ಲ್ಯಾಂಗ್‌ಫರ್ಡ್ ಟೌನ್ ನಾರಾಯಣ ಮೆಡಿಕಲ್ ಸೆಂಟರ್ ಉದ್ಘಾಟನೆ
ಬೆಂಗಳೂರು, ಅಕ್ಟೋಬರ್ 16: ನಾರಾಯಣ ಹೆಲ್ತ್ ಪ್ರಾಥಮಿಕ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ. ಅತ್ಯಾಧುನಿಕ, ಮಲ್ಪಿ ಸ್ಪೆಷಾಲಿಟಿ ಸೌಲಭ್ಯದ ಕೇಂದ್ರವು ಲ್ಯಾಂಗ್‌ಫರ್ಡ್ ಟೌನ್‌ನಲ್ಲಿ ಇತ್ತೀಚೆಗೆ ಆರಂಭವಾಗಿದೆ.
'ನಗರದಲ್ಲಿ ಹೊರರೋಗಿಗಳ ವಿಭಾಗ ತೆರೆಯಬೇಕು ಎಂಬುದೊಂದು ಕನಸು ಇತ್ತು. ಈ ನಿಟ್ಟಿನಲ್ಲಿ ನಾವು ಅತ್ಯಾಧುನಿಕ ಸೌಲಭ್ಯದ ಕೇಂದ್ರ ಆರಂಭಿಸುವ ಮೂಲಕ ಅದನ್ನು ಈಡೇರಿಸಿದ್ದೇವೆ ಎಂಬುದು ನನಗೆ ಸಂತಸ ಮೂಡಿಸಲಿದೆ ಎಂದು ನಾರಾಯಣ ಹೆಲ್ತ್‌ನ ಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಹೇಳಿದರು.

'ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಪರಿಣಿತ ವೈದ್ಯರು, ಅತ್ಯಾಧುನಿಕ ಮೂಲಸೌಕರ್ಯ ಹೊಂದಿರುವ ಈ ಕೇಂದ್ರವು ರೋಗಿಳಿಗೆ ಕಿಮೊಥೆರಪಿ, ಡಯಾಲಿಸಿಸ್, ದಿನದ ಆರೈಕೆ ಹಾಗೂ ಇನ್ನಿತರ ಸೇವೆಗನ್ನು ಒದಗಿಸಲಿದೆ. ಈ ಕೇಂದ್ರವು ರೋಗಿಗಳಿಗೆ ನಾರಾಯಣ ಹೆಲ್ತ್ ನೀಡಲಿರುವ ಅದೇ ಗೂಣಮಟ್ಟದ ಸೇವೆಯನ್ನು ಒಗಿಸಲಿದೆ ಎಂದು ಹೇಳಿದರು.
ರೋಗಿಗಳಿಗೆ ಸಮಗ್ರ, ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸಲು ಅಂದರೆ ಕಿಮೊಥೆರಪಿ, ಡಯಾಲಿಸಿಸ್, ಸ್ಲೀಪ್ ಕ್ಲಿನಿಕ್ಸ್, ದಿನದ ಆರೈಕೆ, ಆರೋಗ್ಯ ತಪಾಸಣೆ, ಹೊರರೋಗಿಗಳ ತಪಾಸಣೆ ಹೀಗೆ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡಿದೆ.

ಈ ಕೇಂದ್ರದಲ್ಲಿ ಎಕ್ಸ್-ರೇ, ಇಸಿಜಿ, ಟಿಎಂಟಿ, ಇಸಿಎಚ್‌ಒ, ಇಇಜಿ ಮತ್ತು ಯುಎಸ್‌ಜಿ, ಎಂಡೊಸ್ಕೊಪಿ, ಪಲ್ಮೊನೊಲಾಜಿ, ಸ್ಪಿರೊಮೆಟ್ರಿ ಸೌಲಭ್ಯಗಳು ಇದ್ದು, ಔಷಧಾಲಯವನ್ನು ಒಳಗೊಂಡಿದೆ.
ವಿಶೇಷಗಳು : ಮಕ್ಕಳ ಆರೈಕೆ, ಪ್ರಸೂತಿ ಮತ್ತು ಸ್ತೀರೋಗ, ಮೆಡಿಕಲ್ ಅಂಕಾಲಜಿ, ಗ್ಯಾಸ್ಟ್ರೊಎಂಟೆರಾಲಜಿ, ನರರೋಗ ಚಿಕಿತ್ಸೆ, ಯುರಾಲಜಿ, ನೆಫ್ರಾಲಜಿ, ಬ್ರೆಸ್ಟ್ ಅಂಕಾಲಜಿ, ಹೆಮೆಟಾಲಜಿ, ಮೂಳೆರೋಗ ಚಿಕಿತ್ಸೆ, ಹೃದ್ರೋಗ, ಪಲ್ಮೊನಾಲಾಜಿ, ಎಂಡೊಕ್ರಿನಾಲಜಿ, ಡಯಾಬೆಟೊಲಾಜಿ,
ಡೆರ್ಮಾಟಾಲಜಿ/ಕಾಸ್ಮೆಟಾಲಜಿ,ಇ.ಎನ್.ಟಿ












Click it and Unblock the Notifications