Namma Metro: ಹಳದಿ ಮಾರ್ಗದಲ್ಲಿ ಪ್ರಯೋಗಿಕ ಸಂಚಾರ ಆರಂಭ; ತೇಜಸ್ವಿ ಸೂರ್ಯ ಹೇಳಿದ್ದೇನು?

ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭದ ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಇಂದು ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ತನ್ನ ಮೊದಲ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ನಡುವೆ 18.8 ಕಿಮೀ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಯಶಸ್ವಿಯಾಗಿ ಸಂಚರಿಸಿದೆ.

namma metro yellow line trial run begins first driverless train

ಪ್ರಾಯೋಗಿಕ ಸಂಚಾರದ ವಿಡಿಯೋವನ್ನು ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಬಿಎಂಆರ್ ಸಿಎಲ್ ಹಳದಿ ಮಾರ್ಗದಲ್ಲಿ (RV ರಸ್ತೆಯಿಂದ ಬೊಮ್ಮಸಂದ್ರಕ್ಕೆ) ತನ್ನ ಮೊದಲ ಪ್ರಯೋಗವನ್ನು ಇಂದು ಪೂರ್ಣಗೊಳಿಸಿದೆ.

ಮೋದಿ 3.0 ರ ಮೊದಲ ವರ್ಷದಲ್ಲಿ ಈ 18.8 ಕಿಮೀ ಲೈನ್‌ನಲ್ಲಿ ಸಂಚಾರ ಪ್ರಾರಂಭಿಸುವುದು ನನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ರೈಲುಗಳನ್ನು ನಿರ್ವಹಿಸಲು ಟಿಟಾಘರ್‌ನಿಂದ ರೋಲಿಂಗ್ ಸ್ಟಾಕ್ ಮತ್ತು ಟಿಸಿಎಂಎಸ್ ಸಾಫ್ಟ್‌ವೇರ್‌ನ ಆರಂಭಿಕ ವಿತರಣೆಗೆ ಒತ್ತಾಯಿಸುತ್ತೇನೆ.

ಯಾವುದೇ ಸಂಭಾವ್ಯ ಅಡಚಣೆಗಳನ್ನು ಪರಿಹರಿಸಲು ಶೀಘ್ರದಲ್ಲೇ ಮಧ್ಯಸ್ಥಗಾರರ ಸಭೆಯನ್ನು ಕರೆಯಲಾಗುವುದು ಎಂದು ಹೇಳಿದ್ದಾರೆ.

ಈ ವರ್ಷವೇ ಸಂಚಾರ ಆರಂಭ

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಈ ಮೆಟ್ರೋ ಮಾರ್ಗ ಸಾಕಷ್ಟು ಕೊಡುಗೆ ನೀಡುವ ಸಾಧ್ಯತೆ ಇದೆ.

ಅದರಲ್ಲೂ ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಹಳದಿ ಮಾರ್ಗವು ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ ಹಲವು ಕಾರಣಗಳಿಂದ ಈ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿದೆ.

ಚೀನಾದಿಂದ ಮೊದಲ ಸೆಟ್ ಚಾಲಕ ರಹಿತ ರೈಲು ಬೆಂಗಳೂರಿಗೆ ಬಂದಿದ್ದು, ಇನ್ನೂ ಹಲವು ಸೆಟ್‌ಗಳು ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+