Namma Metro: ಬೆಂಗಳೂರಿಗೆ ಬಂತು 3ನೇ ರೈಲು, ಜೂನ್ ಅಂತ್ಯಕ್ಕೆ 'ಹಳದಿ ಮಾರ್ಗ'ದ ಕಾರ್ಯಾಚರಣೆ?
ಬೆಂಗಳೂರು, ಮೇ 16: ಬೆಂಗಳೂರಿನ ನಮ್ಮ ಮೆಟ್ರೋ ಹೆಬ್ಬಗೋಡಿ ಡಿಪೋಗೆ ಪಶ್ಚಿಮ ಬಂಗಾಳದ ಟಿಟಾಗರ್‌ನಿಂದ ಹೊಸ ಡ್ರೈವರ್‌ಲೆಸ್ ಬೋಗಿಗಳು ಆಗಮಿಸಿವೆ. ಕಳೆ ತಿಂಗಳಾಂತ್ಯಕ್ಕೆ ರಸ್ತೆ ಮೂಲಕ ಹೊರಟ್ಟಿದ್ದ ಮೆಟ್ರೋ ಬೋಗಿಗಳು ಸುರಕ್ಷಿತವಾಗಿ ರಾಜಧಾನಿ ತಲುಪಿವೆ. ಇವುಗಳನ್ನು ಹಳಿಗೆ ಇಳಿಸಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಈ ಮೂಲಕ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಮಹತ್ವದ ಅಪ್ಡೇಟ್ ಸಿಕ್ಕಂತಾಗಿದೆ.
ಪಶ್ಚಿಮ ಬಂಗಾಳದ ಟಿಟಾಗರ್ ನಿಂದ ಕಳೆದ ಏಪ್ರಿಲ್ 29ರಂದು ಮೆಟ್ರೋ ಬೋಗಿಗಳನ್ನು ರವಾನಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಮೂರನೇ ರೈಲಿನ ಒಟ್ಟು ಆರು ಬೋಗಿಗಳ ಪೈಕಿ ಮೂರು ರೈಲು ಬೋಗಿಗಳಿಗೆ ಅಂದು ಚಾಲನೆ ನೀಡಲಾಗಿತ್ತು. ಉಳಿದ ಮೂರು ಬೋಗಿಗಳನ್ನು ಮೇ 02ರಂದು ಕಳುಹಿಸಿದೆ.

ಜೂನ್‌ನಲ್ಲಿ ಹಳದಿ ಮಾರ್ಗ ಓಪನ್..?
ಬೃಹತ್ ಲಾರಿಗಳಿಂದ ರಸ್ತೆ ಮಾರ್ಗವಾಗಿ ಬಂದ ಮೂರನೇ ರೈಲನ್ನು ಕೆಳಗೆ ಇಳಿಸಿ ಹಳಿಗೆ ಜೋಡಿಸಲಾಗುತ್ತಿದೆ. ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (CMRS) ಅಧಿಕಾರಿಗಳ ಗುಂಪು ವಿವಿಧ ಹಂತಗಳಲ್ಲಿ ಹೊಸ ರೈಲನ್ನು ಪರಿಶೀಲಿಸಲಿದೆ. ಜೂನ್ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಚಿಂತನೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಚಿಂತನೆ ಇಟ್ಟುಕೊಂಡಿದೆ.
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲು ಒಟ್ಟು ಸುಮಾರು 15 ರೈಲುಗಳ ಅಗತ್ಯವಿದೆ. ಸುಮಾರು ಎಂಟು ರೈಲುಗಳು ಸಿಕ್ಕಲ್ಲಿ ಅವನ್ನು ಪ್ರತಿ 15 ನಿಮಿಷಕ್ಕೆ ಒಂದರಂತೆ ಓಡಿಸಲಾಗುತ್ತದೆ. ಸದ್ಯ ಅಷ್ಟು ರೈಲುಗಳು ಲಭ್ಯವಿಲ್ಲ ಕಾರಣ, ಇರು ರೈಲಿನಲ್ಲೇ ಪ್ರತಿ 30 ನಿಮಿಷಕ್ಕೆ ಒಂದರಂತೆ ಓಡಿಸಲು ಪ್ಲಾನ್ ಮಾಡಿಕೊಂಡಿದೆ.
ಹಸಿರು ಮಾರ್ಗದ ರಾಷ್ಟ್ರೀಯ ವಿದ್ಯಾಯಲಯ ರಸ್ತೆಯಿಂದ ಬೊಮ್ಮಸಂದ್ರವರೆಗೆ ಒಟ್ಟು 18 ಕಿಲೋ ಮೀಟರ್ ಇದೆ. ಈ ಮಾರ್ಗ ಬೆಂಗಳೂರಿನ ಮಟ್ಟಿಗೆ ನಿರ್ಣಾಯಕ ಅಂತಲೂ ಹೇಳಲಾಗುತ್ತಿದೆ. ಈ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಪ್ರಯಾಣಿಕರು ಕಾಯುತ್ತಿದ್ದಾರೆ.
36 ಸೆಟ್ ರೈಲು ಬರಬೇಕಿದೆ
ನಮ್ಮ ಮೆಟ್ರೋ ಈಗಾಗಲೇ 216 ಬೋಗಿಗಳನ್ನು ಅಂದರೆ 36 ರೈಲು ಸೆಟ್‌ಗಳನ್ನು ತಯಾರಿಸಿ ಕೊಡುವಂತೆ ಚೀನಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ ಒಂದಷ್ಟು ರೈಲುಗಳು ಪಶ್ಚಿಮ ಬಂಗಾಳದ ಟಿಟಾಗರ್‌ನಲ್ಲಿ ಸಿದ್ಧಗೊಳ್ಳಲಿವೆ. ಕೊರೋನಾ ನಂತರ ಚೀನಾ ಕಂಪನಿಯು ಟಿಟಾಗರ್ ಕಂಪನಿಗೆ ಬಿಡಿಭಾಗ ಹಸ್ತಾಂತರಿಸುತ್ತಿದೆ.
ಒಪ್ಪಂದಂತೆ ಮೂರನೇ ರೈಲು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಪ್ರೊಟೋ ಟೈಪ್ ಮಾದರಿ ಮೆಟ್ರೋ ರೈಲುಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಒಪ್ಪಂದದ ಎಲ್ಲ ರೈಲುಗಳ ಪೈಕಿ 14-15 ರೈಲುಗಳು ಹಳದಿ ಮಾರ್ಗಕ್ಕೆ, ಉಳಿದವುಗಳಲ್ಲಿ ಗುಲಾಬಿ ಮಾರ್ಗ ಹಾಗೂ ಹಾಲಿ ಇರುವ ಮಾರ್ಗಗಳಲ್ಲೂ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications