Get Updates
Get notified of breaking news, exclusive insights, and must-see stories!

2026ಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ರೈಲಿಗೆ ಕಾಯುವ ಸಮಯ 8 ನಿಮಿಷಕ್ಕೆ ಇಳಿಕೆ

ಬೆಂಗಳೂರು: ಹೊಸ ವರ್ಷ 2026ಕ್ಕೆ ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ (ಆರ್‌.ವಿ ರಸ್ತೆ-ಬೊಮ್ಮಸಂದ್ರ) ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಗಲಿದೆ. ಸದ್ಯ 05 ಚಾಲಕ ರಹಿತ ಮೆಟ್ರೋ ರೈಲುಗಳು ಸಂಚಾರ ಸೇವೆ ನೀಡುತ್ತಿವೆ. ಜನವರಿ ಅಂತ್ಯಕ್ಕೆ ಒಟ್ಟು 08 ರೈಲುಗಳು ಸೇವೆಗೆ ನಿಯೋಜನೆಗೊಳ್ಳುವ ಸಾಧ್ಯತೆ ಇದೆ. ಆಗ ಮೆಟ್ರೋ ರೈಲುಗಳಿಗೆ ಪ್ರಯಾಣಿಕರು ಕಾಯುವ ಸಮಯ 8-10 ನಿಮಿಷಕ್ಕೆ ಇಳಿಕೆ ಆಗಬಹುದೆಂದು ಅಂದಾಜಿಸಲಾಗಿದೆ.

ಬೆಂಗಳೂರು ಮೆಟ್ರೋ ಹಳದಿ ಮಾರ್ಗದ 07ನೇ ರೈಲು ನಗರದ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಇಂದು ಆಗಮಿಸಿದೆ. 08ನೇ ರೈಲು ಸಹ ಕೊಲ್ಕತ್ತದ ಟಿಟಾಗರ್‌ನಿಂದ ಬೆಂಗಳೂರಿಗೆ ರವಾನಿಸುವ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಇದಕ್ಕೂ ಮೊದಲು ಡ್ರೈವರ್‌ಲೆಸ್ 06ನೇ ರೈಲು ಈಗಾಗಲೇ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್‌ನಿಂದ (TRSL) ನಗರಕ್ಕೆ ಬಂದಿದ್ದು, ವಿವಿಧ ಪರೀಕ್ಷೆಗಳಿಗೆ ಒಳಪಟ್ಟಿದೆ. ಪರೀಕ್ಷೆಗಳು ಮುಗಿಯುತ್ತಿದ್ದಂತೆ ಇದೇ ಡಿಸೆಂಬರ್ 22ರಂದು ಸೇವೆ ಆರಂಭಿಸಲಿದೆ.ಇದರ ನಡುವೆ ಹೊಸ ಎರಡು ರೈಲುಗಳ (7 ಮತ್ತು 8ನೇ ರೈಲು) ಆಗಮನ, ಸೇವೆಗೆ ಲಭ್ಯವಾಗುವುದರ ಪೂರ್ಣ ವಿವರ ಇಲ್ಲಿದೆ.

Namma Metro Yellow Line 7th metro Arrived Trains to Run Every 8-10 Minutes in 2026 January end

ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ದಿಕಿ (@ever_pessimist) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹೊಸ ಮೆಟ್ರೋ ರೈಲುಗಳ ಆಗಮಿಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಏಳನೇ ರೈಲು ಸೆಟ್ ಬೆಂಗಳೂರಿಗೆ ಆಗಮಿಸಿದ್ದು, ಇವುಗಳನ್ನು ಶೀಘ್ರವೇ ಜೋಡಿಸಿ ಹಳಿಗೆ ಇಳಿಸಲಾಗುತ್ತದೆ. ನಂತರ ಗುಣಮಟ್ಟ, ಭಾರ, ವಿದ್ಯುತ್ ಪ್ರವಹಿಸುವುದು ಸೇರಿದಂತೆ ಹಲವು ಪರೀಕ್ಷೆಗಳನ್ನು ಮೆಟ್ರೋ ಅಧಿಕಾರಿಗಳು ಮತ್ತು ಆಯುಕ್ತರು ನಡೆಸಲಿದ್ದಾರೆ. ಅದೆಲ್ಲ ಪೂರ್ಣಗೊಂಡು ಜನವರಿ ಆರಂಭದಲ್ಲಿ ವಾಣಿಜ್ಯ ಸೇವೆಗೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ಲಾನ್ ಮಾಡಿಕೊಂಡಿದೆ.

