Get Updates
Get notified of breaking news, exclusive insights, and must-see stories!

ಮೋದಿ 'ಭಾರತ ಗೆಲ್ಲಿಸಿ' ಸಮಾವೇಶ: ವರದಿ

ಬೆಂಗಳೂರು, ನ.17: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಳೆ ಭೀತಿ ನಡುವೆಯೂ ಸಮಾವೇಶದ ಅಭೂತಪೂರ್ವ ಯಶಸ್ಸಿಗಾಗಿ ಕರ್ನಾಟಕ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಮೋದಿ ಅವರ ಬೆಂಗಳೂರು ಭೇಟಿ, ಸಮಾವೇಶದ ಚಿತ್ರಣ, ಬಿಜೆಪಿ ನಾಯಕರ ಉತ್ಸಾಹದ ಓಡಾಟದ ಬಗ್ಗೆ ವಿವರಣೆ ಇಲ್ಲಿದೆ ನೋಡಿ

ಸಮಯ 1.30: ಸಾಮಾಜಿಕ ಜಾಲ ತಾಣಗಳಿಗೆ ಬೆದರಿ ನಿಯಂತ್ರಣಕ್ಕೆ ಮುಂದಾದ ಯುಪಿಎ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.
* ಮಧ್ಯಮ ವರ್ಗದ ಜನತೆ ತೆರಿಗೆ ಕಟ್ಟುತ್ತಿಲ್ಲವೇ? ಅವರು ದೇಶದ ನಾಗರಿಕರಲ್ಲವೇ? 26 ರು ನಲ್ಲಿ ಜೀವಿಸಲು ಸಾಧ್ಯವೇ? ಬಡತನ ಮಾನಸಿಕ ಸ್ಥಿತಿಯೇ?
* 26 ರು ನಲ್ಲಿ 300 ಗ್ರಾಂ ಈರುಳ್ಳಿ ಕೊಳ್ಳಲು ಸಾಧ್ಯವಿಲ್ಲ. ಇನ್ನು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ?
* ವಾಂಖೆಡೆಯಲ್ಲಿ ಸಚಿನ್ ಅಂತಿಮ ಪಂದ್ಯದ ಸಮಯದಲ್ಲಿ ಇಡೀ ದೇಶ ಒಂದಾಗಿ ಸಚಿನ್ ಮಯವಾಗಿತ್ತು. ಜತೆಗೆ ಬೆಟ್ಟಿಂಗ್ ನಡೆದಿತ್ತು ಸಚಿನ್ ಶತಕ ಬಾರಿಸುತ್ತಾರೋ ಅಥವಾ ಯುಪಿಎ ಸರ್ಕಾರದ ಬೆಲೆ ಏರಿಕೆ ಶತಕ ಬಾರಿಸುತ್ತದೆಯೋ ಎಂದು.

ಸಮಯ: 1.15: ಯುಪಿಎ ಪಿಂಕ್ ಕ್ರಾಂತಿ(ಪ್ರಾಣಿಗಳ ಮಾಂಸ ರಫ್ತು) ಯಲ್ಲಿ ತೊಡಗಿದೆ. ದೇಶದಲ್ಲಿ ಆಮದು ಹೆಚ್ಚಾಗಿ ರಫ್ತ್ತು ಕಡಿಮೆಯಾಗಿದ್ದರಿಂದ ಆರ್ಥಿಕ ಅಸಮತೋಲನ ಉಂಟಾಗಿದೆ.
* ಐಟಿ ಕ್ಷೇತ್ರದ ಅಭಿವೃದ್ಧಿ ಯುಪಿಎ 1 ರ ಕಾಲದಲ್ಲಿ ಶೇ 40 ರಿಂದ ಶೇ 30ಕ್ಕೆ ಇಳಿಯಿತು. ಯುಪಿಎ 2 ಕಾಲದಲ್ಲಿ ಶೇ 9ಕ್ಕೆ ಇಳಿದಿದೆ.
* ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಜೀವಂತ ಇರಿಸಿಕೊಂಡಿರುವ ಯುಪಿಎ ಸರ್ಕಾರ. ಯುವಕರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ.
* ಕಲ್ಲಿದ್ದಲು ಹಗರಣ ಸೇರಿ ಅನೇಕ ಹಗರಣಗಳ ಕಡತಗಳನ್ನು ನಾಪತ್ತೆ ಮಾಡಿದೆ.
* ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ರೈಲ್ವೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ. ರೈಲ್ವೆ ವಿವಿಗಳನ್ನು ಸ್ಥಾಪಿಸಿಲ್ಲ. ಉದ್ಯೋಗ, ವಲಯ ವಿಂಗಡನೆಯಲ್ಲೂ ಅನ್ಯಾಯವಾಗಿದೆ.

