Namma Yatri: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: 'ನಮ್ಮ ಟ್ರಾನ್ಸಿಟ್' ವೈಶಿಷ್ಟ್ಯ ಪರಿಚಯ, ಪ್ರಯೋಜನಗಳು...
ಬೆಂಗಳೂರು, ಜುಲೈ 26: ಬೆಂಗಳೂರಿನಲ್ಲಿ ಹೊಸ ಮಾರ್ಗಗಳು ಇನ್ನೇನು ಉದ್ಘಾಟನೆಗೊಳ್ಳಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಅಪ್‌ಗ್ರೇಡ್ ಆಗಿರುವ ಆಟೋ ಸೇವೆ ನೀಡುವ 'ನಮ್ಮ ಯಾತ್ರಿ' ಹೊಸ ವೈಶಿಷ್ಟ್ಯ 'ನಮ್ಮ ಟ್ರಾನ್ಸಿಟ್' ಅನ್ನು ಪರಿಚಯಿಸಿದೆ. ಪ್ರಯಾಣಿಕರಿಗೆ ನೈಜ ಸಮಯದಲ್ಲಿ ಸಹಾಯ ಮಾಡುವ ಫೀಚರ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರಯಾಣಿಕರಿಗೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ?
ಈಗಾಗಲೇ ಜನರ ಅನುಕೂಲಕ್ಕಾಗಿ, ಸುಗಮ ಸಾರಿಗೆ ಸಂಪರ್ಕಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತು ನಮ್ಮ ಯಾತ್ರಿ ಸಹಕಾರ ಒಪ್ಪಂದ ಮಾಡಿಕೊಂಡಿವೆ. ಜನರು ಈ 'ನಮ್ಮ ಟ್ರಾನ್ಸಿಟ್' ನಿಂದ ಮೆಟ್ರೋ ರೈಲು ನಿಖರ ಸಮಯ, ಹತ್ತಿರದ ಮೆಟ್ರೋ ನಿಲ್ದಾಣಗಳು ಮತ್ತು ಇತರ ವಿವರಗಳ ಮಾಹಿತಿಯನ್ನು ನೀಡುತ್ತದೆ. ಮುಖ್ಯವಾಗಿ ನಮ್ಮ ಯಾತ್ರಿ ಹಾಗೂ ಮೆಟ್ರೋ, ಆಟೋ ಮತ್ತು ಕ್ಯಾಬ್ ಪ್ರಯಾಣವನ್ನು ಒಂದೇ ವೇದಿಕೆಗೆ (ಅಪ್ಲಿಕೇಶನ್) ತರುತ್ತದೆ. ಒಂದೇ ಅಪ್ಲಿಕೇಷ್‌ನನಲ್ಲಿ ಎಲ್ಲ ಅನುಭವ ನೀಡುತ್ತದೆ ಎಂದು ಸಂಸ್ಥೆ ಹೇಳಿದೆ.

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ, ನೀಲಿ ಮಾರ್ಗ, ಗುಲಾಬಿ ಮಾರ್ಗ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮಾಡಲಿವೆ. ಅದರಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರ ಇದೇ ವರ್ಷ ತೆರೆಯಲಿದೆ. ಈ ವೈಶಿಷ್ಟ್ಯವು ನಗರದ ನಿವಾಸಿಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಿದೆ.
ಪ್ರಯಾಣಿಕರಿಗೆ ಏನಲ್ಲ ಪ್ರಯೋಜನವಿದೆ?
ನಮ್ಮ ಮೆಟ್ರೋ ರೈಲಿನಲ್ಲಿಂದ ಹೊರ ಬರುವುದು, ಒಳಗೆ ಹೋಗುವಾಗ ಪ್ಲಾಟ್‌ಫಾರ್ಮ್ ಮತ್ತು ಗೇಟ್ ಬಳಸಬೇಕು. ಮೋಡ್‌ಗಳ ಬದಲಾವಣೆ, ಮೆಟ್ರೋ ರೈಲು ಹಾಗೂ ಆಟೋ ಎರಡನ್ನೂ ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವಾರು ವಿವರಗಳನ್ನು ಪ್ರಯಾಣಿಕರ ತಿಳಿಯಬಹುದಾಗಿದೆ. ದೈನಂದಿನ ಸಾರ್ವಜನಿಕ ಸಾರಿಗೆ ಬಳಸುವವರಿಗೆ ಈ ನಮ್ಮ ಟ್ರಾನ್ಸಿಟ್ ಬಹುಳ ಪ್ರಯೋಜನಕಾರಿಯಾಗಿದೆ. ನಿಮ್ಮ ಇಡಿ ಪ್ರಯಾಣ ನಿಮ್ಮ ನಿಯಂತ್ರಣದಲ್ಲಿ ಇರಲಿದೆ. ಪ್ರಯಾಣದ ಒಟ್ಟು ಸಮಯ ನೀವು ಮೊದಲೇ ಅಂದಾಜಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ದೈನಂದಿನ ಸಂಚಾರ ಯಾವುದೇ ಜಂಜಾಟ ಇಲ್ಲದೇ ಸರಳವಾಗಿ ಆದರೆ ಜನರಿಗೆ ಹೆಚ್ಚಿನ ಒತ್ತಡ ಇರುವುದಿಲ್ಲ. ಆ ದೃಷ್ಟಿಯಿಂದ ನಮ್ಮ ಟ್ರಾನ್ಸಿಟ್ ಫೀಚರ್ ಜಾರಿಗೆ ತರಲಾಯಿತು. ಸಾರ್ವಜನಿಕ ಸಾರಿಗೆಯಲ್ಲಿ ನಮ್ಮ ಯಾತ್ರಿ ಮೊದಲ ಆಯ್ಕೆ ಆಗಿರಲಿದೆ. ಆ ನಿಟ್ಟಿನಲ್ಲಿ ವಿನ್ಯಾಸಗೊಳಿಸಿದ್ದೇವೆ. ವೇಗ, ದಕ್ಷತೆ ಮತ್ತು ವಿಶ್ವಾಸಾರ್ಹವಾಗಿದೆ. ಈ ವೈಶಿಷ್ಟ್ಯವು ಸದ್ಯ ಆಯ್ದ ಪ್ರಯಾಣಿಕರಿಗೆ ಮಾತ್ರ ಲಭ್ಯವಾಗಿದ್ದರೂ ಸಹಿತ ಮುಂದಿನ ದಿನಗಳಲ್ಲಿ ಎಲ್ಲ ವಿವಿಧ ಪ್ರಯಾಣಿಕರಿಗೂ ಅನುಕೂಲ ಒದಗಿಸುವಂತೆ ವಿನ್ಯಾಸಗೊಳ್ಳಲಿದೆ ಎಂದು ಸಂಸ್ಥಾಪಕರು ಮಾಹಿತಿ ನೀಡಿದ್ದಾರೆ.












Click it and Unblock the Notifications