8ನೇ ಚಾಲಕ ರಹಿತ ಮೆಟ್ರೋ ಸೇವೆ

ಇನ್ನೂ ಕೊಲ್ಕತ್ತಾದ ಮೆಟ್ರೋ ತಯಾರಿಕೆ ಕಂಪನಿ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (TRSL) 8ನೇ ಚಾಲಕ ರಹಿತ ಮೆಟ್ರೋ ರೈಲನ್ನು ಡಿಸೆಂಬರ್ ಅಂತ್ಯದಲ್ಲಿ ರವಾನಿಸುವ ಭರವಸೆ ನೀಡಿದೆ. ಈ ರೈಲಿನ ಪರೀಕ್ಷೆಗಳು ಜನವರಿಯಲ್ಲಿ ಆರಂಭಗೊಂಡು ಅದೇ ತಿಂಗಳು ಪೂರ್ಣಗೊಳ್ಳಲಿದೆ. ಹೀಗಾಗಿ ಇದರ ಸೇವೆಯನ್ನು ಜನವರಿ ಅಂತ್ಯಕ್ಕೆ ನಿರೀಕ್ಷಿಸಬಹುದು.

ಎಲ್ಲವು ಅಂದುಕೊಂಡಂತೆ ಆದರೆ ಹಳದಿ ಮೆಟ್ರೋ ಮಾರ್ಗದಲ್ಲಿ ಪೀಕ್ ಹವರ್ ರೈಲುಗಳ ಆವರ್ತನ ಸಮಯ 8-10 ನಿಮಿಷಕ್ಕೆ ಇಳಿಕೆ ಆಗಲಿದೆ. ಸದ್ಯ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ರೋಗಳಿಗೆ ಕಾಯುವ ಸಮಯ 15-17 ನಿಮಿಷ ಇದೆ. ಆರನೇ ರೈಲು ಸೇವಾರಂಭದ ಬಳಿಕ ಈ ಸಮಯ 12ನಿಮಿಷಕ್ಕೆ ಹಾಗೂ ಜನವರಿ ಅಂತ್ಯಕ್ಕೆ ಎಂಟೂ ರೈಲುಗಳು ಸೇವೆ ಆರಂಭವಾದಲ್ಲಿ ಪ್ರತಿ ಮೆಟ್ರೋಗಳು 8 ರಿಂದ 10 ನಿಮಿಷಕ್ಕೆ ಒಂದರಂತೆ ಸಂಚರಿಸಲಿವೆ.

ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆ

ಹಳದಿ ಮಾರ್ಗ ಆರಂಭವಾದ ಮೊದಲ ದಿನ 50 ಸಾವಿರ ಪ್ರಯಾಣಿಕರು ಓಡಾಡಿದ್ದರು. ನಂತರದ ದಿನಗಳಲ್ಲಿ 70ಸಾವಿರಕ್ಕೂ ಅಧಿಕ ಮಂದಿ ಮೆಟ್ರೋ ಹಳದಿ ಮಾರ್ಗ ಅವಲಂಬಿಸಿದ್ದು ಕಂಡು ಬಂತು. ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಂಪರ್ಕ ಸುಧಾರಣೆಗೊಂಡು, ಸಮಯ ಉಳಿತಾಯವಾಗುತ್ತದೆ. ಹೀಗಾಗಿ 2026 ಫೆಬ್ರವರಿಯಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+