Namma Metro: ನಮ್ಮ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಮಾಡ್ಬೇಕಾ: ನಿಮ್ಮ ಅಭಿಪ್ರಾಯ ತಿಳ್ಸಬೋದು ನೋಡಿ
Namma Metro Fare Hike: ನಮ್ಮ ಮೆಟ್ರೋ ಬೆಂಗಳೂರಿನ ಜೀವನ ನಾಡಿಯಾಗಿದೆ. ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋ ಬೆಂಗಳೂರಿಗೆ ವೇಗ ಹಾಗೂ ಉತ್ತಮ ಸೇವೆಯನ್ನು ನೀಡುತ್ತಿದೆ. ಇದೀಗ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಇದರ ಭಾಗವಾಗಿ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ನೀವು ಸಹ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಲ್ಲಿ ನಿತ್ಯವೂ ಲಕ್ಷಾಂತರ ಜನ ನಮ್ಮ ಮೆಟ್ರೋದ ಮೂಲಕ ಪ್ರಯಾಣಿಸುತ್ತಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಮೆಟ್ರೋ ರೈಲು ಟಿಕೆಟ್ ಬೆಲೆಯನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಮೆಟ್ರೋದ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇದರ ನಡುವೆ ಜನಾಭಿಪ್ರಾಯ ಸಂಗ್ರಹಿಸಲು ನಮ್ಮ ಮೆಟ್ರೋ ಆಡಳಿತ ಮಂಡಳಿ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಬಿಎಂಆರ್‌ಸಿಎಲ್ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಇದೀಗ ಈ ಅವಧಿಯನ್ನು ವಿಸ್ತರಿಸಿದೆ.

ಟಿಕೆಟ್ ಬೆಲೆ ಹೆಚ್ಚಳಕ್ಕೆ ಚಿಂತನೆ: ನಮ್ಮ ಮೆಟ್ರೋದ ಟಿಕೆಟ್ ಬೆಲೆಯು 10 ರೂಪಾಯಿಯಿಂದ ಪ್ರಾರಂಭವಾಗಿ 60 ರೂಪಾಯಿಯ ವರೆಗೆ ಇದೆ. ಅಂದರೆ ಇದು ಕನಿಷ್ಠ ಬೆಲೆಯಿಂದ ಗರಿಷ್ಠ ಬೆಲೆಯ ಬೆಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಿಲ್ಲ. ಇದೀಗ ಟಿಕೆಟ್ ದರವನ್ನು ಶೇ 20ರಷ್ಟು ಹೆಚ್ಚಳ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಏಳು ವರ್ಷದ ನಂತರ ಬೆಲೆ ಏರಿಕೆ: ಬೆಂಗಳೂರಲ್ಲಿ ನಮ್ಮ ಮೆಟ್ರೋ ಸೇವೆ ಪ್ರಾರಂಭವಾಗಿ ಬರೋಬ್ಬರಿ 13 ವರ್ಷಗಳಾಗಿವೆ. ಈ ಅವಧಿಯಲ್ಲಿ ಮೆಟ್ರೋ ಹಲವು ವಿಶೇಷತೆಗಳನ್ನು ನೀಡಿದೆ. ದೇಶದಲ್ಲೇ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿದೆ. ಮೆಟ್ರೋ ಟಿಕೆಟ್ ವಾಟ್ಸಪ್ ಮೂಲಕವೂ ತೆಗೆದುಕೊಳ್ಳಬಹುದಾದಂತಹ ಸೇವೆಗಳನ್ನು ಬಿಎಂಆರ್‌ಸಿಎಲ್ ನೀಡಿದೆ. ಇನ್ನು ಏಳು ವರ್ಷದಿಂದ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಮಾಡಿಲ್ಲ. ಏಳು ವರ್ಷಗಳ ನಂತರ ಟಿಕೆಟ್ ಬೆಲೆ ಹೆಚ್ಚಳದ ಪ್ರಸ್ತಾವನೆಯನ್ನು ಮಾಡಿದೆ. ಬಿಎಂಆರ್‌ಸಿಎಲ್‌ನ ಪ್ರಸ್ತಾವನೆಗೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ನೀವು ಸಹ ಅಭಿಪ್ರಾಯ ವ್ಯಕ್ತಪಡಿಸಬಹುದು: ಇನ್ನು ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಮಾಡುವ ಮುಂಚೆ ಸಾರ್ವಜನಿಕರಿಂದ ಈ ಬಗ್ಗೆ ಅಭಿಪ್ರಾಯ ಕೇಳುತ್ತಿದೆ. ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವುದಕ್ಕೆ ಅಕ್ಟೋಬರ್ 21ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸುವ ಅವಧಿಯನ್ನು ಅಕ್ಟೋಬರ್ 28ರವರಗೆ ವಿಸ್ತರಿಸಲಾಗಿದೆ. ನೀವು ಸಹ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ.
ಸಾರ್ವಜನಿಕರು ಅವರು ಅಭಿಪ್ರಾಯಗಳನ್ನು [email protected]ಗೆ ಮೇಲ್ ಮಾಡಬಹುದು ಅಥವಾ ವಾಟ್ಸಾಪ್ ಸಂಖ್ಯೆ 9448291173ಗೆ ನಿಮ್ಮ ಸಲಹೆಗಳನ್ನು ಕಳುಹಿಸಬಹುದು ಎಂದು ಬಿಎಂಆರ್‌ಸಿಎಲ್ ಹೇಳಿದೆ. ತಡವೇಕೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಸಾರ್ವಜನಿಕರ ಅಭಿಪ್ರಾಯದ ಮೇಲೆಯೇ ಬಿಎಂಆರ್‌ಸಿಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications