇಳಿದರು.

ಸಮಾರಂಭದ ಬಳಿಕ ನಡೆಯುತ್ತಿರುವ ಯುದ್ಧ ವಿಮಾನಗಳ ಸಾಹಸ ಪ್ರದರ್ಶನವನ್ನು ಮೋದಿ ವೀಕ್ಷಿಸುತ್ತಿದ್ದಾರೆ.
ಏರ್ ಶೋ ವಿಡಿಯೋ ನೋಡಿ











Click it and Unblock the Notifications