ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ದಂಧೆ: ನಾಲ್ವರ ಬಂಧನ
ಬೆಂಗಳೂರು, ಡಿಸೆಂಬರ್ 4:ಉದ್ಯಮಿಗಳ ಬಳಿ ಹಣ ವಸೂಲಿ ಮಾಡಲು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯೊಬ್ಬರ ಬಳಿ 65 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲು ಬೆದರಿಸಿ ಹನಿಟ್ರ್ಯಾಪ್ ನಡೆಸಿದ್ದ ತಾಯಿ ಬೇಬಿ ರಾಣಿ, ಪುತ್ರಿ ಪ್ರೀತಿ, ಗಂಡ ಪಟೇಲ್ ಬಾಬು, ಟೇಲ್ ಬಾಬು ತಮ್ಮ ಪ್ರಸಾದ್ ಎಂಬುವವರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ತಾಯಿ ಮತ್ತು ಮಗಳೇ ಪ್ರಮುಖ ಆರೋಪಿಗಳಾಗಿದ್ದಾರೆ. 73 ಲಕ್ಷ 55 ಸಾವಿರ ರೂಪಾಯಿ ಹಣ ಪಡೆದ ಆರೋಪಿಗಳು ಜಡ್ಜ್ ಹೆಸರಿನಲ್ಲಿ 65 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ಕೃಷ್ಣದಾಸ್ ಎಂಬುವವರು ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಕೂಡ ಹೆಚ್ಚು ಎಚ್ಚರಿಕೆ ವಹಿಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.












Click it and Unblock the Notifications