ಚುನಾವಣೆ ನಂತರ ಹೊಸ ಸರ್ಕಾರವೇ ಅಮುಲ್ ವಿಚಾರದ ಬಗ್ಗೆ ನಿರ್ಧರಿಸಲಿ: ಕೇಂದ್ರ ಸರ್ಕಾರಕ್ಕೆ ಎಎಪಿ ಸಲಹೆ
ಬೆಂಗಳೂರು, ಏಪ್ರಿಲ್ 10: ಕರ್ನಾಟಕದ ನಂದಿನಿ ಸಂಸ್ಥೆ ಹಾಗೂ ಗುಜರಾತಿನ ಅಮೂಲ್ ವಿಲೀನ ವಿಚಾರ ದಿನಕಳೆದಂತೆಲ್ಲ ಜೀವ ಪಡೆದುಕೊಳ್ಳುತ್ತಲೇ ಸಾಗಿದೆ. ಚುನಾವಣೆ ಹತ್ತಿರವಿದ್ದಾಗ ಈ ವಿಚಾರ ಮುನ್ನೆಲೆಗೆ ತಂದು ರಾಜಕೀಯ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿದೆ.
ನಂದಿನಿ ಮತ್ತು ಅಮುಲ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಕೇಂದ್ರ ಸಹಕಾರ ಸಚಿವರು ಈ ಹಿಂದೆ ಅಮಿತ್ ಶಾ ಅವರು ಮಾತನಾಡಿದ್ದರು. ಅದಾದ ಬಳಿಕ ಇಂತಹ ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಮೊದಲ ಬಾರಿಗೆ ತಲೆದೂರಿದೆ. ವಿಲೀನದಂತಹ ದೊಡ್ಡ ನಿರ್ಧಾರಗಳನ್ನು ಮಾಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು. ಇನ್ನೇನು ಚುನಾವಣೆ ಬರಲಿದ್ದು, ಅದು ಮುಗಿದ ಬಳಿಕ ಈ ವಿಚಾರದ ಬಗ್ಗೆ ನಿರ್ಧರಿಸಿ ಎಂದು ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಆಮ್ ಆದ್ಮಿ ಪಕ್ಷದ ನಾಯಕ ಬ್ರಿಜೆಟ್ ಕಾಳಪ್ಪ ಅವರು, ಸೋಮವಾರ ಚುನಾವಣಾ ಅಭ್ಯರ್ಥಿಗಳ ಅಂತಿಮ (3ನೇ ಪಟ್ಟಿ) ಪಟ್ಟಿ ಬಿಡುಗಡೆ ಮಾಡಿದರು.
ನಂದಿನಿ ಮತ್ತು ಅಮುಲ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಅಮಿತ್ ಶಾ ಈ ಹಿಂದೆ ಮಾತನಾಡಿದ್ದರು. ಇದೀಗ ಈಗ ಲಕ್ಷಾಂತರ ಜನರು ಹಾಲನ್ನು ಕೆಎಂಎಫ್ ಕೊಡುತ್ತಿದ್ದಾರೆ. ಅದೇ ರೀತಿ ಖರೀದಿ ಕೂಡ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಈ ಎರಡು ಬೃಹತ ಸಂಸ್ಥೆಗಳ ವಿಲೀನ ಈ ವಿಚಾರ ಬರಬಾರದಾಗಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ನಿರ್ಣಯ ದಿಂದ ಆಕ್ರೋಶ
ದೇಶದಲ್ಲಿ ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಆಯಿತು. ಸ್ಟೇಟ್ ಬ್ಯಾಂಕ್ ಮೈಸೂರ್ ಕೂಡ ಈಗ ಇಲ್ಲ. ಅದೂ ಸಹ ವಿಲೀನ ಆಗಿ ಹೋಗಿದೆ. ಅದೇ ರೀತಿ ನಂದಿನಿಯನ್ನು ಮಾಯ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ
ಇದೇ ವಿಚಾರವಾಗಿ ನಾಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದು. ಅದಕ್ಕಾಗಿ ಸರ್ಕಾರ ಆಮ್ ಆದ್ಮಿ ಪಕ್ಷದ ಸಲಹೆಯನ್ನು ಪರಿಗಣಿಸಬೇಕು. ಈಗ ಈ ಚುನಾವಣೆ ಮುಗಿದ ಮೇಲೆ ಹೊಸ ಸರ್ಕಾರ ಬರುತ್ತದೆ. ಆಗ ಹೊಸ ಸರ್ಕಾರವೇ ಈ ಸಮಸ್ಯೆಯನ್ನು ಬಗೆಹರಿಸಲಿ. ಅಲ್ಲಿಯವರೆಗೆ ಈ ವೀಲಿನ ವಿಚಾರವನ್ನು ಪಕ್ಕಕ್ಕೆ ಇಡಿ, ಚುನಾವಣೆ ಎದುರಿಸಿ ಎಂದು ಅವರು ಸಲಹೆ ನೀಡಿದರು.
ಒಂದು ವೇಳೆ ಎಎಪಿ ಪಕ್ಷದ ಮಾತು ಮೀರಿ ಮುಂದಿನ ದಿನದಲ್ಲಿ ನಿರ್ಧಾರ ತೆಗೆದುಕೊಂಡರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಅಂದಿನ ಪರಿಸ್ಥಿತಿಗೆ ನೀವೆ ಜವಾಬ್ದಾರರು ಎಂದು ಬಿಜೆಪಿ ಸರ್ಕಾರವನ್ನು ಅವರು ಎಚ್ಚರಿಸಿದರು.

224 ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸಿದ ಎಎಪಿ
ಸೋಮವಾರ ಎಎಪಿಯು ಸಾರ್ವತ್ರಿಕ ಚುನಾವಣೆ ಸಂಬಂಧ ತಮ್ಮ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕದ ಎಲ್ಲ ಕ್ಷೇತ್ರಗಳ ಹೆಸರುನ್ನು ಪ್ರಕಟಿಸಿತು. ಮೂರನೇ ಪಟ್ಟಿಯಲ್ಲಿ ಬಾಕಿ ಇದ್ದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಘೋಷಿಸಿದೆ.
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 168 ಕ್ಷೇತ್ರಗಳಲ್ಲಿ ಎಎಪಿಯಿಂದ ಯುವ ಕಾರ್ಯಕರ್ತರು, ರೈತರು, ಮಹಿಳೆಯರು, ಸುಶಿಕ್ಷಿತರು, ಪ್ರಮಾಣಿಕ ಮತ್ತು ದಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ.












Click it and Unblock the Notifications