ಸಮಯ 1.00: ಇಲ್ಲಿ ಕೇಸರಿ ಸಾಗರ ಸೃಷ್ಟಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಇಷ್ಟು ದೊಡ್ದ ಸಮಾವೇಶ ಕಂಡಿಲ್ಲ.
* ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದರು. ಅಟಲ್ ಬಿಹಾರಿ ವಾಜಪೇಯಿ ಅವರು ಇದಕ್ಕೆ ಜೈ ವಿಜ್ಞಾನ್ ಸೇರಿಸಿ ಸಾರ್ಥಕಗೊಳಿಸಿದರು.
* ಬೆಂಗಳೂರು ಐಟಿ ಬಿಟಿ ಕ್ಷೇತ್ರದ ತವರೂರು ಅಷ್ಟೇ ಅಲ್ಲ. ಜ್ಞಾನ ವಿಜ್ಞಾನದ ಪ್ರಮುಖ ಕೇಂದ್ರವಾಗಿದೆ.
* 2000ರಲ್ಲಿ ಅಟಲ್ ಅವರು ಐಟಿ ಕಾಯ್ದೆ ತಂದು ಹೊಸ ರೂಪು ನೀಡಿದ್ದನ್ನು ಮರೆಯುವಂತಿಲ್ಲ. 2003ರಲ್ಲಿ ವಿಜ್ಞಾನ, ತಂತ್ರಜ್ಞಾನ ಸೂತ್ರ ಹೊರ ಬಿದ್ದಿತು.
* ಐಟಿ ಕ್ಷೇತ್ರ ಕುಸಿತಕ್ಕೆ ಕಾರಣವಾದ ಯುಪಿಎ, ಅಟಲ್ ಅವರ ಕನಸು ನುಚ್ಚು ನೂರು ಮಾಡಿತು.
* ರುಪಾಯಿ ಈಗ ಐಸಿಯುನಲ್ಲಿದೆ. ದಿನೇ ದಿನೇ ಮೌಲ್ಯ ಕುಸಿಯುತ್ತಲೆ ಇದೆ ಇದು ಯುಪಿಎ ಸಾಧನೆ

Bangalore decked up for Narendra Modi's biggest rally

12.45: ಮೋದಿ ಭಾಷಣ: ಬೆಂಗಳೂರಿನ ಬಂಧು ಭಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಸಮಾವೇಶದ ಜನಸಾಗರವನ್ನು ಸಂಬೋಧಿಸಿದ ಮೋದಿ.
* ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಕನಕ ದಾಸರ ಹೆಸರು ಸ್ಮರಿಸಿದ ಮೋದಿ

* ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಸಚಿನ್, ಸಿಎನ್ ಆರ್ ರಾವ್ ಹೆಸರು ಹೇಳಿ ದೇಶಕ್ಕೆ ಸ್ಪೂರ್ತಿ ಎಂದರು.
* ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲೇ ವಿದ್ಯುತ್ ಸಂಪರ್ಕ ಸಿಕ್ಕಿದ್ದು ಎಂಬುದು ಹೆಮ್ಮೆಯ ಸಂಗತಿ

ಸಮಯ 12.20: ನನ್ನ ನಮಸ್ಕಾರ್ ಗಳು, ನಿಮಗೆಲ್ಲ ವಂದನೆ ಗಳು ಎಂದು ಭಾಷಣ ಶುರು ಮಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್. ಬೆಂಗಳೂರಿನ ಜನ ಸಾಗರ ಕಂಡು ಹೃದಯ ತುಂಬಿ ಬಂದಿದೆ

* ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಂದ ಸ್ವಾಗತ, ಪ್ರಾಸ್ತವನೆ..ಅನಂತಕುಮಾರ್ , ಗೆಹ್ಲೋಟ್ ಭಾಷಣ ಮಾಡುವುದಿಲ್ಲ ಎಂದರು.

* ಮೋದಿ ಹಾಗೂ ರಾಜನಾಥ್ ಸಿಂಗ್ ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

* ಸಮಾವೇಶ 10 ರು ಟಿಕೆಟ್ ದರ ಸೇರಿಸಿ ಸಂಗ್ರಹಿತ ಮೊತ್ತ 35 ಲಕ್ಷದ ಮೊತ್ತ ಚೆಕ್ ಮೋದಿ ಅವರಿಗೆ ನೀಡಿದ ಕರ್ನಾಟಕ ಬಿಜೆಪಿ. ಈ ಮೊತ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಬಳಸಲಾಗುತ್ತದೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ರಾಜ್ಯ ಬಿಜೆಪಿಗೆ ಹೊಸ ಹುರುಪು ತುಂಬುವ ಕಾರ್ಯವನ್ನು ಮೋದಿ ಮಾಡುತ್ತಾರೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಮೇಲೇಳುತ್ತದೆ ಎಂಬ ಆಶಾಭಾವನೆಯನ್ನು ಬಿಜೆಪಿ ಕಾರ್ಯಕರ್ತರು ಹೊಂದಿದ್ದಾರೆ.

