ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಜಮೀನಿಗೆ ಪ್ರತಿಯಾಗಿ ಸುರಂಗ ರಸ್ತೆ ನಿರ್ಮಿಸಲಿದೆ ಮೆಟ್ರೋ ನಿಗಮ

|
Google Oneindia Kannada News

ಬೆಂಗಳೂರು, ಮಾರ್ಚ್ 05: ಪೂರ್ವ ಪಶ್ಚಿಮ ಮೆಟ್ರೊ ಕಾರಿಡಾರ್ ಯೋಜನೆಗೆ ಮೆಟ್ರೊ ರೈಲುಗಳ ನಿರ್ವಹಣೆಗಾಗಿ ನಿರ್ಮಿಸಲಾಗುತ್ತಿರುವ ಚಲ್ಲಘಟ್ಟಡಿಪೋ ಗೆ ಜಮೀನು ಹೊಂದಿಸಿಕೊಳ್ಳಲು ಮೈಸೂರು ರಸ್ತೆ ತುದಿಯಲ್ಲಿ ಸುಮಾರು 200 ಮೀಟರ್ ಉದ್ದದ ಟನೆಲ್ ರಸ್ತೆಯನ್ನು ಬಿಡಿಎಗೆ ನಿರ್ಮಿಸಿಕೊಡಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ಬಿಡಿಎ ನಿರ್ಮಿಸುತ್ತಿರುವ 10.7 ಕಿಮೀ ಉದ್ದದ ರಸ್ತೆಗೆ ಪೂರಕವಾಗಿ 200 ಮೀಟರ್ ಉದ್ದದ ಟನೆಲ್ ರಸ್ತೆಯನ್ನು ಮೆಟ್ರೊ ನಿರ್ಮಿಸಲಿದೆ.ಈ ರಸ್ತೆಯು ಚಲ್ಲಘಟ್ಟ ಡಿಪೋದ ಮೂಲಕ ಹಾದು ಹೋಗಬೇಕಿದ್ದು, ಈ ಪ್ರದೇಶದಲ್ಲಿ ಟನೆಲ್ ಮೂಲಕ ರಸ್ತೆಸಾಗಲಿದೆ.

ಕೆಂಪೇಗೌಡ ಬಡಾವಣೆ: ವಿವಿಧ ಸೌಲಭ್ಯ ಕಾಮಗಾರಿಗೆ ಚಾಲನೆಕೆಂಪೇಗೌಡ ಬಡಾವಣೆ: ವಿವಿಧ ಸೌಲಭ್ಯ ಕಾಮಗಾರಿಗೆ ಚಾಲನೆ

ಇದಕ್ಕಾಗಿ ಕೆಂಗೇರಿ ಮಾರ್ಗಕ್ಕೆ ಹೊಂದಿಕೊಂಡು 17 ಎಕರೆ ಜಮೀನನ್ನು ಬಿಡಿಎಯಿಂದ ಚಲ್ಲಘಟ್ಟ ಡಿಪೋಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲಿದೆ.

Namma Metro to build Rs 80 cr tonnel road in land deal with BDA

ಮೈಸೂರು ರಸ್ತೆ-ಮಾಗಡಿ ರಸ್ತೆ ನಡುವೆ ರಸ್ತೆಕೆಂಪೆಗೌಡ ಲೇಔಟ್ ಮೂಲಕ ಹೋಗಲಿದೆ. ಈ ಪ್ರದೇಶದಲ್ಲಿ ಚಲ್ಲಘಟ್ಟ ಡಿಪೋ ಮೂಲಕವೇ ರಸ್ತೆ ಹಾದು ಹೋಗುವುದು ಅನಿವಾರ್ಯವಾಗಿದ್ದು, ಅದಕ್ಕಾಗಿ ಟನೆಲ್ ನಿರ್ಮಾಣ ಮಾಡಬೇಕಿದೆ. ಸುಮಾರು 200 ಮೀಟರ್ ಮಾರ್ಗವನ್ನು ಟನೆಲ್ ಮೂಲಕವೇ ರಸ್ತೆ ಸಾಗಬೇಕು. 200 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲದ ಟನೆಲ್ ನಿರ್ಮಾಣಕ್ಕೆ 17 ಎಕರೆ ಜಮೀನು ಬೇಕು.

ಈ ವಿಚಾರವನ್ನು ಬಿಡಿಎಗೆ ಈಗಾಗಲೇ ತಿಳಿಸಿದ್ದು, ಬಿಡಿಎ ಕೂಡ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಬಿಎಂಆರ್‌ಸಿಎಲ್ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಎಲ್.ಚೆನ್ನಪ್ಪಗೌಡರ್ ತಿಳಿಸಿದ್ದಾರೆ.

ಟನೆಲ್ ನಿರ್ಮಾಣಕ್ಕೆ 80 ಕೋಟಿ ರು. ವೆಚ್ಚವಾಗಲಿದೆ. ಹೀಗಾಗಿ ಚೆಲ್ಲಘಟ್ಟ ಡಿಪೋ ನಿರ್ಮಾಣಕ್ಕೆ ಬೇಕಾಗುವ ಜಮೀನನ್ನು ಬಿಡಿಎದಿಂದ ವಶಪಡಿಸಿಕೊಂಡು, ಟನೆಲ್ ನಿರ್ಮಾಣದ ವೆಚ್ಚವನ್ನು ಬಿಎಂಆರ್‌ಸಿಎಲ್ ಭರಿಸಲಿದೆ. ಹೀಗಾಗಿ ಅದಕ್ಕಾಗಿ ಬೇಕಾಗುವ ಜಮೀನಿನ ಹಣವನ್ನು ಬಿಡಿಎಗೆ ಪರಿಹಾರ ನೀಡುವ ಬದಲಾಗಿ ಟನೆಲ್ ನಿರ್ಮಾಣಕ್ಕೆ ಉಪಯೋಗಿಸಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಖಾರಿಗಳು ಹೇಳುತ್ತಿದ್ದಾರೆ.

ಬಿಡಿಎ ನಾಲ್ಕು ಪಥಗಳ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮೀಸುತ್ತಿದ್ದು, ಈಗಾಗಲೇ ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

English summary
The BMRCL will build a tonnel road towards the end of Mysuru road in order to facilitate construction of its Challaghatta depot. The depot is for stabling and maintaining trains of Phase-2 East-West corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X