Narendra-Modi-in-bangalore

ಸಮಯ 11.45: ಮೋದಿ ಹೊಗಳಿದ ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ : ಗುಜರಾತಿನ ಮುಖ್ಯಮಂತ್ರಿ ಮಾತ್ರವಲ್ಲ. ಆರ್ಥಿಕ ತಜ್ಞ, ರೈತ ಸ್ನೇಹಿ ಅಧಿಕಾರಿಯಾಗಿದ್ದಾರೆ. ಭಾರತ ಗೆಲ್ಲಿಸಿ ಎನ್ನಲು ಇದು ಕ್ರಿಕೆಟ್ ಮ್ಯಾಚಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, ಸಮರ್ಥ ಕ್ಯಾಪ್ಟನ್ ಇಲ್ಲದ ಭಾರತಕ್ಕೆ ಮೋದಿ ನಾಯಕರಾಗಿದ್ದಾರೆ ಎಂದರು.

* ಸಮಾವೇಶದ ಬಳಿ ಅನುಮಾನಾಸ್ಪಾದವಾಗಿ ಓಡಾಡುತ್ತಿದ್ದ ಮೂವರನ್ನು ತ್ರಿಪುರವಾಸಿ ಗೇಟ್ ಬಳಿ ಬಂಧನ ವಿಚಾರಣೆ

ಸಮಯ 11.30 : ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ

ಸಮಯ 11.00 : ಅರಮನೆ ಮೈದಾನದಲ್ಲಿ ವಾತಾವರಣ ತಿಳಿಗೊಂಡಿದೆ. ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಮೋದಿ ಭಾಷಣದ ನೇರ ವಿಡಿಯೋ ಲೈವ್ http://www.india272.com/ ನಲ್ಲಿ ತಪ್ಪದೇ ನೋಡಿ
* ಬೆಳಗ್ಗೆ 9.42ಕ್ಕೆ ಅಹಮದಾಬಾದ್ ಬಿಟ್ಟಿರುವ ಮೋದಿ ಅವರು ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಸುಮಾರು 11.30ಕ್ಕೆ ಆಗಮಿಸಲಿದ್ದಾರೆ.
* ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪಾದ ಟೆಡ್ಡಿ ಬೇರ್ ಪತ್ತೆ, ಪೊಲೀಸರಿಂದ ಪರಿಶೀಲನೆ ಆತಂಕ ನಿವಾರಣೆ

ಮಳೆ ಭೀತಿ : ಬಂಗಾಳಕೊಲ್ಲಿಯ ಚಂಡಮಾರುತದ ಪ್ರಭಾವ ತಮಿಳುನಾಡು, ಆಂಧ್ರಪ್ರದೇಶದ ದಕ್ಷಿಣ ಭಾಗ, ಕರ್ನಾಟಕದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ ಭಾನುವಾರ ಮೋದಿಗೆ ವರುಣ ಸ್ವಾಗತ ಕೋರುತ್ತಾನೆಯೇ ಎಂದು ಕಾದು ನೋಡಬೇಕು.

ಇತ್ತೀಚಿನ ಪಾಟ್ನಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಅರಮನೆ ಮೈದಾನದ ಸುಮಾರು 60 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದೆ. ಮೋದಿ ಅವರ ಭಾಷಣಕ್ಕಾಗಿ 80-40 ಅಡಿ ವಿಶಾಲವಾದ ಬೃಹತ್ ವೇದಿಕೆ ಸಿದ್ಧವಾಗಿದೆ.

Bangalore decked up for Narendra Modi's biggest rally, a test for BJP

ಗಣ್ಯರು : ಮೋದಿ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯ ಉಸ್ತುವಾರಿ ಥಾವರ್ ಚಂದ್ ಗೆಹ್ಲೋಟ್, ರಾಷ್ಟ್ರೀಯ ನಾಯಕರಾದ ವೆಂಕಯ್ಯ ನಾಯ್ಡು, ಅನುರಾಗ್ ಸಿಂಗ್ ಠಾಕೂರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ, ಸಂಸದರು ಸೇರಿದಂತೆ 36ರಿಂದ 40 ಮಂದಿ ಪ್ರಧಾನ ವೇದಿಕೆಯಲ್ಲಿರುತ್ತಾರೆ.

ಇದರ ಪಕ್ಕದಲ್ಲೇ ಮತ್ತೊಂದು ವೇದಿಕೆ ಸಿದ್ಧಪಡಿಸಲಾಗಿದ್ದು, ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 250 ಮಂದಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಹಾರದ ವ್ಯವಸ್ಥೆ: ಸಮಾವೇಶಕ್ಕೆ ಬರುವ ಎಲ್ಲರಿಗೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಮಾವೇಶ ಮುಗಿಸಿಕೊಡು ಹೋಗುವ ಸಂದರ್ಭದಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಸಿದ್ಧತೆಗಾಗಿ ಆರು ಅಡುಗೆ ಮನೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ಅಡುಗೆಮನೆಯಲ್ಲಿ 1000-1200 ಅಡುಗೆ ಭಟ್ಟರು ಆಹಾರ ಸಿದ್ಧಪಡಿಸಲಿದ್ದಾರೆ. ಇದನ್ನು ವಿತರಿಸಲು 300 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 500 ತಾತ್ಕಾಲಿಕ ಶೌಚಾಲಯಗಳನ್ನು ಕೂಡ ಮೈದಾನದಲ್ಲಿ ತೆರೆಯಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+